ಟಿಟೌನ್​​ಗೆ ಎಂಟ್ರಿಯಾದ ಡಾಲಿ ಧನಂಜಯ್​- ಜೂನ್​​​ 20 ಕ್ಕೆ ಫರ್ಸ್ಟ್​ ಲುಕ್​ ರಿಲೀಸ್​!

ಟಗರು’ ಸಿನಿಮಾ ನೋಡಿ ಸಂತಸ ವ್ಯಕ್ತ ಪಡಿಸಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮ ನಟ ಧನಂಜಯ ನಟನೆಯನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ರು. ಅಲ್ಲದೆ ಸಿನಿಮಾ ನೋಡಿದ ಸಂದರ್ಭದಲ್ಲಿ ಡಾಲಿಗಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಇದೀಗ ಆರ್​ಜಿವಿ ಮತ್ತು ಡಾಲಿ ಕಾಂಬಿನೇಶನ್​ ಚಿತ್ರಕ್ಕೆ ಎಲ್ಲಾ ಸಿದ್ದತೆ ನಡೆದಿದೆ. ಈ ಬಗ್ಗೆ ಮತ್ತಷ್ಟು ಡೀಟೈಲ್ಸ್​ ಇಲ್ಲಿದೆ.

ad

ಸ್ಯಾಂಡಲ್​​ವುಡ್​​​ನಲ್ಲಿ ಯಂಗ್​ & ಎನರ್ಜಿಟಿಕ್​​​ ​​ವಿಲನ್​​​ಗಳ ಕೊರತೆ ಇದೆ ಅನ್ನುವ ಮಾತು ಕೇಳುತ್ತಲೇ ಇತ್ತು. ಆದ್ರೆ ಇದೀಗ ಡೈರೆಕ್ಟರ್​​ ಸ್ಪೆಷಲ್​​ ಹುಡ್ಗ ಧನಂಜಯ್​​ ಈಗ ಸ್ಯಾಂಡಲ್​ವುಡ್​​ನ ಹೊಸ ತಲೆಮಾರಿನ ಖಡಕ್​ ಖಳನಾಗಿ​ ಆಗಿ ಬದಲಾಗಿರೋದು ನಿಮ್ಗೆ ಗೊತ್ತೇ ಇದೆ. ಧನಂಜಯ್​ ಯಾವಾಗ ಟಗರು ಸಿನಿಮಾದ ಡಾಲಿ ಪಾತ್ರಕ್ಕೆ ಓಕೆ ಅಂದ್ರೋ ಆ ಕ್ಷಣದಿಂದ ಈ ಹುಡ್ಗನ ಅದೃಷ್ಟವೇ ಬದಲಾಗಿತ್ತು. ಟಗರು ಭರ್ಜರಿ ಹವಾ ಎಬ್ಬಿಸಿದೆ. ಈ ಸಿನಿಮಾದಲ್ಲಿ ಧನಂಜಯ್​​ ಡಾಲಿ ಅನ್ನುವ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ರು.ನೆಗೆಟಿವ್​​ ಶೇಡ್​​​ನಲ್ಲಿ ಧನಂಜಯ್ ಕೊಟ್ಟ ಖಡಕ್​​​ ಲುಕ್ ನೋಡಿ ಇಡೀ ಸ್ಯಾಂಡಲ್​ವುಡ್​​​ ಫಿದಾ ಆಗಿತ್ತು. ಫ್ಯಾನ್ಸ್​​​ ಥ್ರಿಲ್​ ಆಗಿದ್ರು. ಈ ನೀಲಿ ಕಣ್ಣಿನ ಖಳನಾಯನ ಕಟ್ಟುಮಸ್ತಾದ ದೇಹಕ್ಕೆ ಇಂಪ್ರೆಸ್ ಆಗಿದ್ರು. ಧನಂಜಯ್​​ ಮ್ಯಾನರಿಸಂ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಸೃಷ್ಟಿಸಿತ್ತು. ಇದೀಗ ಡಾಲಿ ಧನಂಜಯ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಹೌದು ‘ಟಗರು’ ಸಿನಿಮಾ ನೋಡಿ ಸಂತಸ ವ್ಯಕ್ತ ಪಡಿಸಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮ ನಟ ಧನಂಜಯ ನಟನೆಯನ್ನು ಮೆಚ್ಚಿಕೊಂಡಿದ್ರು ಸಿನಿಮಾ ನೋಡಿದ ಸಂದರ್ಭದಲ್ಲಿ ಡಾಲಿಗಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು.

