ಕಾಲಿವುಡ್​​ ನಟ ಆರ್ಯ್​​ಗೆ ಅಭಿನಯ ಚಕ್ರವರ್ತಿ ಸುದೀಪ್ ಯಾಕಿಷ್ಟ ಗೊತ್ತಾ?

ಕಿಚ್ಚ ಸುದೀಪ್ ಕನ್ನಡಿಗರಿಗೆ ಸಿಕ್ಕ ಅಪರೂಪದ ಮಾಣಿಕ್ಯ.. ಕಿಚ್ಚನನ್ನ ಸ್ಪೂರ್ತಿಯಾಗಿರಿಸಿಕೊಂಡು ಅದೇಷ್ಟೋ ಜನ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದಾರೆ. ಬಣ್ಣದ ಜಗತ್ತಿನಲ್ಲಿ ಇಲ್ಲದೇ ಇರೋರು ಕೂಡ ಸುದೀರ್​ ವ್ಯಕ್ತಿತ್ವವನ್ನ ತಮ್ಮ ಲೈಫ್​​​​ ಸ್ಟೈಲ್​​ನಲ್ಲಿ ಮಿಂಗಲ್ ಮಾಡಿದ ಎಕ್ಸಾಂಪಲ್ಸ್​ ಇವೆ. ಆದ್ವರೆ ಈಗ ಕಾಲಿವುಡ್​​ನ ಸ್ಟಾರ್​ ಆರ್ಯ ಕೂಡ ಕಿಚ್ಚನಿಂದ ಸ್ಪೂರ್ತಿ ಪಡೆದಿದ್ದಾರಂತೆ.. ಅದ್​ ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಷಯ.

ಕಿಚ್ಚ ಸುದೀಪ್​.. ಈ ಹೆಸ್ರು ಕೇಳ್ತಿದ್ರೆನೆ ತ್ರಿಲ್ ಆಗುತ್ತೆ. ಕೋಟ್ಯಾಂತರ ಅಭಿಮಾನಿಗಳ ಮೈ ರೋಮಾಂಚನ ಆಗುತ್ತೆ. ಯಾಕಂದ್ರೆ ಕಿಚ್ಚನಿಗೆ ಇರೋ ಪವರ್ ಅಂತಾದ್ದು, ಅದ್ರಲ್ಲೂ ಸಿನಿಮಾ ಮಂದಿಗಂತು ಸುದೀಪ್​​ ಅಂದ್ರೆ ಪ್ರಾಣ. ಅದಕ್ಕೆ ಕಾರಣ ಸುದೀಪ್​​ ಸಿನಿಮಾ ಮಂದಿ ಜೊತೆ ಇಟ್ಕೊಂಡಿರೋ ಪ್ರೀತಿ, ಸ್ನೇಹಾ ಬಾಂಧವ್ಯ.. ಹೀಗಾಗಿ ಕಿಚ್ಚನ ಕನ್ನಡಕ್ಕೆ ಸಿಕ್ಕ ಅಪರೂಪದ ಮಾಣಿಕ್ಯ.. ಕೊಟ್ಯಾಂತರ ಅಭಿಮಾನಿಗಳಿಗೆ ರೋಲ್ ಮಾಡೆಲ್​.ಕಿಚ್ಚ ಸುದೀಪ್​​ರನ್ನ ಸ್ಪೂರ್ತಿಯಾಗಿರಿಸಿಕೊಂಡು ಅದೇಷ್ಟೋ ಜನ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದಾರೆ.

 

