ಟಗರುಗೆ ಗುಟುರು ಹಾಕಿದ ಹುಚ್ಚ ವೆಂಕಟ್ !! ಡೈಲಾಗ್ ಮ್ಯೂಟ್ ಮಾಡದಿದ್ರೆ ಪ್ರಾಣ ತೆಗಿಯೋಕೂ ರೆಡಿ !!

ಹ್ಯಾಟ್ರಿಕ್​​ ಹೀರೋ ಶಿವರಾಜ್​ಕುಮಾರ್​​ ಅಭಿನಯದ ಟಗರು ಚಿತ್ರದ ಕೆಲ ಡೈಲಾಗ್​ ವಿರುದ್ಧ ಹುಚ್ಚ ವೆಂಕಟ್​​ ರೊಚ್ಚಿಗೆದ್ದಿದ್ದಾರೆ.

ಟಗರು ಸಿನಿಮಾದ ನಿರ್ದೇಶಕ ಸೂರಿ ವಿರುದ್ಧ ಗುಡುಗಿರುವ ವೆಂಕಟ್​ ಹ್ಯಾಟ್ರಿಕ್​​ ಹೀರೋ ಶಿವರಾಜ್​ಕುಮಾರ್​​ ಕುರಿತು ಬಳಸಿರುವ ಡೈಲಾಗ್​​ ಮ್ಯೂಟ್​ ಮಾಡುವಂತೆ ಆಗ್ರಹಿಸಿದ್ದಾರೆ. ಮ್ಯೂಟ್​ ಮಾಡದೇ ಹೋದ್ರೆ ಸುಮ್ಮನೆ ಬಿಡಲ್ಲ ಅಂತ ಧಮ್ಕಿ ಹಾಕಿದ್ದಾರೆ.

ಚಿತ್ರದಲ್ಲಿ ಹೀರೋ ಶಿವರಾಜ್​​ಕುಮಾರ್​ ವಿರುದ್ದದ ಪಾತ್ರಗಳಲ್ಲಿ ಶಿವರಾಜ್ ಕುಮಾರ್ ವಿರುದ್ದ ಬಳಸಲಾದ ಭಾಷೆಗೆ ಹುಚ್ಚ ವೆಂಕಟ್​​ ಸಿಟ್ಟಿಗೆದ್ದಿದ್ದಾರೆ. “ನನಗೆ ಶಿವರಾಜ್​​ ಕುಮಾರ್​ ಇಷ್ಟ .. ಇಷ್ಟಪಡೋರಿಗೆ ಪ್ರಾಣ ಕೊಡೋಕು ರೆಡಿ, ತೆಗಿಯೋಕು ರೆಡಿ” ಅಂತ ಗುಡುಗಿದ್ದಾರೆ. “ನನ್​ ಹುಡುಗರು ನಿನ್ನ ಸುಮ್ನೆ ಬಿಡಲ್ಲ” ಅಂತ ನಿರ್ದೇಶಕ ಸೂರಿಗೆ ಹುಚ್ಚ ವೆಂಕಟ್ ಆವಾಜ್​​ ಹಾಕಿದ್ದಾರೆ.