ಬಾಲಿವುಡ್ ‘ಸ್ವೀಟ್ ಕಪಲ್’ ‘ದೀಪಿಕಾ ರಣವೀರ್’ ಮನೆಗೆ ಆಗಮಿಸಲಿದ್ದಾರಾ ಹೊಸ ಸದಸ್ಯ..!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿದ್ದಾರೆ. ಹೀಗೆಂದು ಬಾಲಿವುವುಡ್ ಸಿನಿ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ. ಈ ವಿಚಾರವಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ದೀಪಿಕ ಪಡುಕೋಣೆ ತಾವು ಗರ್ಭಿಣಿಯೇ ಎಂಬ ವಿಷಯಕ್ಕೆ ಸ್ಪಷ್ಟನೆ ನೀಡಿದ್ದಾರೆ.


ಕಳೆದ ವರ್ಷ ಅದ್ಧೂರಿಯಾಗಿ ದೀಪಿಕಾ ಪಡುಕೋಣೆ ಮನೆಯ ಕೊಂಕಣಿ ಸಂಪ್ರದಾಯದ ಹಾಗೇ ಮತ್ತು ರಣವೀರ್ ಸಿಂಗ್ ರ ಮನೆಯ ಸಿಖ್ ಸಂಪ್ರದಾಯದಂತೆ ವಿವಾಹವಾಗಿದ್ದ ಈ ಜೋಡಿ ಬೆಂಗಳೂರು ಹಾಗೂ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಸಹ ಮಾಡಿಕೊಂಡಿದ್ದರು.

ಇತ್ತಿಚ್ಛೇಗೆ ಸಾರ್ವಜನಿಕವಾಗಿ ಅಭಿಮಾನಿಗಳ ಮುಣದೆ ಕಾಣಿಸಿಕೊಂಡಾಗ ಅವರ ಹೊಟ್ಟೆಯು ಸ್ವಲ್ಪ ದೊಡ್ಡದಾಗಿ ಕಾಣಿಸಿದೆ.ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗೊಂದಲಗಳು ಎಲ್ಲಾರಲ್ಲಿಯೂ ಮೂಡಿದೆ. ದೀಪಿಕಾ ಗರ್ಭಿಣಿ, ರಣವೀರ್​-ದೀಪಿಕಾ ಮನೆಗೆ ಹೊಸ ಸದಸ್ಯರ ಆಗಮನವಾಗಲಿದೆ. ಎಂದು ಚರ್ಚೆ ಆರಂಭವಾಗಿದೆ.


ಮದುವೆಗೂ ಮುನ್ನ  “ನನಗೂ ತಾಯಿ ಆಗುವ ಆಸೆ ಇದೆ. ನಾನು ಹೀರೋಯಿನ್​ ಎನ್ನುವ ಕಾರಣಕ್ಕೆ ಕುಟುಂಬಕ್ಕೆ ಪ್ರಾಮುಖ್ಯತೆ ಕೊಡದೇ ಇರೆನು,” ಎಂದು ಮಾಧ್ಯಮದವರ ಮುಂದೆ ಹೇಳಿದ್ದರು.ಆದರೆ ಈಗ ಮಾತನಾಡಿದ ದೀಪಿಕಾ ಪಡುಕೋಣೆ ಎಲ್ಲವೂ ಯಾವ ಸಮಯದಲ್ಲಿ ನಡೆಯಬೇಕೋ ಅದೇ ಸಮಯದಲ್ಲಿ ಜರುಗುತ್ತದೆ.

ಅದಕ್ಕೆ ಈ ರೀತಿಯ ಚರ್ಚೆಗಳು ಬೇಡ. ಈ ರೀತಿ ಪ್ರಶ್ನೆಗಳನ್ನು ಮಹಿಳೆಯರಿಗೆ ಕೇಳಬಾರದು,  ಎಂದು ಪ್ರತಿಕ್ರಿಯಿಸಿದ್ದಾರೆ.