ಸಿನಿಮಾ ಇಂಡಸ್ಟ್ರಿಯಲ್ಲಿ ಇಲ್ಲದವರು ಕೂಡ ಸುದೀಪ್​​ರ ವ್ಯಕ್ತಿತ್ವವನ್ನ ಅಳವಡಿಸಿಕೊಂಡಿರೋ ಎಕ್ಸಾಂಪಲ್ಸ್​​ ಇವೆ. ಇನ್ನು ಅಭಿಮಾನಿಗಳಂತೂ ಅಭಿನಯ ಚಕ್ರವರ್ತಿಯ ವೇಷ ಭೂಷಣ, ಹೇರ್ ಸ್ಟೈಲ್, ಅವರ ವಾಕಿಂಗ್ ಸ್ಟೈಲ್ ಹೀಗೆ ಎಲ್ಲವನ್ನ ಅನುಕರಣೆ ಮಾಡ್ತಾರೆ. ಹೌದು, ಕಾಲಿವುಡ್ ಸ್ಟಾರ್ ಆರ್ಯ ನಿಮ್ಗೆಲ್ಲಾ ಗೊತ್ತೇ ಇದ್ದಾರೆ. ತಮಿಳಿನಲ್ಲಿ ಸೂಪರ್​ ಸಿನಿಮಾಗಳನ್ನ ಕೊಟ್ಟಿರೋ ಆರ್ಯ ಈಗ ಕನ್ನಡದ ರಾಜರಥ ಸಿನಿಮಾದಲ್ಲಿ ಅಭಿನಯಿಸಿ ಸ್ಯಾಂಡಲ್​​ವುಡ್​​​ಗು ಎಂಟ್ರಿ ಕೊಡ್ತಿದ್ದಾರೆ. ಇಂತಹ ಆರ್ಯನಿಗೆ ಹಲವು ವಿಚಾರಗಳಲ್ಲಿ ಕಿಚ್ಚ ಸುದೀಪ್ ಸ್ಪೂರ್ತಿ ಅಂತೆ. ಆರ್ಯ ಸುದೀಪ್​ರನ್ನ ಫಾಲೋ ಮಾಡ್ತಾರಂತೆ.ಹೌದು, ತಮಿಳು ಆರ್ಯ ನಟಿಸ್ತಿರೋ ಕನ್ನಡ ಸಿನಿಮಾ ರಾಜರಥ ಲುಕ್ ಕಿಚ್ಚ ಸುದೀಪ್​ರಿಂದ ಸ್ಪೂರ್ತಿ ಪಡೆದಿದ್ದಂತೆ.. ಆರ್ಯ ಅಭಿನಯಿಸ್ತಿರೋ ಕನ್ನಡದ ಮೊದಲ ಚಿತ್ರ ರಾಜರಥ. ಇದರಲ್ಲಿ ಆರ್ಯ ವಿಶ್ವ ಅನ್ನೋ ರೋಲ್​ ಮಾಡಿದ್ದಾರೆ. ಈ ಪಾತ್ರದ ಲುಕ್ ಸಂಚಲನ ಸೃಷ್ಠಿಸಿದೆ. ​ಆರ್ಯನ ಈ ಲುಕ್ ಕಿಚ್ಚ ಸುದೀಪ್​ರಿಮದ ಹೇಗೆ ಸ್ಫೂರ್ತಿಯಾಗಿದೆ ಗೊತ್ತಾ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಥೆ.

ಸಧ್ಯ ಕನ್ನಡಿಗರಲ್ಲಿ ನಿರೀಕ್ಷೆ ಹುಟ್ಟಿಸಿರೋ ರಾಜರಥ ಸಿನಿಮಾವನ್ನ ಅನೂಪ್​ ಬಂಡಾರಿ ಆ್ಯಕ್ಷನ್ ಕಟ್ ಹೇಳ್ತಿದ್ದು, ನಿರೂಪ್​ ಬಂಡಾರಿ ಲೀಡ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅನೂಪ್​, ನಿರುಪ್ ತಂದೆ ಸುಧಾಕರ್ ಬಂಡಾರಿ ನಿರ್ಮಾಣ ಮಾಡ್ತಿದ್ದಾರೆ.. ಸುದೀಪ್ ಹಾಗು ಸುಧಾಕರ್ ಭಂಡಾರಿ ಮೊದಲೇ ಸ್ನೇಹಿತರು. ಟಿವಿ ಧಾರಾವಾಹಿ ಪ್ರೇಮದ ಕಾದಂಬರಿಯಲ್ಲಿ 90ರ ದಶಕದಲ್ಲಿ ಸುದೀಪ್​​ ಸುಧಾಕರ್​ ಜತೆ ​​​ಕೆಲಸ ಮಾಡಿದ್ರು. ಅಂದಿನಿಂದ ಸುದೀಪ್​ರನ್ನ ಮನಸ್ಸಿನಲ್ಲಿಟ್ಟುಕೊಂಡು ಹಲವಾರು ಕಥೆಗಳನ್ನು ಅನೂಪ್ ಹಾಗು ನಿರೂಪ್ ಚರ್ಚಿಸುತ್ತಿದ್ರಂತೆ. ಕಿಚ್ಚ ಸುದೀಪ್​ ಹಾಗು ಬಂಡಾರಿ ಫ್ಯಾಮಿಲಿ ಮಧ್ಯೆ ಇರೋ ಸ್ನೇಹ ತುಂಬಾ ಹಳೆಯದ್ದು, ಹೀಗಾಗಿ ಎಂಜಿನಿಯರಿಂಗ್ ದಿನಗಳಲ್ಲಿ ಅನೂಪ್ ಯೋಧಾ ಎಂಬ ಶೀರ್ಷಿಕೆಯಡಿ ಸುದೀಪ್​​ಗಾಗಿ ಸ್ಕ್ರಿಪ್ಟ್ ರೆಡಿಮಾಡಿದ್ರು. ಆ ಸಿನಿಮಾದಲ್ಲಿ ಕಿಚ್ಚ ಪೊಲೀಸ್​ ರೋಲ್ ಮಾಡ್ಬೇಕಿತ್ತು.

