ತೆಲುಗು ನಿರ್ಮಾಪಕರ ವಿರುದ್ಧ ಪ್ರಿಯಾಮಣಿ ದೂರು ನೀಡಿದ್ದ್ಯಾಕೆ ಗೊತ್ತಾ?

ಬಹು ಭಾಷಾ ನಟಿ ಪ್ರಿಯಾ ಮಣಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ..ಇಡೀ ಸೌತ್ ಸಿನಿ ಇಂಡಸ್ಟ್ರಿಯಲ್ಲೇ ಸಾಕಷ್ಟು ಹೆಸರು ಮಾಡಿರೋ ಈ ಚೆಲುವೆ ಸಧ್ಯ ಫುಲ್ ಬ್ಯುಸಿ ಇರೋ ನಟಿಮಣಿ.ಇದೀಗ ಪ್ರಿಯಾಮಣಿ ತೆಲುಗಿನ ಫೇಮಸ್ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ.ಅರೆ ಇದ್ಯಾಕಪ್ಪಾ ಪ್ರಿಯಾಮಣಿ ಈ ರೀತಿ ಮಾಡಿದ್ರು.ಅಂತೀರಾ? ಈ ಸ್ಟೋರಿ ನೋಡಿ ಅದೇನು ಅನ್ನೋದು ನಿಮ್ಗೆ ಗೊತ್ತಾಗತ್ತೆ.

ad


ಪ್ರಿಯಾಮಣಿ.. ಸೌತ್ ಸಿನಿರಂಗದ ಸ್ಟಾರ್ ನಟಿ. ತನ್ನ ನಟನೆ ಮತ್ತು ಬ್ಯೂಟಿಯಿಂದ್ಲೇ ಕನ್ನಡ,ತೆಲುಗು,ಮಲಯಾಳಂ ಸಿನಿ ಇಂಡಸ್ಟ್ರಿಯಲ್ಲಿ ಸಖತ್ ಫೇಮಸ್ ಆಗಿರೋ ಚೆಲುವೆ.. ಬೋಲ್ಡ್ ನಟನೆಯಿಂದಲೇ ಎಲ್ಲರ ಗಮನ ಸೆಳೆಯುವ ಪ್ರಿಯಾಮಣಿ ಮದುವೆ ಬಳಿಕವೂ ಕನ್ನಡ,ತಮಿಳು ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹೌದು.., ಮದುವೆ ನಂತ್ರವೂ ಚಾರುಲತಾ ಬೆಡಗಿ ಪ್ರಿಯಾಮಣಿ ಸ್ಯಾಂಡಲ್​​​ವುಡ್​​​ನಲ್ಲಿ ‘ನನ್ನ ಪ್ರಕಾರ’ ಮತ್ತು ‘ಧ್ವಜ’ ಚಿತ್ರಗಳಲ್ಲಿ ನಟಿಸ್ತಾ ಇದ್ದಾರೆ. ಹಾಗೆ ತಮಿಳಿನ ದಶರಥ ಸಿನಿಮಾದಲ್ಲೂ ನಟಿಸ್ತಿದ್ದಾರೆ. ಇಷ್ಟೊಂದು ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರೋ ಪ್ರಿಯಾ ತೆಲುಗಿನ ಫೇಮಸ್ ನಿರ್ದೇಶಕ ಕಮ್ ನಿರ್ಮಾಪಕ ಪ್ರೇಮ್ ಆರ್ಯನ್
ವಿರುದ್ದ ದೂರು ನೀಡಿದ್ದಾರೆ.

ಅರೆ ಇದೇನಿದು.. ಪ್ರಿಯಾಮಣಿ ಯಾಕೆ ತೆಲುಗು ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ ಅಂತ ಯೋಚಿಸ್ತಿದ್ದಿರಾ? ಅದಕ್ಕೂ ಒಂದು ಕಾರಣ ಅಂಗುಲಿಕಾ ಸಿನಿಮಾ. ಇತ್ತಿಚೆಗಷ್ಟೆ ಇದೇ ಚಿತ್ರದ  ಟೀಸರ್ ಬಿಡುಗಡೆಯಾಗಿದೆ. ಇದೇ ಚಿತ್ರದ ನಿರ್ಮಾಪಕರ ವಿರುದ್ಧ ಪ್ರಿಯಾ ಮಣಿ ದೂರು ದಾಖಲಿಸಿದ್ದಾರೆ. ಹೌದು,ದೂರಿನ ಅನ್ವಯ ‘ಅಂಗುಲಿಕ’ ಚಿತ್ರದಲ್ಲಿ ಪ್ರಿಯಾಮಣಿ ನಟಿಸಿಲ್ಲ. ಆದ್ರೆ, ಪೋಸ್ಟರ್​​​​ನಲ್ಲಿ ಪ್ರಿಯಾ ಫೋಟೋ ಬಳಸಲಾಗಿದೆ. ಜೊತೆಗೆ ಇತ್ತಿಚೆಗೆ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು ಅದರಲ್ಲೂ ಪ್ರಿಯಾ ಫೋಟೋವನ್ನ ಬಳಸಿಕೊಂಡಿದ್ದಾರೆ. ಇದು ಯಾಕೆ ಎಂಬ ಅನುಮಾನ,ಪ್ರಶ್ನೆ, ಕುತೂಹಲ ಈಗ ಎಲ್ಲರನ್ನ ಕಾಡಿದೆ. ಇದನ್ನ ಪ್ರಶ್ನಿಸಿ ಪ್ರಿಯಾ ಕಲಾವಿದರ ಸಂಘದಲ್ಲಿ ದೂರು ದಾಖಲಿಸಿದ್ದಾರೆ.

ಇನ್ನೂ ಅಂಗುಲಿಕ 2013ರಲ್ಲಿ ಶುರುವಾಗಿದ್ದ ಸಿನಿಮಾ.ಈ ಸಿನಿಮಾದ ನಾಯಕಿ ಪ್ರಿಯಾ ಮಣಿ ಆಗಿದ್ರು.ಆದ್ರಿಂದ ಚಿತ್ರದ ಮೊದಲ ಶೂಟಿಂಗ್ ನಲ್ಲಿ ಪ್ರಿಯಾ ಕೂಡ ಭಾಗಿಯಾಗಿದ್ರು. ಆದ್ರೆ ಮಧ್ಯದಲ್ಲೇ ಚಿತ್ರದಿಂದ ಪ್ರಿಯಾಮಣಿ ಹೊರಬಂದಿದ್ರು. ಸಧ್ಯ ಈ ಬಗ್ಗೆ ದೂರು ನೀಡಿರೋ ಪ್ರಿಯಾಮಣಿ ಈ ಚಿತ್ರದಲ್ಲಿ ನಟಿಸಿಲ್ಲ ಎನ್ನುತ್ತಿದ್ದಾರೆ.ಆದ್ರೆ, ಚಿತ್ರತಂಡ ಮಾತ್ರ ಪೋಸ್ಟರ್, ಟ್ರೈಲರ್, ಎಲ್ಲರದಲ್ಲಿಯೂ ಪ್ರಿಯಾಮಣಿ ನಾಯಕಿ ಎಂದು ಪ್ರಚಾರ ಮಾಡ್ತಿದೆ. ಈಗ ಕಲಾವಿದರ ಸಂಘದ ಮೊರೆಹೋಗಿರುವ ಪ್ರಿಯಾಮಣಿ ನಷ್ಟ ಪರಿಹಾರ ಕೇಳ್ತಿದ್ದಾರೆ.