ಚಿರಂಜೀವಿ, ಅಮಿತಾಬ್ ಬಚ್ಚನ್,ಸುದೀಪ ಒಂದಾಗ್ತಿರೋ ಚಿತ್ರ ಯಾವುದು ಗೊತ್ತಾ?!

ಈ ದೇಶ ಕಂಡ ಟಾಪ್​​​ ನಾಯಕ ನಟರಲ್ಲಿ ಚಿರಂಜೀವಿ ಕೂಡ ಒಬ್ಬರು. ಟಾಲಿವುಡ್​ನಲ್ಲಿ ಇದುವರೆಗೆ 150 ಸಿನಿಮಾಗಳನ್ನು ಮಾಡಿ ದೇವರಂತೆ ಮೆರೆದ ನಟ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೆಗಾ ಸ್ಟಾರ್​​​ ಕೂಡ ಒಬ್ರು. ವಯಸ್ಸು ಐವತ್ತು ದಾಟಿದ್ಮೇಲೆ ಚಿರು ರಾಜಕೀಯದ ಕಡೆ ಮನಸ್ಸು ಮಾಡಿದ್ರು. ಪ್ರಜಾರಾಜ್ಯಂ ಪಕ್ಷ ಕಟ್ಟಿದ್ರು. ಇನ್ನು ಸಿನಿಮಾಕ್ಷೇತ್ರವನ್ನ ತೊರೆದೇ ಬಿಟ್ರು ಅಂತ ಅಭಿಮಾನಿಗಳು ನಂಬಿದ್ರು…. ಚಿರಂಜೀವಿ ಕೂಡ ಇನ್ನು ಸಿನಿಮಾ ಮಾಡಲ್ಲಾ ಅಂತ ಹೇಳಿಬಿಟ್ಟಿದ್ರು. ಆದ್ರೆ ದಶಕದ ಬಳಿಕ ಖೈದಿ ನಂಬರ್ 150 ಚಿತ್ರದಲ್ಲಿ ಮತ್ತೆ ನಾಯಕ ನಟನಾಗಿ ಬಣ್ಣ ಹಚ್ಚಿದ್ರು.

ಇದೀಗ ಚಿರು ನಟನೆಯ 151ನೇ ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಹೊಸ ಸಿನಿಮಾದಲ್ಲಿ ಚಿರು ಸ್ವಾತಂತ್ರ ಹೋರಾಟಗಾರ ಉಯ್ಯಾಲವಾಡು ನರಸಿಂಹ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಈ ಮೊದಲೇ ರಿವೀಲ್ ಆಗಿತ್ತು. ಚಿರು ಹುಟ್ಟುಹಬ್ಬದ ಸ್ಪೆಷಲ್​ ಆಗಿ ಚಿತ್ರತಂಡ ಹೊಸ ಸಿನಿಮಾದ ಟೈಟಲ್​ ಮತ್ತು ಫಸ್ಟ್​ಲುಕ್​ ರಿಲೀಸ್​ ಮಾಡಿತ್ತು. ವಿಶೇಷ ಅಂದ್ರೆ ಚಿತ್ರಕ್ಕೆ ಸೈರಾ ನರಸಿಂಹ ರೆಡ್ಡಿ ಟೈಟಲ್​ ಫಿಕ್ಸ್​ ಆಗಿತ್ತು. ಜೊತೆಗೆ ಫಸ್ಟ್​​ ಲುಕ್​ ಪೋಶನ್​ ಮೋಸ್ಟರ್​ ಕೂಡ ಕುತೂಹಲ ಹುಟ್ಟಿಸಿತ್ತು.

