ಈಕೆ ನಟಿಸಿದ ಚಿತ್ರಗಳೆಲ್ಲ ಸೂಪರ್ ಹಿಟ್​- ಅದೃಷ್ಟವಂತೆ ಗುಳಿಕೆನ್ನೆ ಚೆಲುವೆ ಯಾರು ಗೊತ್ತಾ|?!

ಕೆನ್ನೆ ಮೇಲೆ ಮೂಡುವ ಡಿಂಪಲ್​​​​… ಬಟ್ಟಲು ಕಂಗಳು …. ದುಂಡು ಮುಗ.. ಮಲ್ಲಿಗೆ ನಗು…. ಮನೆ ಮಗಳ ಲುಕ್​​​​​​​​…. ಇಂಥದೊಂದು ಮುಗ್ಧ ಚೆಲುವಿನ ಅರಸಿ ರಚಿತಾ… ರಚಿತಾ ರಾಮ್​​…ಇವತ್ತು ಕನ್ನಡ ಸಿನಿಹೋಕರಿಗೆ ರಚಿತಾ ರಾಮ್​​ ಯಾರು ಅಂತ ಹೇಳುವ ಅವಶ್ಯಕತೆ ಖಂಡಿತಾ ಇಲ್ಲ. ಅಷ್ಟರಮಟ್ಟಿಗೆ ಈ ಹೆಣ್ಣುಮಗಳು ಕರುನಾಡಿನಲ್ಲಿ ಚಿರಪರಿಚಿತೆ. ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟು, ತೀರಾ ಕಡಿಮೆ ಅವಧಿಯಲ್ಲಿ ತುಂಬಾ ಖ್ಯಾತಿಯನ್ನು, ಯಶಸ್ಸನ್ನು ಬಗಲಲ್ಲಿ ಕಟ್ಟಿಕೊಂಡ ಕೆಲವೇ ಕೆಲವು ನಾಯಕಿಯ ಪೈಕಿ ರಚಿತಾ ರಾಮ್ ಅನ್ನುವ ಅಂಧಗಾತಿ ಕೂಡ ಒಬ್ಳು.

ad

ಇಂಡಸ್ಟ್ರಿಯಲ್ಲಿ ರಚಿತಾಗೆ ಅದೃಷ್ಟ ದೇವತೆ ಅನ್ನುವ ಬಿರುದೂ ಕೂಡ ಇದೆ. ಈ ಹೆಸರು ರಚಿತಾ ರಾಮ್​​ಗೆ ಸುಮ್​​ ಸುಮ್ಮೆ ಬಂದಿದಲ್ಲ. ರಚಿತಾ ರಾಮ್​​ ನಾಯಕಿಯಾಗಿ ನಟಿಸಿದ ಸಿನಿಮಾಗಳೆಲ್ಲಾ ಭರ್ಜರಿ ಹಿಟ್​ ಆಗಿದೆ. ಈ ಕಾರಣದಿಂದ್ಲೇ ಈ ಡಿಂಪಲ್​​ ರಾಣಿಗೆ ಅದೃಷ್ಟ ದೇವತೆ ಅನ್ನುವ ಹೆಸರು ಬಂದಿರೋದು. ಅಂದಹಾಗೆ ಬಿಂದಿಯಾ ರಾಮ್‌ ಎಂಬ ಹೆಸರಿನಲ್ಲಿ “ಅರಸಿ’ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾ ರಚಿತಾ ರಾಮ್‌ ನಾಯಕಿಯಾಗಿದ್ದು “ಬುಲ್‌ ಬುಲ್‌’ ಚಿತ್ರದ ಮೂಲಕ. ನಿರ್ದೇಶಕ ಎಂ ಡಿ ಶ್ರೀಧರ್​ ಚಿತ್ರಕ್ಕೆ ಸೂಕ್ತ ನಾಯಕಿಯ ಹುಡುಕಾಟದಲ್ಲಿದ್ರು. ಸಿನಿಮಾ ತಂಡಕ್ಕೆ ರಚಿತಾ ರಾಮ್​​ ನಾಯಕಿ ಪಾತ್ರಕ್ಕೆ ಪರ್ಫೆಕ್ಟ್​ ಅಂತ ಅನ್ನಿಸಿದ್ದು ಸ್ಕ್ರೀನ್​ ಟೆಸ್ಟ್​​ನಲ್ಲಿ.ರಚಿತಾ ರಾಮ್​ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟು ಭರ್ತಿ 5 ವರ್ಷ ಆಗಿದೆ. ಈ 5 ಐದು ವಸಂತಗಳಲ್ಲಿ ದರ್ಶನ್, ಸುದೀಪ್, ಪುನೀತ್, ಶ್ರೀಮುರಳಿ, ಗಣೇಶ್, ದುನಿಯಾ ವಿಜಯ್, ಧ್ರುವ ಸರ್ಜಾ ಹೀಗೆ ಕನ್ನಡದ ಎಲ್ಲಾ ಬಿಗ್​​ ಸ್ಟಾರ್ಸ್​ ಜೊತೆ ತೆರೆಹಂಚಿಕೊಂಡ ಹೆಗ್ಗಳಿಕೆ ಗುಳಿಕೆನ್ನೆ ಬೆಡಗಿಯದ್ದು. ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯರಿಗೆ ಲೈಫ್​ ಕಮ್ಮಿ.. ಆದ್ರೆ ರಚಿತಾ ಅದಕ್ಕೆ ಅಪವಾದ. 5 ವರ್ಷಗಳ ಬಳಿಕವೂ ಆಕೆಗೆ ಮಾರ್ಕೆಟ್​ ಇದೆ. ಇದೀಗ ರಚಿತಾ ನಾಯಕಿಯಾಗಿರುವ 4 ಸಿನಿಮಾಗಳ ಕೆಲಸ ನಡೆಯುತ್ತಿದೆ. ವಿಶೇಷ ಅಂದ್ರೆ ಪ್ರತಿ ಸಿನಿಮಾದಲ್ಲೂ ಡಿಫರೆಂಟ್​​ ಕ್ಯಾರೆಕ್ಟರ್​ ಇದೆ.

