ಕ್ರಿಸ್ಮಸ್ ವೇಳೆಗೆ ತೆರೆಗೆ ಬರಲಿದೆ ಬಹುನೀರಿಕ್ಷಿತ ಕೋಟಿಗೊಬ್ಬ-3..!!

ಸುದೀಪ್​ ಸಿನಿಮಾಗಳೇ ಹಾಗೆ… ಆರಂಭಕ್ಕೂ ಮೊದಲೇ ಭರ್ಜರಿ ಹೈಪ್​ ಕ್ರಿಯೇಟ್​ ಮಾಡುತ್ತೆ. ಇದೀಗ ಕೋಟಿಗೊಬ್ಬ 3 ಕೂಡ ಇದಕ್ಕೆ ಹೊರತಲ್ಲ. ಕಿಚ್ಚ ಮತ್ತೊಮ್ಮೆ ಕೋಟಿಗೊಬ್ಬನ ಅವತಾರದಲ್ಲಿ ಕಾಣಿಸಿಕೊಳ್ತಾರೆ ಅಂದಾಗ್ಲೇ ಫ್ಯಾನ್ಸ್​ ಥ್ರಿಲ್​ ಆಗಿದ್ರು.

ಕೋಟಿಗೊಬ್ಬ ಅನ್ನುವ ಟೈಟಲ್​​​ಗೇ ಒಂದು ಖದರ್​​​ ಇದೆ. ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿದ ‘ಕೋಟಿಗೊಬ್ಬ’ ಸೂಪರ್ ಹಿಟ್ ಆಗಿತ್ತು. ಆ ಬಳಿಕ ಕಳೆದ ವರ್ಷವಷ್ಟೇ ಕಿಚ್ಚ ಸುದೀಪ್ ‘ಕೋಟಿಗೊಬ್ಬ 2’ ಸಿನಿಮಾ ಮಾಡಿದ್ದರು. ಈ ಸಿನಿಮಾ ಕೂಡ ಭರ್ಜರಿ ಯಶಸ್ಸು ಗಳಿಸಿತ್ತು. ಚಿತ್ರದಲ್ಲಿ ಕಿಚ್ಚನ ಸ್ಟೈಲೀಶ್​ ಅವತಾರಕ್ಕೆ ಫ್ಯಾನ್ಸ್​ ಫಿದಾ ಆಗಿದ್ರು. ಇದೀಗ ‘ಕೋಟಿಗೊಬ್ಬ 3′ ಸಿನಿಮಾ ಕೂಡ ದೊಡ್ಡ ಮಟ್ಟದ ಟಾಕ್​ ಕ್ರಿಯೆಟ್ ಮಾಡಿದೆ. ಸಿನಿಮಾ ಸೆಟ್ಟೆರೋ ಮೊದಲೇ ಇನ್ನಿಲ್ಲದ ಹೈಪ್​​ ಕ್ರಿಯೆಟ್​​ ಮಾಡಿದೆ. ಅದಂಹಾಗೆ ಸೂರಪ್ಪ ಬಾಬು ನಿರ್ಮಿಸಲಿರುವ ಕೋಟಿಗೊಬ್ಬ3’ ಸಿನಿಮಾಕ್ಕೆ ನವ ನಿರ್ದೇಶಕ ಕಾರ್ತಿಕ್ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಅಂದಹಾಗೆ ಕೋಟಿಗೊಬ್ಬ 3 ಸಿನಿಮಾದ ಪ್ರಿ ಪ್ರೊಡಕ್ಷನ್​​ ವರ್ಕ್ ತುಂಬಾ ಫಾಸ್ಟಾಗಿ ನಡೆಯುತ್ತಿದೆ. ಏಪ್ರಿಲ್​ 16ರಿಂದ ಸಿನಿಮಾದ ಶೂಟಿಂಗ್​ ಶುರುವಾಗಲಿದೆ. ಇದೀಗ ಸಿನಿಮಾ ಟೀಮ್​​ ಲೊಕೇಶನ್​​ಗಳ ಹುಡುಕಾಟ ನಡೆಯುತ್ತಿದೆ. ಮೊದಲ ಶೆಡ್ಯೂಲ್​ನಲ್ಲಿ ಬೆಂಗಳೂರಿನಲ್ಲಿ ಶೂಟಿಂಗ್​ ನಡೆಯಲಿದೆ. ಕೋಟಿಗೊಬ್ಬ 3 ಸಿನಿಮಾದ ಸೆಕೆಂಡ್​ ಹಾಫ್​ ಚಿತ್ರೀಕರಣ ಆಗೋದು ಸರ್ಬಿಯಾ ಕಂಟ್ರಿಯ ಬೆಲ್​ಗ್ರೇಡ್ ಸಿಟಿಯಲ್ಲಿ ಹೀಗಾಗಿ ಅಲ್ಲಿ ಸುಮಾರು 40 ದಿನಗಳ ಶೂಟಿಂಗ್​ ನಡೆಯಲಿದೆ.