 

ಮೋಶನ್​ ಪೋಸ್ಟರ್​ ಜೊತೆ ಸಿನಿಮಾ ತಂಡ ಕಾಸ್ಟ್​ & ಕ್ರ್ಯೂ ಟೀಸರ್​ ಕೂಡ ರಿಲೀಸ್​ ಮಾಡಿತ್ತು. ಸಿನಿಮಾದಲ್ಲಿ ಯಾರೆಲ್ಲ ನಟಿಸ್ತಾರೆ ಮತ್ತು ಟೆಕ್ನಿಷಿಯನ್ಸ್​ ಯಾರು ಅನ್ನೋದು ಕೂಡ ರಿವೀಲ್​ ಮಾಡಿತ್ತು. ದೊಡ್ಡ ತಾರಬಳಗವನ್ನೇ ಸಿನಿಮಾ ಹೊಂದಿದೆ ಅನ್ನುವ ಕ್ಲೂ ಸಿಕ್ಕಿತ್ತು
ಸ್ವಾತಂತ್ರ್ಯ ಯೋಧನ ಕುರಿತಾದ ಬಿಗ್‌ ಬಜೆಟ್‌ ಚಿತ್ರದಲ್ಲಿ ಮೆಗಾಸ್ಟಾರ್‌ ಚಿರಂಜೀವಿ ಜೊತೆ ಬಿಗ್‌ ಬಿ ಅಮಿತಾಭ್​ ಬಚ್ಚನ್‌ ಕೂಡ ಒಂದು ಇಂಪಾರ್ಟೆಂಟ್​ ರೋಲ್​​ ಪ್ಲೇ ಮಾಡಲಿದ್ದಾರೆ.

ಈ ಚಿತ್ರದಲ್ಲಿ ಕನ್ನಡ ಮತ್ತು ತೆಲುಗು ಮಾತನಾಡುವ ಪಾತ್ರದಲ್ಲಿ ಕಿಚ್ಚ ಸುದೀಪ್​ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಚಿತ್ರತಂಡ ತನ್ನ ಟೀಸರ್​​​ನಲ್ಲಿ ಅದನ್ನು ಹೇಳಿದೆ. ಇದೀಗ, ಚಿರಂಜೀವಿ ಮತ್ತು ಅಮಿತಾಬ್ ಬಚ್ಚನ್ ಅವರ ಲುಕ್ ಬಹಿರಂಗವಾಗಿದೆ. ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್, ಚಿರಂಜೀವಿ ಅವರ ಗುರುಗಳ ಪಾತ್ರವನ್ನ ನಿಭಾಯಿಸುತ್ತಿದ್ದಾರೆ. ನೀರವ್’ ಎಂಬ ಪಾತ್ರದಲ್ಲಿ ಅಮಿತಾಬ್ ಬಣ್ಣ ಹಚ್ಚಿದ್ದು, ಬಿಳಿ ಗಡ್ಡ ಬಿಟ್ಟಿರೋ ಅವರ ಗಮನ ಸೆಳೆಯುತ್ತಿದೆ.

 

ಈ ಫೋಟೋಗಳನ್ನ ಸ್ವತಃ ಅಮಿತಾಬ್ ಬಚ್ಚನ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ”ಚಿರಂಜೀವಿ ಜೊತೆಯಲ್ಲಿ ಅಭಿನಯಿಸುವುದು ಗೌರವ ತಂದಿದೆ” ಎಂದಿದ್ದಾರೆ.ಚಿರುಗೆ ನಾಯಕಿಯಾಗಿ ನಯನಾತಾರ ಕಾಣಿಸಿಕೊಂಡಿದ್ದಾರೆ. ರೇಸ್‌ ಗುರಮ್‌’ ಹಾಗೂ ‘ಕಿಕ್‌’ ಖ್ಯಾತಿಯ ಸುರೇಂದ್ರ ರೆಡ್ಡಿ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ. ಸಂಗೀತ ಮಾಂತ್ರಿಕ ಎ ಆರ್​ ರೆಹಮಾನ್​ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಚಿರು ಪುತ್ರ ರಾಮ್​ ಚರಣ್​ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಒಟ್ನಲ್ಲಿ ಟಾಲಿವುಡ್​ ಮೆಗಾಸ್ಟಾರ್​ ನಟನೆಯ 151ನೇ ಸಿನಿಮಾ ಟಾಲಿವುಡ್​ನಲ್ಲಿ ಭರ್ಜರಿ ಕುತೂಹಲ ಹುಟ್ಟಿಸಿದೆ. ಚಿರು ಫ್ಯಾನ್ಸ್​ ಸಿಕ್ಕಾಪಟ್ಟೆ ಎಕ್ಸೈಟ್​ ಆಗಿದ್ದಾರೆ.