ಯಶ್ ಜೊತೆ ಬಣ್ಣ ಹಚ್ಚುತ್ತಿದ್ದಾರಾ ಸ್ಪರ್ಶ ರೇಖಾ? ನೀವೆ ನೋಡಿ!!

ನಿಮಗೆ ‘ಸ್ಪರ್ಶ’ ರೇಖಾ ನೆನಪಿರ್ತಾರೆ. ಕಿಚ್ಚ ಸುದೀಪ್ ನಟಿಸಿದ ಸ್ಪರ್ಶ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿದ್ದ ನಟಿ. ಈ ಸಿನಿಮಾ ಬಂದ್ಮೇಲೆ ರೇಖಾ ಹೆಸರು ಸ್ಪರ್ಶ ರೇಖಾ ಅಂತ್ಲೇ ಫೇಮಸ್ ಆಗಿತ್ತು.

ad


ಆ ನಂತ್ರ ದರ್ಶನ್ ನಾಯಕನಾಗಿ ನಟಿಸಿದ ಚೊಚ್ಚಲ ಸಿನಿಮಾ ‘ಮೆಜೆಸ್ಟಿಕ್’ ಚಿತ್ರಕ್ಕೂ ಇದೇ ಸ್ಪರ್ಶ ರೇಖಾ ನಾಯಕಿಯಾಗಿದ್ದರು. ಮೆಜೆಸ್ಟಿಕ್​ ಸೂಪರ್​ ಡೂಪರ್​ ಹಿಟ್​ ಆಗಿತ್ತು.ಇವತ್ತು ಸುದೀಪ್​ ಮತ್ತು ದರ್ಶನ್​ ಕನ್ನಡದ ಟಾಪ್​ ಸ್ಟಾರ್ಸ್​. ಸ್ಯಾಂಡಲ್​ವುಡ್​ನಲ್ಲಿ ಕಲೆಕ್ಷನ್​ ಕಿಂಗ್​ ಅನ್ನಿಸಿಕೊಂಡವರು. ಇವರಿಬ್ಬರು ನಾಯಕರಾಗಿ ನಟಿಸಿದ ಮೊದಲ ಚಿತ್ರಗಳ ನಾಯಕಿ ಅನ್ನುವ ಹೆಗ್ಗಳಿಕೆ ರೇಖಾರದ್ದು. ಸ್ಪರ್ಶ, ಮೆಜೆಸ್ಟಿಕ್ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದ ರೇಖಾ ಕನ್ನಡದ ಲಕ್ಕಿ ಹೀರೋಯಿನ್​ ಅನ್ನಿಸಿಕೊಂಡಿದ್ರು. ಆದ್ರೆ ಎರಡು ಹಿಟ್​​ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ರೇಖಾ ಆಮೇಲೆ ಕಾಣೆಯಾಗಿದ್ರು.

ಒಂದೂವರೆ ದಶಕದ 2 ಹಿಟ್​​ಚಿತ್ರಗಳನ್ನು ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ರೇಖಾ ಅರ್ಥಾಥ್ ಸ್ಪರ್ಶ ರೇಖಾ ಅಮೇಲೆ ಕಾಣಿಸಿಕೊಂಡಿದ್ದು ಬಿಗ್​ಬಾಸ್​​ ಸೀಸನ್​ ನಾಲ್ಕರಲ್ಲಿ. ಕಿರುತೆರೆ ಮೇಲೆ ರೇಖಾರನ್ನು ನೋಡಿ ದಚ್ಚು ಮತ್ತು ಕಿಚ್ಚನ ಫ್ಯಾನ್ಸ್​ ಥ್ರಿಲ್​ ಆಗಿದ್ದು ಸುಳ್ಳಲ್ಲ.ಇತ್ತೀಚೆಗೆ ಒಂದೆರಡು ಸಿನಿಮಾಗಳಲ್ಲಿ ಗೆಸ್ಟ್​ ಅಪ್ಪಿಯರೆನ್ಸ್​ ಮಾಡಿದ ರೇಖಾ ಇದೀಗ ರಾಕಿಂಗ್​ ಸ್ಟಾರ್​ ಯಶ್​ ಜೊತೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಯಶ್​ – ರೇಖಾ ಜೊತೆಯಾಗಿ ಕಾಣಿಸಿಕೊಂಡಿದ್ದಕ್ಕೂ ಒಂದು ಕಾರಣ ಇದೆ. ಸ್ಪರ್ಶ ರೇಖಾ ಈಗ ನಿರ್ಮಾಪಕಿ.

