ಬಿಗ್ ಬಾಸ್ ಕ್ಯಾಮಾರಕ್ಕೆ ವಂಚಿಸಿ ಲವ್ ಮಾಡಿದ್ರಾ ಚಂದನ್ ಶೆಟ್ಟಿ – ನಿವೇದಿತಾ ಗೌಡ ? ಸ್ವೀಟ್ ಸ್ನೇಹಿತೆಗೆ ಚಂದನ್ ನೀಡಿದ್ರು ಸರ್ಪ್ರೈಸ್ !

Bigg Boss: Chandan Shetty's Surprise visit to Niveditha House.

ಬಿಗ್ ಬಾಸ್ ಮನೆ ಎನ್ನುವುದು ಕ್ಯಾಮರಾಗಳಿಂದ ಆವೃತವಾದ ತೆರೆದ ಪುಸ್ತಕ. 

ಅಲ್ಲಿ ಏನೇ ನಡೆದರೂ ಲಕ್ಷಾಂತರ ಕಣ್ಣುಗಳು ಗಮನಿಸುತ್ತಿರುತ್ತದೆ. ಇಂತಹ ಬಿಗ್ ಬಾಸ್ ಕ್ಯಾಮಾರ ಕಣ್ಣು ತಪ್ಪಿಸಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಲವ್ ಮಾಡಿದ್ದರೇ ? ಹೌದು ಎನ್ನುತ್ತದೆ ಸಿನಿ ಗಾಸಿಪ್ ದುನಿಯಾ ! ಬಿಗ್‌ಬಾಸ್‌ ಮನೆಯಲ್ಲಿ ದಿವಾಕರ್‌, ಚಂದನ್‌, ಸಮೀರ್ ಆಚಾರ್ಯ ಹಾಗೂ ನಿವೇದಿತಾ ಉತ್ತಮ ಸ್ನೇಹಿತರಾಗಿದ್ರು. ಸದ್ಯ ಬಿಗ್‌ ಮನೆಯಿಂದ ಹೊರ ಬಂದಿರುವ ಈ ನಾಲ್ವರ ಮಧ್ಯೆ ಅದೇ ಸ್ನೇಹ ಮುಂದುವರೆದಿದೆ. ಆದರೆ, ಬಿಗ್‌ಬಾಸ್‌ ವಿನ್ನರ್‌ ಚಂದನ್ ಹಾಗೂ ನಿವೇದಿತಾ ಗೌಡ ಅವ್ರು ಪರಸ್ಪರ ಪ್ರೀತಿ ಮಾಡ್ತಿದ್ದಾರೆ.

 

 

ಮದುವೆ ಮಾಡಿಕೊಳ್ಳೋ ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದ್ದವು. ಆದ್ರೆ ಅದೆಲ್ಲಾ ರೂಮರ್​​ ಎನ್ನಲಾಗ್ತಿತ್ತು. ಇದೀಗ ಸ್ವತಃ ಚಂದನ್ ಹಾಗೂ ನಿವೇದಿತಾ ತಮ್ಮ ಮದುವೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನ ನಿವೇದಿತಾ ಮನೆಗೆ ಚಂದನ್​ ಶೆಟ್ಟಿ ನಿನ್ನೆ ಸರ್‌ಪ್ರೈಸ್‌ ಭೇಟಿ ನೀಡಿದ್ದರು. ಫೇಸ್‌ಬುಕ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡ ಈ ಜೋಡಿಯನ್ನು ವ್ಯಕ್ತಿಯೊಬ್ಬರು ನಿಮ್ಮ ಮದುವೆ ಯಾವಾಗ ಎಂದು ನೇರವಾದ ಪ್ರಶ್ನೆ ಮಾಡಿದ್ರು. ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಚಂದನ್‌, ನಾವು ಒಳ್ಳೆಯ, ಸ್ವೀಟ್ ಸ್ನೇಹಿತರು. ಅಂತಹ ಯೋಚನೆಗಳು ನಮ್ಮಲ್ಲಿಲ್ಲ ಎಂದ್ರು.