ಭಾರತ್ ಫರ್ಸ್ಟ್ ಟ್ರೇಲರ್‌ ರಿಲೀಸ್! ಓಲ್ಡ್‌ ಏಜ್ ಗೆಟಪ್ ನಲ್ಲಿ ಮೋಡಿ ಮಾಡ್ತಿದ್ದಾರೆ ಸಲ್ಮಾನ್ ಖಾನ್!!

ಬಾಲಿವುಡ್ ನ ಬ್ಯಾಡ್ ಬಾಯ್ ಎಂದು ಹೆಸರು ಪಡೆದಿರುವ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದ ಟ್ರೈಲರ್ ಸದ್ಯ ರಿಲೀಸ್ ಆಗಿದೆ. ಚಿತ್ರದ ಫಸ್ಟ್ ಲುಕ್ ನಿಂದಲೇ ಭಾರಿ ಕುತೂಹಲ ಮೂಡಿಸಿದ್ದ ಭಾರತ್ ಚಿತ್ರ ಈಗ ಟ್ರೈಲರ್ ಲಾಂಚ್ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಚಿತ್ರದ ಬಗೆಗೆ ಇನ್ನಷ್ಟು ಕುತೂಹಲ ಮೂಡಿಸಿದೆ.

ad

ಕೆಲದಿನಗಳ ಹಿಂದೆ ಸಲ್ಲುವಿನ ಭಾರತ್ ಚಿತ್ರದ ಫಸ್ಟ್ ಲುಕ್ ನಲ್ಲಿ ಮೊದಲ ಬಾರಿ ವಯಸ್ಸಾದ ಗೆಟಪ್ ನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಸದ್ಯ ಚಿತ್ರತಂಡ ‘ಭಾರತ್ ಚಿತ್ರದ ಟ್ರೈಲರ್ ನನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

‘ಭಾರತ್’ ಚಿತ್ರ ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಸಲ್ಮಾನ್ ಖಾನ್ ಮೊದಲ ಬಾರಿಗೆ ಐದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಆರು ದಶಕಗಳ ಕಾಲ ನಡೆಯುವ ಘಟನೆಯನ್ನು ಕೇವಲ ಒಂದು ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ. 1964 ರಿಂದ ಪ್ರಾರಂಭವಾಗುವ ಈ ಕತೆ 2010ರಲ್ಲಿ ಮುಕ್ತಾಯವಾಗುತ್ತದೆ. ಈ ಎಲ್ಲಾ ಕಾಲಘಟ್ಟಗಳಿಗೂ ಹೊಂದಿಕೊಳ್ಳವ ಹಾಗೆ ಸಲ್ಮಾನ್ ಗೆಟಪ್ ಬದಲಾಯಿಸಿಕೊಂಡಿದ್ದಾರೆ.

ಭಾರತ್ ಚಿತ್ರದಲ್ಲಿ ರೋಟ್ರೋ ಲುಕ್ ನಲ್ಲಿ ಮಿಂಚಿರುವ ಸಲ್ಮಾನ್ ಗೆ ನಟಿ ಕತ್ರೀನಾ ಕೈಫ್ ನಾಯಕಿಯಾಗಿ ಸಾಥ್ ನೀಡಿದ್ದಾರೆ. ಪಕ್ಕಾ ದೇಸಿ ಲುಕ್ ನಲ್ಲಿ ಕಂಗೋಳಿಸುತ್ತಿರುವ ಕತ್ರೀನಾ ಅಭಿಮಾನಿಗಳಿಗೆ ಹೆಚ್ಚು ಗಮನ ಸಳೆಯುತ್ತಿದ್ದು, ಚಿತ್ರದಲ್ಲಿ ಇವರ ಪಾತ್ರದ ಬಗೆಗೆ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲವನ್ನು ಕೆರಳುಸುತ್ತಿದೆ. ಚಿತ್ರದಲ್ಲಿ ನಟಿ ತಬು, ಜಾಕಿ ಶ್ರಾಫ್, ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದಲ್ಲಿ ಮತ್ತಷ್ಟು ದೊಡ್ಡ ತಾರಾಬಳಗವೆ ಇದೆ. ಪ್ರತಿಯೊಬ್ಬರ ಪಾತ್ರಗಳು ಗಮನಾರ್ಹವಾಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಈ ಹಿಂದೆ ಏಕ್ ತಾ ಟೈಗರ್ ಚಿತ್ರದಲ್ಲಿ ಅಭಿನಯಿಸಿದ ಕ್ಯಾಟ್ ಮತ್ತು ಸಲ್ಲು ಸಿನಿಮಾ ಬಾಕ್ಸ ಆಫಿಸ್ ಕೊಳ್ಳೆ ಹೊಡೆಯುವ ಮೂಲಕ ಬಾಲಿವುಡ್ ನಲ್ಲಿ ಬಾರಿ ಸದ್ದು ಮಾಡಿತ್ತು. ನಂತರ ಈ ಜೋಡಿಯಲ್ಲಿಯೇ ಮತ್ತೊಮ್ಮೆ ಟೈಗರ್ ಜಿಂದಾ ಹೈ ಚಿತ್ರ ತೆರೆ ಮೇಲೆ ಬಂದು ಆ ಚಿತ್ರವು ಸಹ ಬಾಲಿವುಡ್ ನಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಸದ್ಯ ಮತ್ತೊಮ್ಮೆ ಒಂದಾಗಿರುವ ಭಾರತ್ ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಜೋಡಿ ಪ್ರೇಕ್ಷಕರಿಗೆ ಹೇಗೆ ಮೋಡಿ ಮಾಡುತ್ತಾರೆ ಎಂಬುವುದನ್ನು ಚಿತ್ರ ಬಿಡುಗಡೆಯ ನಂತರ ಕಾದು ನೋಡಬೇಕಾಗಿದೆ.