ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​! ಮನಸ್ಸು ಮುರಿದುಕೊಂಡ ಸುಂದರಿ ದಿಶಾ ಪಟಾಣಿ!!

ಬಿಟೌನ್ ಸಿನಿತಾರೆಯರಿಗೆ ಡೇಟಿಂಗ್, ಲೀವಿಂಗ್ ರಿಲೇಷನ್ ಶಿಪ್, ಲವ್ ಮತ್ತು ಬ್ರೇಕಪ್ ಎಲ್ಲವೂ ಕಾಮನ್ ಆಗಿಹೋಗಿದೆ. ಅಷ್ಟಕ್ಕೂ ಈ ವಿಚಾರವಾಗಿ ಏಕೆ ಮಾತನಾಡುತ್ತಿದ್ದಾರೆ, ಸದ್ಯ ಬ್ರೇಕಪ್ ಆಗಿರುವ ಜೋಡಿಯಾದರೂ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಕೆಳಗಿನ ಸ್ಟೋರಿ ಓದಿ.

ad

ಬಾಲಿವುಡ್​ನ ಮೋಸ್ಟ್​ ಹಾಟ್ ಆ್ಯಂಡ್ ಯಂಗ್ ಕಪಲ್ ಟೈಗರ್ ಶ್ರಾಫ್ ಹಾಗೂ M.S ಧೋನಿ ಸಿನಿಮಾದ ಮೂಲಕ ಪರಿಚಯರಾದ ನಟಿ ದಿಶಾ ಪಟಾಣಿ ಅಫಿಷಿಯಲ್ ಆಗಿ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಅಳೆದು-ತೂಗಿ, ತಿದ್ದಿ-ತೀಡಿ ಸೃಷ್ಟಿಕರ್ತ ನಿರ್ಮಿಸಿದಂತಿರೋ ಅಂದವಾದ ಚೆಲುವೆ ದಿಶಾ ಪಟಾಣಿ ಮತ್ತು ಅಷ್ಟೇ ಖಡಕ್ ಲುಕ್, ಹೊಟ್ಟೆಕಿಚ್ಚು ಹುಟ್ಟಿಸುವಂಥ ಟ್ಯಾಲೆಂಟ್​​​​ , ಎಲ್ಲರೂ ಬೆರಗಾಗುವ ರೀತಿಯಲ್ಲಿ ಡ್ಯಾನ್ಸ್ ಮಾಡುವ ಟೈಗರ್​ ಶ್ರಾಫ್ ಕಪಲ್ ಕೆಲವು ದಿನಗಳಿಂದ ಲವ್ ಮಾಡುತ್ತಿದ್ರು, ಜೊತೆಗೆ ಇವರಿಬ್ಬರನ್ನು ಮೇಡ್ ಇನ್ ಹೆವನ್ ಎಂದೇ ಕರೆಯಲಾಗುತ್ತಿತ್ತು. ಆದರೀಗಾ ಈ ಜೋಡಿ ನಡುವೆ ಬಿರುಕು ಮೂಡಿದ್ದು, ಇಬ್ಬರೂ ತಮ್ಮ ತಮ್ಮ ದಾರಿ ನೋಡಿಕೊಂಡಿದ್ದಾರೆ.

ಇನ್ನೂ ಈ ಯಂಗ್ ಕಪಲ್ ಬೇರೆ ಯಾಗುತ್ತಿರುವ ಕಾರಣ ಏನೆಂದು ಕೇಳಿದರೆ ಈ ವಿಷಯ ಅವರಿಬ್ಬರಿಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ ಎಂದು ಅವರಿಬ್ಬರ ಆತ್ಮೀಯ ಫ್ರೆಂಡ್ಸ್ ಹೇಳುತ್ತಿದ್ದರೆ, ಇಬ್ಬರೂ ಸಹ ಈ ಬ್ರೇಕ್​ ಅಪ್​ನ್ನು ಮೆಚ್ಯುರಿಟಿಯಿಂದ ಸ್ವೀಕರಿಸಿದ್ದು, ತಮ್ಮ ಕೆರಿಯರ್ ಕಡೆಗಡೆಗೆ ಗಮನ ಹರಿಸಲು ನಿರ್ಧದ್ದಾರೆ ಅದೇನೆ ಇರಲಿ ದಿಶಾಳನ್ನು ಆರಾಧಿಸೋ ಲಕ್ಷಾಂತರ ಅಭಿಮಾನಿಗಳಿಗೆ ಹಾಗೂ ಟೈಗರ್ ಅಂದ್ರೆ ಪ್ರಾಣ ಬಿಡುವಂತಹ ಹುಡುಗಿ ಅಭಿಮಾನಿಗಳಿಗಂತೂ ಇವರಿಬ್ಬರ ಬ್ರೇಕ್ಆಪ್ ಸುದ್ದಿಯಂತೂ ಲಡ್ಡು ಬಂದು ಬಾಯಿಗೆ ಬಿದ್ದಷ್ಟು ಖುಷಿಯಾಗಿದೆ.