ಫೆಬ್ರವರಿಯಲಿ ಬರಲಿದೆ ಪ್ರೀತಿಯ ಬಿರುಗಾಳಿ !! ಇದಂ ಪ್ರೇಮಂ ಜೀವನಂ !! ಏನೇ ಆದ್ರೂ ಸಿನೇಮಾ ನೋಡ್ಲೇ ಬೇಕು !!

ಸಿನೇಮಾದಲ್ಲಿ ಲವ್ ಸ್ಟೋರಿ ಅಂದ್ರೆ ಅದು ಕೇವಲ ಹುಡುಗ ಹುಡುಗಿಗಷ್ಟೇ ಸೀಮಿತ. ಆದರೆ ಈಗೊಂದು ಹೊಸ ಸಿನೇಮಾ ಬರ್ತಿದೆ. ಇದರಲ್ಲಿ ಹುಡುಗ ಹುಡುಗಿಯ ಲವ್ ಸ್ಟೋರಿಯಷ್ಟೇ ಹೆತ್ತವರ ಬಗೆಗಿನ ಮಕ್ಕಳ ಪ್ರೀತಿಯನ್ನು ಅಷ್ಟೇ ನವೀರಾಗಿ ತೋರಿಸುತ್ತದೆ.

adಹೌದು, ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಅಲೆ ಜೋರಾಗಿಯೇ ಇದೆ. ದೊಡ್ಡ ದೊಡ್ಡ ಸ್ಟಾರ್ ಗಳ ಸಿನೇಮಾಕ್ಕಿಂತ ಹೊಸಬರ ಸಾಲು ಸಾಲು ಸಿನೇಮಾಗಳೇ ಹಿಟ್ ಮೇಲೆ ಹಿಟ್ ಆಗುತ್ತಿರುವ ದಿನಗಳಲ್ಲಿ ಹೊಸಬರ ಹೊಸಾ ಸಿನೇಮಾವೊಂದು ಬರುತ್ತಿದೆ. ಅದೇ ಜೀವನ ಪ್ರೀತಿಯ ಇದಂ ಪ್ರೇಮಂ ಜೀವನಂ !! ಕೃತಕತೆಯ ಸಿನೇಮಾಗಳ ಮದ್ಯೆ ಸಿನೇಮಾ ಪ್ರೀತಿಯನ್ನು ಹೆಚ್ಚಿಸುವ ಇದಂ ಪ್ರೇಮಂ ಜೀವನಂ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ರಾಘವಾಂಕ ಪ್ರಭು. ರಾಘವಾಂಕ ಅವ್ರಿಗೆ ಇದು ಚೊಚ್ಚಲ ನಿರ್ದೇಶನ. ಸಿನಿಮಾದ ಮೇಲಿನ ಆಸಕ್ತಿಯೇ ಇವ್ರನ್ನ ಈ ಚಿತ್ರ ನಿರ್ದೇಶಿಸಿದೆ.

ಹೊಸ ಪ್ರತಿಭೆ ಸನತ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡ್ರೆ, ಸನತ್‌ಗೆ ನಾಯಕಿಯಾಗಿ ಶನಾಯಾ ನಟಿಸಿದ್ದಾರೆ. ಶನಾಯಾಗೆ ಇದು ಮೊದಲ ಚಿತ್ರವಾಗಿದ್ದು, ನಾಯಕ ಸನತ್‌ಗೆ ಇದು ಮೂರನೇ ಸಿನಿಮಾ. ದಿ ಪ್ಲಾನ್ ಹಾಗೂ ಟೋರ ಟೋರ ಸಿನಿಮಾದಲ್ಲಿ ಅಭಿನಯಿಸಿರೋ ಸನತ್, ತೆರೆಯ ಮೇಲೆ ಅನುಭವ ಹೊಂದಿದ್ದಾರೆ.

