ಯಶ್ ಗೆ ಗುಡ್ ನ್ಯೂಸ್ !! ಮದುವೆಯಾದ ಒಂದುವರೆ ವರ್ಷಕ್ಕೇ ಸಿಹಿ ಸುದ್ದಿ !!

Good News: Yash's KGF Film shooting will Complete soon.
Good News: Yash's KGF Film shooting will Complete soon.

ಮದುವೆಯಾದ ಒಂದುವರೇ ವರ್ಷಕ್ಕೇ ಯಶ್ ಗುಡ್ ನ್ಯೂಸ್ ನೀಡಿದ್ದಾರೆ. ಈ ಸಿಹಿ ಸುದ್ದಿಗಾಗಿ ಅಭಿಮಾನಿಗಳು ಉಸಿರುಬಿಗಿ ಹಿಡಿದು ಕಾಯ್ತಿದ್ದಾರೆ.

ಹೌದು. ಯಶ್ ಮದುವೆಯಾಗಿ ಒಂದು ವರ್ಷ ನಾಲ್ಕು ತಿಂಗಳಾಯ್ತು. ಮದುವೆಯಾದ ಬಳಿಕ ಮೊದಲ ಸಿನೇಮಾ ರಿಲೀಸ್ ಹಂತ ತಲುಪಿದೆ.ಸ್ಯಾಂಡಲ್​​ವುಡ್​​ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಕೆಜಿಎಫ್​​ ಕೂಡ ಒಂದು. ಯಶ್​ ಅಭಿಮಾನಿಗಳಂತು ಈ ಚಿತ್ರಕ್ಕೆ ಉಸಿರು ಬಿಗಿ ಹಿಡಿದು ಕಾಯ್ತಿದ್ದಾರೆ. ಯಶ್​​ ಬರ್ತ್ ಡೇ ಹಿನ್ನೆಲೆಯಲ್ಲಿ ‘ಕೆ.ಜಿ.ಎಫ್’ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಜನವರಿ 8ರಂದು ಯಶ್ ಹುಟ್ಟುಹಬ್ಬದ ಕಾಣಿಕೆಯಾಗಿ ಮಧ್ಯರಾತ್ರಿ ಕೆಜಿಎಫ್​​ಚಿತ್ರದ ಟೀಸರ್ ರಿಲೀಸ್ ಮಾಡಲಾಗಿತ್ತು.

ಇದೀಗ ‘ಕೆಜಿಎಫ್’​​ಗೆ ಕಾಯ್ತಿರೋರು ಥ್ರಿಲ್​​ ಆಗೋ ಸುದ್ದಿ ಸುದ್ದಿಯೊಂದು ಬಂದಿದೆ. ಅದೇನಂದ್ರೆ ಇನ್ನು ಒಂದು ವಾರದಲ್ಲಿ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್​ ಕಂಪ್ಲೀಟ್​ ಆಗಲಿದೆ.
ಇದೀಗ ಸಿನಿಮಾದ ಇಂಟ್ರಡಕ್ಷನ್​ ಸಾಂಗ್​ ಶೂಟಿಂಗ್​ ಆಗಿದೆ. ಬೆಂಗಳೂರಿನ ಮಿನರ್ವಾ ಮಿಲ್ ನಲ್ಲಿ ಚಿತ್ರಕ್ಕಾಗಿ ಅದ್ಧೂರಿ ಸೆಟ್ ಹಾಕಿ ಶೂಟ್ ಮಾಡಲಾಗಿದೆ. ಯಶ್​​​ ಸಿನಿಮಾಗಳಲ್ಲಿ ಹಾಡುಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅದೇ ರೀತಿಯಲ್ಲಿ ಕೆ ಜಿ ಎಫ್ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಸ್ಪೆಷಲ್ ಆಗಿ 80ರ ದಶಕದ ಸೆಟ್ ಹಾಕಲಾಗಿತ್ತು.ಸಿನಿಮಾದ ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಆ ಹಾಡಿನ ಚಿತ್ರೀಕರಣಕ್ಕೆ ಸಿನಿಮಾ ತಂಡ ಚೆನ್ನೈಗೆ ತೆರಳಲಿದೆ. ಬಹುಶ: ಸೋಮವಾರ ಸಿನಿಮಾ ಟೀಮ್​ ಅಲ್ಲಿಗೆ ಹೋಗಲಿದೆ. ಆ ಸಾಂಗ್​ ಮುಗಿದ್ರೆ ಕೆಜಿಎಫ್​ ಫಸ್ಟ್​ ಪಾರ್ಟ್​ ಶೂಟಿಂಗ್ ಮುಗಿದಂತೆ.

ಅಂದಹಾಗೆ ಕೆಜಿಎಫ್​​ ಎರಡು ಭಾಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಈ ವರ್ಷ ಮೊದಲ ಪಾರ್ಟ್​ ತೆರೆಗೆ ಅಪ್ಪಳಿಸಲಿದೆ. ಎಲ್ಲ ಅಂದಕೊಂಡಂತೆ ನಡೆದ್ರೆ ಮುಂದಿನ ವರ್ಷ ಎರಡನೇ ಪಾರ್ಟ್​ ತೆರೆಗೆ ಬಲಿದೆ. ಕೆಜಿಎಫ್​ ಸಿನಿಮಾ ಕನ್ನಡ, ತಮಿಳು, ತೆಲುಗು. ಹಿಂದಿ ಮತ್ತು ಉರ್ದು ಲಾಂಗ್ವೇಜ್​​ನಲ್ಲಿ ತೆರಗೆ ಬರಲಿದೆ.ಕೆ ಜಿ ಎಫ್ ಸಿನಿಮಾವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಭುವನ್ ಗೌಡ ಕ್ಯಾಮೆರಾ ವರ್ಕ್ ಮಾಡುತ್ತಿದ್ರೆ ರವಿ ಬಸ್ರೂರು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಕನ್ನಡ ಕಾಸ್ಲ್ಟಿ ಚಿತ್ರಗಳಲ್ಲಿ ಇದೂ ಇಂದು. ಸಿನಿಮಾದ ಒಂದು ಪಾರ್ಟ್​ಗೆ ಹೆಚ್ಚುಕಮ್ಮಿ 40 ಕೋಟಿ ಖರ್ಚಾಗ್ತಿದೆ. ಹೀಗಾಗಿ ಎರಡೂ ಭಾಗಗಳಿಗೆ ಸೇರಿ ಸುಮಾರು 80. ಒಟ್ನಲ್ಲಿ ಕೆಜಿಎಫ್​​ ಚಂದನವನದಲ್ಲಿ ಹೊಸ ಇತಿಹಾಸ ಬರೆಯೋದು ಗ್ಯಾರಂಟಿ.