ಮಹದಾಯಿ ವಿಚಾರ- ಪ್ರಧಾನಿ ಮೋದಿ ಭೇಟಿಗೆ ತೆರಳಲಿರುವ ಬಿಗ್ ಬಾಸ್ ಸಮೀರಾಚಾರ್ಯ!

Hubli - Big Boss season 5 Competitor Sameer Acharya support to Mahadayi issue
Hubli - Big Boss season 5 Competitor Sameer Acharya support to Mahadayi issue

 ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರಬಂದು ಸೆಲಿಬ್ರಿಟಿಯಾಗಿರುವ ಖ್ಯಾತ ಧಾರ್ಮಿಕ ಚಿಂತಕ ಸಮೀರಾಚಾರ್ಯ ಸಧ್ಯದಲ್ಲೇ ಮಹದಾಯಿ ವಿಚಾರಕ್ಕಾಗಿ ಪ್ರಧಾನಿ ನರೇಂದ್ರ‌ಮೋದಿ ಭೇಟಿ ಮಾಡಲಿದ್ದಾರೆ.

 

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ಬಹಿರಂಗಗೊಳಿಸಿದ ಸಮೀರಾಚಾರ್ಯ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಯೋಜನೆ ಜಾರಿಗಾಗಿ ಚರ್ಚೆಗೆ ನಿರ್ಧರಿಸಿದ್ದೇನೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ‌ ಕಚೇರಿಗೆ ಪತ್ರ ಮುಖಾಂತರ ಸಮಯಾವಕಾಶ ಕೇಳಿದ್ದೇನೆ.
ಫೆಬ್ರವರಿ 4 ರಂದು ಬೆಂಗಳೂರು ಬಂದ್ ಗೆ ನನ್ನ ಬೆಂಬಲವಿದೆ ಎಂದರು.
ಅಲ್ಲದೇ ಬಿಗ್ ಬಾಸ್ ವಿಚಾರಕ್ಕೆ
ಕರ್ನಾಟಕ ಪ್ರತಿಯೊಬ್ಬ ನಾಗರಿಕನಿಗೆ ಧನ್ಯವಾದ ಅರ್ಪಿಸಿದ ಸಮೀರಾಚಾರ್ಯ,
ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ್ ನಂತ್ರ ಇಡೀ ಕರ್ನಾಟಕ ನನ್ನನ್ನು ಗುರುತು ಹಿಡಿಯುತ್ತಿದೆ.

 

 

ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯವಾದ ಸಮಯ ಎಂದ್ರೆ ಕಿಚ್ಚ ಸುದೀಪ್ ಅವರೊಂದಿಗೆ ಊಟ ಮಾಡಿರೋದು ಎಂದರು. ಒಟ್ಟಿನಲ್ಲಿ ಮಹದಾಯಿ ವಿಚಾರಕ್ಕೆ ಇದೀಗ ರೈತರು, ಜನಪ್ರತಿನಿಧಿಗಳ ಜೊತೆಗೆ ಸೆಲಿಬ್ರೆಟಿಗಳು ಕೂಡ ಎಂಟ್ರಿಯಾಗಿದ್ದು ಸಮಸ್ಯೆ ಬಗೆಹರಿಯುತ್ತಾ ಕಾದು ನೋಡಬೇಕಿದೆ.