ಇತಿಚ್ಚಿನ ಸಿನೇಮಾಗಳ ಟೈಟಲ್ ಒಂದೋ ಅರ್ಥಹೀನವಾಗಿರುತ್ತೆ ಅಥವಾ ಯಾವುದೋ ಹಳೇ ಚಿತ್ರದ ಹಾಡಿನ ತುಣುಕನ್ನೇ ಹೊಸಾ ಟೈಟಲ್ ಆಗಿಸುತ್ತಾರೆ. ಆದರೆ ಈ ಚಿತ್ರದಷ್ಟೇ ಈ ಚಿತ್ರದ ಟೈಟಲ್ ಕೂಡಾ ಹೊಸದು ಮತ್ತು ಅರ್ಥಗರ್ಭಿತವಾಗಿರುವಂತದ್ದು. ಚಿತ್ರದ ಟೈಟಲ್ ಹೇಳುವ ಹಾಗೆ ಇದೊಂದು ಪಕ್ಕಾ ಲವ್‌ಸ್ಟೋರಿ ಆಧಾರಿತ ಸಿನಿಮಾ.

 

 

ಕೇವಲ ಹದಿಹರೆಯದ ಪ್ರೀತಿಯಷ್ಟೇ ಅಲ್ಲದೇ ಜೀವನ ಪ್ರೀತಿಯನ್ನು ಬರಸೆಳೆದು ಅಪ್ಪುತ್ತದೆ. ಪ್ರತಿಯೊಬ್ಬರ ಬದುಕಿನಲ್ಲಿ, ತಂದೆ-ತಾಯಿ ಬಹಳ ದೊಡ್ಡ ಪಾತ್ರ ನಿರ್ವಹಿಸಲಿದ್ದು, ಅವರಿಗಾಗಿ ಮಕ್ಕಳು ಏನು ಮಾಡುತ್ತಾರೆ ಎಂಬುದಕ್ಕೆ ಸ್ವಲ್ಪ ಕಮರ್ಷಿಯಲ್‌ ಟಚ್‌ ನೀಡಿ ಸಿನೇಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ ಐದು ಕಲರ್‌ಫುಲ್ ಸಾಂಗ್ಸ್ ಇದ್ದು, ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ರೀಯೋನಾ ಬ್ಯಾನರ್‌ನಲ್ಲಿ ತಯಾರಾಗಿರೋ ಈ ಸಿನಿಮಾಗೆ ನವೀನ್ ಹಾಗೂ ಗೋಕುಲ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.

ಬೆಂಗಳೂರಿನ ಸುತ್ತಮುತ್ತ ಶೂಟಿಂಗ್ ಮಾಡಿರೋ ಈ ಚಿತ್ರದಲ್ಲಿ ನೆಲದ ವಾಸನೆಯಿದೆ. ನಮ್ಮದೇ ಪಕ್ಕದ ಮನೆಯಲ್ಲಿ ನಡೆಯುತ್ತಿರೋದನ್ನು ನೋಡ್ತಿದ್ದೇವೇನೋ ಅನ್ನಿಸುತ್ತೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್‌ನಲ್ಲಿ ಬ್ಯಸಿಯಾಗಿರುವ ಚಿತ್ರತಂಡ ಇದೇ ಫೆಬ್ರವರಿಯಲ್ಲಿ ಚಿತ್ರವನ್ನು ತೆರೆಗೆ ತರೋ ಪ್ಲಾನ್ ಮಾಡ್ತಿದೆ. ಎಷ್ಟೇ ಸಮಸ್ಯೆ ಎದುರಾದರೂ ಕಾಲೇಜಿಗೆ ಚಕ್ಕರ್ ಹೊಡೆದೋ, ಕೆಲಸಕ್ಕೆ ರಜೆ ಹಾಕಿಯೋ ಪ್ರೀತಿಪಾತ್ರರ ಜೊತೆ ಸಿನೇಮಾ ನೋಡಲೇಬೇಕು ಅನ್ನಿಸುವ ನವೀರಾದ ಚಿತ್ರವಿದು. ಸದ್ಯ ಕಾಯೋದಷ್ಟೇ ದಾರಿ. ಇದಂ ಪ್ರೇಮಂ ಜೀವನಂ.