ಅದರಲ್ಲಿ 30 ದಿನ ಆ್ಯಕ್ಷನ್​ ಮತ್ತು ಚೇಸಿಂಗ್​ ಸೀಕ್ವೆನ್ಸ್​ಗಳ ಚಿತ್ರೀಕರಣವೇ ನಡೆಯಲಿದೆ. ಹೌದು…. ಕೋಟಿಗೊಬ್ಬ 3 ಚಿತ್ರದಲ್ಲಿ ಮೈ ನವಿರೇಳಿಸುವ ಆ್ಯಕ್ಷನ್​ ದೃಶ್ಯಗಳಿರಲಿದೆ. ಯಾಕಂದ್ರೆ ಹಾಲಿವುಡ್​​​ನ ಪ್ರಖ್ಯಾತ ಸ್ಟಂಟ್ ಡೈರೆಕ್ಟರ್ ಲೀ ವಿಟ್ಟಾಕರ್ ಚಿತ್ರದ ಆ್ಯಕ್ಷನ್​ ದೃಶ್ಯಗಳನ್ನು ಕಂಪೋಸ್​ ಮಾಡಲಿದ್ದಾರೆ. ‘ಪರ್ಲ್ ಹಾರ್ಬರ್’ ಅಂತಹ ಹಾಲಿವುಡ್ ಚಿತ್ರಗಳಿಗೆ ಮೈನವಿರೇಳಿಸುವ ಸಾಹಸವನ್ನು ಸಂಯೋಜಿಸಿದ್ದ ಲೀ ವಿಟ್ಟಾಕರ್. ಬಾಹುಬಲಿ ಲಿಂಗಾ ಮೊದಲಾದ ಚಿತ್ರದಲ್ಲೂ ರೋಚಕ ಆ್ಯಕ್ಷನ್​ ದೃಶ ಕಂಪೋಸ್​​ ಮಾಡಿ ಪ್ರೇಕ್ಷಕರನ್ನ ಉಗುರು ಕಡಿಯುವಂತೆ ಮಾಡಿದ್ದು ಇದೇ ಲೀ ವಿಟ್ಟಾಕರ್. ಕೋಟಿಗೊಬ್ಬ 3 ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು. ವಿಷ್ಣುದಾದ ನಟನೆಯ ಕೋಟಿಗೊಬ್ಬ, ಕಿಚ್ಚನ ಕೋಟಿಗೊಬ್ಬ 2 ಸಿನಿಮಾಗಳಿಗೆ ಹಣ ಹಾಕಿದ್ದು ಕೂಡ ಸೂರಪ್ಪ ಬಾಬು. ಇದೀಗ ಕೋಟಿಗೊಬ್ಬ 3 ಕೂಡ ಅವರದ್ದೆ ಪ್ರೊಡಕ್ಷನ್​​. ಇಡೀ ಸಿನಿಮಾವನ್ನು ತುಂಬಾ ಅದ್ದೂರಿಯಾಗಿ ನಿರ್ಮಿಸಲಿದ್ದಾರೆ. ಕ್ರಿಸ್​ಮಸ್​ ಹೊತ್ತಿಗೆ ಸಿನಿಮಾ ರಿಲೀಸ್​ ಆಗಲಿದೆ.