ನೀನಾಸಂ ಸತೀಶ್​ ನಟನೆಯ ಅಯೋಗ್ಯ ಚಿತ್ರದಲ್ಲಿ ರಚಿತಾ ಪಕ್ಕಾ ಮಂಡ್ಯದ ಹುಡುಗಿ. ಮಂಡ್ಯ ಸ್ಟೈಲ್​ ಡೈಲಾಗ್​, ಹಾವಭಾವ, ವರ್ತನೆ ಎಲ್ಲಾ ಇರಲಿದೆ. ಇನ್ನು ಸೀತಾರಾಮ ಕಲ್ಯಾಣದಲ್ಲಿ ಹಳ್ಳಿಯ ಮುಗ್ಧ ಹುಡುಗಿ. ಇಲ್ಲಿ ಕಂಪ್ಲೀಟ್​ ಡಿ ಗ್ಲ್ಯಾಮರ್​ ಲುಕ್​ನಲ್ಲಿ ಚಂದನವನದ ಮಾತಿನ ಮಲ್ಲಿ ಕಂಗೊಳಿಸ್ತಾ ಇದ್ದಾಳೆ. ಚಕ್ರವ್ಯೂಹ ಸಿನಿಮಾ ಬಳಿಕ ಪುನೀತ್​​ ರಾಜ್​​ಕುಮಾರ್​​ ಮತ್ತು ರಚಿತಾ ನಟ ಸಾರ್ವಭೌಮ ಸಿನಿಮಾದಲ್ಲಿ ಸ್ಕ್ರೀನ್​ ಶೇರ್​ ಮಾಡ್ತಿದ್ದಾರೆ. ಇಲ್ಲಿ ಡಿಂಪಲ್​ ಕ್ವೀನ್​​ ಅತ್ತ ಡಿ ಗ್ಲ್ಯಾಮರೂ ಅಲ್ಲದ ಗ್ಲ್ಯಾಮರ್​ ಅಲ್ಲದ ಕ್ಯಾಶುವಲ್ ಗೆಟಪ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಿಯಲ್​ ಸ್ಟಾರ್​ ನಟನೆಯ ಐ ಲವ್​ ಯೂ ಚಿತ್ರದಲ್ಲಿ ಮಾತ್ರ ನೀವೂ ಎಂದೂ ನೋಡಿರದ ರಚಿತಾ ಕಾಣಿಸಲಿದ್ದಾರೆ. ಜಾನಿ ಜಾನಿ ಎಸ್​ ಪಪ್ಪಾ ಸಿನಿಮಾದಲ್ಲಿ ರಚಿತಾ ಒಂದಿಷ್ಟು ಗ್ಲ್ಯಾಮರ್​ ಅವತಾರದಲ್ಲಿ ಮಿಂಚಿದ್ರು. ಆದ್ರೆ ಉಪ್ಪಿ ಜೊತೆ ಪಕ್ಕಾ ಮಾಡರ್ನ್​ ಸುಂದರಿಯಾಗಲಿದ್ದಾರೆ. ಟಿ ರಿಯಾಲಿಟಿ ಶೋದಲ್ಲಿ ಕೂಡ ಬ್ಯುಸಿಯಾಗಿರೋ ರಚಿತಾ ಈಗ ಸ್ಯಾಂಡಲ್​ವುಡ್​ನ ನಂಬರ್​​ ವನ್​ ನಟಿ. ಅಂದಹಾಗೆ ಬುಲ್​ ಬುಲ್​​ ಹುಡುಗಿಗೆ ಇಷ್ಟು ದೊಡ್ಡ ಸಕ್ಸಸ್​ ಸಿಗೋದಕ್ಕೆ ಕಾರಣ ಅಭಿನಯ. ಎಂಥದೇ ಪಾತ್ರ ಕೊಟ್ಟರೂ ಕೂಡ ಲೀಲಾಜಾಲವಾಗಿ ನಿಭಾಯಿಸುವ ಛಾತಿ ರಚಿತಾಗಿದೆ.
ಗೆದ್ದ ತಕ್ಷಣ ಹಣಕ್ಕಾಗಿ ಸಿಕ್ಕ ಸಿಕ್ಕಾ ಪಾತ್ರಗಳನ್ನು ಮಾಡುವ ನಾಯಕಿಯರ ಪೈಕಿ ರಚಿತಾ ಮಾತ್ರ ತುಂಬಾ ಭಿನ್ನ. ಬಹುಶ: ಅಳೆದು ತೂಗಿ ಪಾತ್ರ ಒಪ್ಪಿಕೊಳ್ಳುವಂತ ಒಂದು ಸಣ್ಣ ಸ್ವಾರ್ಥವೂ ಇಲ್ಲದೆ ಹೋದ್ರೆ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯೋದಕ್ಕೆ ಸಾಧ್ಯವೇ ಇಲ್ಲ. ಒಟ್ನಲ್ಲಿ ರಚಿತಾ ಒಂದರ ಹಿಂದ ಒಂದು ಸಿನಿಮಾಗಳಲ್ಲಿ ಡಿಫರೆಂಟ್​ ಅವತಾರಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.