ಡೆಮೋಪೀಸ್‌ ಸ್ಪರ್ಶ ರೇಖಾ ನಿರ್ಮಾಣದಲ್ಲಿ ಸೆಟ್ಟೇರಿರೋ ಚೊಚ್ಚಲ ಸಿನಿಮಾ. ಮುಂಜಾನೆ ಕಾರ್ಡ್‌ ರೋಡ್‌ ಗಣಪತಿ ದೇವಸ್ಥಾನದಲ್ಲಿ ಸಂಪ್ರದಾಯಬದ್ಧವಾಗಿ ಈ ಸಿನಿಮಾ ಸೆಟ್ಟೇರಿದೆ. ವಿಶೇಷ ಅಂದ್ರೆ, ಡೆಮೋಪೀಸ್‌ ಚಿತ್ರದ ಮೊಲದ ಶಾಟ್‌ಗೆ ಮಾಸ್ಟರ್‌ಪೀಸ್‌ ರಾಕಿಂಗ್ ಸ್ಟಾರ್‌ ಯಶ್‌ ಕ್ಲ್ಯಾಪ್‌ ಮಾಡಿದ್ದಾರೆ. ಕ್ಲಾಪ್‌ ಮಾಡೋದ್ರ ಜೊತೆಗೆ ಇಡೀ ಚಿತ್ರತಂಡಕ್ಕೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ. ಡೆಮೋಪೀಸ್‌ಗೆ ಬ್ರಹ್ಮಗಂಟು ಸೀರಿಯಲ್‌ ಖ್ಯಾತಿಯ ಕಿರುತೆರೆ ಪ್ರತಿಭೆ ಭರತ್‌ ಮತ್ತು ಸೋನಲ್‌ ಸಿನಿಮಾದ ನಾಯಕಿ. ರೇಖಾ ಜೊತೆ ಏ ಆರ್​ ಯಶವಂತ ಸಹನಿರ್ಮಾಣದ ಹೊಣೆ ಹೊತ್ತಿದ್ದಾರೆ. ಡೆಮೋಪೀಸ್​ ಚಿತ್ರಕ್ಕೆ ವಿವೇಕ್‌ ಅನ್ನೋ ನವಪ್ರತಿಭೆ ಆ್ಯಕ್ಷನ್​ ಕಟ್​​ ಹೇಳ್ತಿದ್ದಾರೆ.

ವಿವೇಕ್​ ಎ. ಇದು ವಿವೇಕ್​ ನಿರ್ದೇಶನದ ಚೊಚ್ಚಲ ಚಿತ್ರ ಇದು. ಸಾಕಷ್ಟು ಸಿನಿಮಾಗಳಿಗೆ ಅಸೋಸಿಯೇಟ್​ ನಿರ್ದೇಶಕನಾಗಿ ದುಡಿದ ಅನುಭವ ಇದೆ. ಇದೀಗ ಡೇಮೋಪೀಸ್​ಗಾಗಿ ಡಿಫರೆಂಟ್​ ಕಥೆ ಹೆಣೆದಿದ್ದಾರೆ. ಆದ್ರೆ ಕಥೆಯ ಗುಟ್ಟನ್ನು ಸಿನಿಮಾ ತಂಡ ಬಿಟ್ಟುಕೊಟ್ಟಿಲ್ಲ. ವಿಶೇಷ ಅಂದ್ರೆ, ಪತ್ರಕರ್ತ, ನಿರ್ದೇಶಕ ಚಂದ್ರಚೂಡ್ ಈ ಚಿತ್ರದಲ್ಲಿ ವಿನಲ್‌ ರೋಲ್‌ನಲ್ಲಿ ಅಭಿನಯಿಸ್ತಿದ್ದಾರೆ. ಬೆಂಗಳೂರಿನ ಯುವಕರನ್ನ ಹಾಳು ಮಾಡೋ ಡಾನ್‌ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈಗ ಡೆಮೋಪೀಸ್​ ಸಿನಿಮಾದ ಪ್ರೀ ಪ್ರೊಡಕ್ಷನ್​ ವರ್ಕ್ ನಡೆಯುತ್ತಿದೆ. ಏಪ್ರಿಲ್​ ಸೆಕೆಂಡ್​ ವೀಕ್​​ ಸಿನಿಮಾದ ಶೂಟಿಂಗ್​ ಶುರುವಾಗಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.