ಆದ್ರೆ ಅದು ಸಕಾರ ಗೊಳ್ಳಲ್ಲಿಲ್ಲ. ಹೀಗಾಗಿ ಕಿಚ್ಚನನ್ನ ಮನಸ್ಸಿನಲ್ಲಿಟ್ಟುಕೊಂಡು ಅನೂಪ್ ಬಂಡಾರಿ ರಾಜರಥ ಸಿನಿಮಾದಲ್ಲಿ ಆರ್ಯನ ಪಾತ್ರ ಹೆಣೆದಿದ್ದಾರಂತೆ.. ಅನೂಪ್ ಕಿರುಚಿತ್ರ ನಿರ್ದೇಶಿಸಿದಾಗ ಪತ್ರಿಕಾಗೋಷ್ಠಿಗೆ ಅತಿಥಿಯಾಗಿ ಸುದೀಪ್​​​ ಬಂದಿದ್ರಂತೆ. ಆಗ ಕಿಚ್ಚನ ವೇಷಭೂಷಣ, ನೀಲಿ ಕುರ್ತಾ, ಜೀನ್ಸ್ ಮತ್ತು ಸ್ಯಾಂಡಲ್ಡ್​​ ಅನೂಪ್​ಗೆ ಇಂಪ್ರೆಸ್​ ಮಾಡಿತ್ತು. ಅದೇ ಟೈಂನಲ್ಲಿ ರಾಜರಥ ಚಿತ್ರದ ಸ್ಕ್ರಿಪ್ಟ್ ವರ್ಕ್​ ಕೂಡ ನಡೀತಿತ್ತಂತೆ. ಕಿಚ್ಚನ ಸ್ಟೈಲ್​ ನೋಡಿ ಇಂಪ್ರೆಸ್​ ಆದ ಅನೂಪ್​ ಬಂಡಾರಿ ರಾಜರಥದಲ್ಲಿ ವಿಶ್ವನ ರೋಲ್​ಗೆ ಇದೇ ಕಾಸ್ಟ್ಟ್ಯೂಮ್​​ ಅಂತ ಫಿಕ್ಸ್ ಆಗಿದ್ದಾರೆ. ಈಗ ಕಾಲಿವುಡ್ ನಟ ಆರ್ಯ ಸುದೀಪ್​​ ಸ್ಟೈಲ್​​ನಲ್ಲೇ ರಾಜರಥ ಚಿತ್ರದುದ್ದಕ್ಕು ಮಿಂಚಲಿದ್ದಾರೆ…
ಒಟ್ಟಿನಲ್ಲಿ ರಾಜರಥ ಸಿನಿಮಾದಲ್ಲಿ ಕಿಚ್ಚನ ಫ್ಲೇವರ್​ ಇದೆ.. ದೊಡ್ಮನೆ ಹುಡುಗ ಪುನೀತ್​ ರಾಜ್​ಕುಮಾರ್ ಪವರ್​ ಇದೆ.. ಇದ್ರ ಜತೆ ಆರ್ಯ ಸುದೀಪ್​​​ರನ್ನ ಫಾಲೋ ಮಾಡ್ತಿದ್ದಾರೆ.. ಹೀಗಾಗಿ ಸುದೀಪ್​​ ಕನ್ನಡ, ತೆಲುಗು, ತಮಿಳು, ಹಿಂದು ಇಂಗ್ಲೀಷ್​​ ಇಂಡಸ್ಟ್ರಿಯ ಮಂದಿಗೆ ಫೆವರಿಟ್ ಆಗಿದ್ದಾರೆ.. ಇದೆಲ್ಲಾ ಸುದೀಪ್​ ವ್ಯಕ್ತಿತ್ವ ಎಂತಾದ್ದು ಅನ್ನೋದನ್ನ ಬಿಂಬಿಸುತ್ತೆ.