ವರ್ಮಾ ಹೇಳಿದಂತೆ ಇದೀಗ ಧನಂಜಯ ಅವರನ್ನು ತಮ್ಮ ಬ್ಯಾನರ್ ನಲ್ಲಿ ಟಾಲಿವುಡ್ ಅಂಗಳಕ್ಕೆ ಪರಿಚಯ ಮಾಡುತ್ತಿದ್ದಾರೆ. ಧನಂಜಯ ಅಭಿನಯದ ತೆಲುಗು ಸಿನಿಮಾ ಸೆಟ್ಟೇರಲು ಸಜ್ಜಾಗಿದ್ದು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಸಿನಿಮಾ ನಿರ್ಮಾಣವಾಗಲಿದೆ.

ಧನಂಜಯ ಅಭಿನಯದ ಸಿನಿಮಾಗೆ ‘ಭೈರವ-ಗೀತಾ’ ಎನ್ನುವ ಹೆಸರಿಸಲು ಸಿದ್ದತೆ ಮಾಡಿಕೊಂಡಿದ್ದಾರಂತೆ. ನವ ನಿರ್ದೇಶಕ ಸಿದ್ಧಾರ್ಥ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾವನ್ನು ರಾಮ್ ಗೋಪಾಲ್ ವರ್ಮ ತಮ್ಮ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದು ರಿಷಿ ಕಂಬೈನ್ಸ್ ವರ್ಮಾ ಜೊತೆ ಕೈ ಜೋಡಿಸಲಿದ್ದಾರೆ.

ಅಂದಹಾಗೆ ಧನಂಜಯ್​​ ನಾಯಕ ನಟನಾಗಿ ಎಂಟ್ರಿ ಕೊಟ್ಟ ಹುಡ್ಗ. ಡೈರೆಕ್ಟರ್​ ಸ್ಪೆಷಲ್​​, ರಾಟೆ, ಬದ್ಮಾಷ್​​,ಹೀಗೆ ಕೆಲವು ಸಿನಿಮಾಗಳಲ್ಲಿ ಧನಂಜಯ್​​​ ಹೀರೋ ಆಗಿ ನಟಿಸಿದ್ರು. ಹೀಗೆ ಸ್ಪೆಷಲ್ ಸ್ಟಾರ್ ಆಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಧನಂಜಯ ಇದ್ದಕ್ಕಿದ್ದಂತೆ ಟಗರು ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡು ಸರ್​​ಪ್ರೈಸ್​​ ಕೊಟ್ಟಿದ್ರು. ಇದೀಗ ಟಿಟೌನ್​ ಎಂಟ್ರಿಗೆ ವೇದಿಕೆ ಸಜ್ಜಾಗಿದೆ.

ಭೈರವ-ಗೀತಾ ಸಿನಿಮಾದ ಚಿತ್ರೀಕರಣ ಜೂನ್ 15 ರಂದು ಶುರುವಾಗಲಿದ್ಯಂತೆ. ಜೂನ್ 20 ರಂದು ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡುವ ಪ್ರಯತ್ನದಲ್ಲಿದೆ ಸಿನಿಮಾತಂಡ. ಧನಂಜಯ್​​ ವಿಲನ್ ಪಾತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ವೃತ್ತಿಜೀವನದ ಸಾಧ್ಯತೆಗಳನ್ನು ವಿಸ್ತರಿಸಿಕೊಂಡಿದ್ರು. ಇದೀಗ ಡಾಲಿ ಸೌತ್​​ನ ಬಹುಬೇಡಿಕೆಯ ನಟನಾಗಿ ಬದಲಾಗೋ ಎಲ್ಲಾ ಲಕ್ಷಣ ಕಾಣ್ತಿದೆ.