ಕಿರುತರೆ ನಟ ರಾಜೇಶ್ ಧ್ರುವ ವಿರುದ್ಧ “ವರದಕ್ಷಿಣೆ ಕಿರುಕುಳ” ಆರೋಪ ಹಿನ್ನೆಲೆ ದೂರು ದಾಖಲು

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಅಗ್ನಿಸಾಕ್ಷಿ ಧಾರಾವಾಹಿಯ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ.
ವರದಕ್ಷಿಣೆ ತರುವಂತೆ ಧ್ರುವ ಕಿರುಕುಳ ನೀಡಿದ್ದಾರೆ. ಮನೆಯಿಂದ ಹೊರಹಾಕಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಧ್ರುವ ಪತ್ನಿ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಧ್ರುವ ವಿರುದ್ಧ ಕೆ.ಎಸ್ ಪೊಲೀಸ್ ಠಾಣೆಯಲ್ಲಿ ಶೃತಿ ಪ್ರಕರಣ ದಾಖಲಿಸಿದ್ದಾರೆ.

2017ರಲ್ಲಿ ಯುವತಿಯನ್ನು ಮದುವೆಯಾಗಿದ್ದ ಧ್ರುವ, ನಂತರ ನನಗೆ ಮದುವೆಯಾಗಿಲ್ಲ ಎಂದು ಹೇಳಿಕೊಂಡು ಬೇರೆ ಯುವತಿಯರ ಜೊತೆ ಆಫೇರ್ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಲಿವಿಂಗ್ ಟುಗೆದರ್ ರಿಲೇಷನ್​ಶಿಪ್​​​ನಲ್ಲಿದ್ದ ಈ ಜೋಡಿ ನಂತರ ಮದುವೆಯಾಗಿ, ನಟ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು ಎಂದು ತಿಳಿದುಬಂದಿದೆ.
ಸದ್ಯ ತಕಧಿಮಿತ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರೋ ಧ್ರುವ, ಬೆಂಗಳೂರಿನ ಕುಮಾರಸ್ವಾಮಿ ಲೇಔಟ್​​ ಮನೆಯಿಂದ ಪತ್ನಿಯನ್ನು ಹೊರಹಾಕಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಹಿನ್ನೆಲೆ ಕುಮಾರಸ್ವಾಮಿ ಲೇಔಟ್​ ಪೊಲೀಸ್ ಠಾಣೆಯಲ್ಲಿ ಧ್ರುವ ಪತ್ನಿ ಪ್ರಕರಣ ದಾಖಲಿಸಿದ್ದಾರೆ.