ಕರಾವಳಿ ಚೆಲುವೆ ಪಾಯಲ್​ ರಾಧಾಕೃಷ್ಣ್​​ ಪೋಟೋ ಶೂಟ್​ ಹೇಗಿದೆ ಗೊತ್ತಾ?

ಒಂದು ಫೋಟೋಶೂಟ್​ ಮಾಡ್ಕೊಳ್ಳೋದು ಸಿನಿಮಾ ಮಂದಿಯ ಹೊಸ ಟ್ರೆಂಡ್​​. ಅದರಲ್ಲೂ ಸಿನಿಮಾ ನಾಯಕಿಯರು ಫೋಟೋಶೂಟ್​ ಮಾಡಿಸುತ್ತಲೇ ಇರ್ತಾರೆ. ಇದಕ್ಕೆ ಸ್ಯಾಂಡಲ್​ವುಡ್​ ಚೆಲುವೆಯರು ಕೂಡ ಹೊಸತಲ್ಲ. ಇದೀಗ ಚಂದನವನದ ಚೆಲುವೆ ಪಾಯಲ್​ ರಾಧಾಕೃಷ್ಣ ಸಖತ್​ ಪೋಸ್​ ಕೊಟ್ಟಿದ್ದಾಳೆ.

ಪಾಯಲ್​​ ಕರಾವಳಿ ಚೆಲುವೆ. ಬೆಂಗಳೂರು ಅಂಡರ್​ವಲ್ಡ್​ ಸಿನಿಮಾದಲ್ಲಿ ನಟಿಸಿದ್ದ ಈ ಚೆಲುವೆ ತಾನು ಪರ್ಫೆಕ್ಟ್​ ಹೀರೋಯಿನ್​ ಆಗಬಲ್ಲೆ ಅಂತ ತೋರಿಸಿ ಕೊಟ್ಟಾಗಿದೆ. ಅದಂಹಾಗೆ ಬೆಂಗಳೂರು ಅಂಡರ್​ವಲ್ಡ್​ ಡೆಡ್ಲಿ ಹೀರೋ ಆದಿತ್ಯ ನಾಯಕನಾಗಿ ನಟಿಸಿದ್ದ ಸಿನಿಮಾ ಬೆಂಗಳೂರು ಅಂಡರ್​ವಲ್ಡ್​ ಸಿನಿಮಾದಲ್ಲಿ ಮುದ್ದು ಮುದ್ದಾಗಿ ಕಾಣಿಸಿದ್ದ ಪಾಯಲ್​ಗೆ ಕನ್ನಡದಲ್ಲಿ ಸಾಕಷ್ಟು ಅವಕಾಶ ಹುಡ್ಕೊಂಡು ಬಂದಿತ್ತು. ಆದ್ರೆ ಮುಂಬೈ ಹೋಗಿ ತರಬೇತಿ ಪಡೆದು ಬಂದಿರುವ ಚೆಲುವೆ ಕೆಲ ಹೊಸ ಪ್ರಾಜೆಕ್ಟ್​ಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾಳೆ.

ಈ ಮಧ್ಯೆ ಪಾಯಲ್​ ಹೊಸ ಫೋಟೋ ಶೂಟ್​ ಮಾಡಿಸಿದ್ದಾಳೆ. ಕ್ಯಾಮರ ಮಂದೆ ಕರಾವಳಿ ಬ್ಯೂಟಿ ಸಖತ್​ ಹಾಟ್​ ಪೋಸ್​ ಕೊಟ್ಟಿದ್ದಾಳೆ. ಹೊಟೇಲ್​, ರೆಸಾರ್ಟ್​್ಗಳಲ್ಲಿ ಕಲರ್​ಫುಲ್​ ಬ್ಯಾಕ್​ಡ್ರಾಪ್​ನಲ್ಲಿ ಪಾಯಲ್​​ ಸೆಕ್ಸಿ ಲುಕ್​ ಕೊಟ್ಟಿದ್ದಾಳೆ. ಕಲರ್​ಫುಲ್​ ಡ್ರೆಸ್​ ಫೋಟೋಶೂಟ್​​ನ ಮತ್ತೊಂದು ಹೈಲೈಟ್​. ಸಾರಿ ತುಂಡುಡುಗೆ ಸೇರಿದಂತೆ ಡಿಫರೆಂಟ್​ ಡಿಫರೆಂಟ್​ ಕಾಸ್ಟ್ಯೂಮ್​​​ನಲ್ಲಿ ಪೋಸ್​​ ಕೊಟ್ಟಿದ್ದಾರೆ. ವಿಶೇಷ ಅಂದ್ರೆ ಕಡಲ ಕಿನಾರೆಯಲ್ಲೂ ಈ ಫೋಟೋಶೂಟ್​ ನಡೆದಿದೆ. ಸಮುದ್ರ ದಂಡೆಯಲ್ಲಿ ಪಾಯಲ್​ ಪೋಸ್​ ಸಖತ್ತಾಗಿದೆ. ಈ ಫೋಟೋ ಶೂಟ್ ನೊಡಿದ್ರೆ ಈ ಚೆಲುವೆಗೆ ಮತ್ತಷ್ಟು ಅವಕಾಶಗಳು ಬರೋದರಲ್ಲಿ ಅನುಮಾನ ಇಲ್ಲ.