ಪವರ್ ಸ್ಟಾರ್ ಪುನೀತ್ ಹೊಸ ಚಿತ್ರ ಯಾವುದು ಗೊತ್ತಾ?

ಈ ಹಿಂದೆ ಪುನೀತ್​ ರಾಜ್​ಕುಮಾರ್​ ಚಿತ್ರಕ್ಕೆ ರಾಜಕುಮಾರ ಅನ್ನುವ ಟೈಟಲ್​ ಫಿಕ್ಸ್​ ಆದಾಗ ಎಲ್ಲರೂ ಥ್ರಿಲ್​ ಆಗಿದ್ರು. ಅಪ್ಪು ತಂದೆಯ ಹೆಸರನ್ನೇ ಚಿತ್ರಕ್ಕೆ ಇಟ್ಟಿದ್ದಲ್ಲದೆ ಒಂದು ಸುಂದರ ಕಥೆಯನ್ನು ಕನ್ನಡ ಸಿನಿ ಪ್ರೇಕ್ಷಕರ ಮನಸ್ಸು ಮುಟ್ಟಿಸಿದ್ರು. ಇದೀಗ ಪುನೀತ್​​ ಹೊಸ ಚಿತ್ರಕ್ಕೆ ನಟ ಸಾರ್ವಭೌಮ ಅನ್ನುವ ಟೈಟಲ್​ ಫಿಕ್ಸ್​​ ಆಗಿದೆ. ವಿಶೇಷ ಅಂದ್ರೆ ಇದು ವರನಟ ಡಾ. ರಾಜ್​ಕುಮಾರ್​ಗೆ ಸಿಕ್ಕಿದ ಬಿರುದು. ಅಪ್ಪು ಈಗ ಈ ಹೆಸರಿನಲ್ಲಿ ಸಿನಿಮಾ ಮಾಡ್ತಿರೋದು ಕೂಡ ಕುತೂಹಲಕ್ಕೆ ಕಾರಣವಾಗಿದೆ.

adಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ‘ನಟ ಸಾರ್ವಭೌಮ’ ಚಿತ್ರ ಈಗಾಗಲೇ ಶೂಟಿಂಗ್ ಆರಂಭಿಸಿದೆ. ಫಸ್ಟ್ ಲುಕ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಟೀಸರ್ ನಿಂದ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿ ಹಾಕಿದೆ. ಸಿನಿಮಾದ ಫಸ್ಟ್​​​ ಲುಕ್​​​ ಮತ್ತು ​ ಫೋಟೋ ಶೂಟ್​ ಥ್ರಿಲ್ ಹುಟ್ಟಿಸಿತ್ತು. ಯಾಕಂದ್ರೆ ಅಪ್ಪು ಇಲ್ಲಿ ಫುಲ್​ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟೈಲೀಶ್​ ಕಾಸ್ಟ್ಯೂಮ್​ನಲ್ಲಿ ಕೈಯಲ್ಲಿ ಕ್ಯಾಮೆರಾ ಹಿಡಿದು ಕ್ಯಾಮೆರಾಕ್ಕೆ ಪೋಸ್​​ ಕೊಟ್ಟಿದ್ದಾರೆ ಅಪ್ಪು. ಅಂದಹಾಗೆ ನಟ ಸಾರ್ವಭೌಮ ಔಟ್ ಆ್ಯಂಡ್​ ಔಟ್​​​​​​ ಸ್ಟೈಲೀಶ್​​ ಸಿನಿಮಾ. ಪವರ್​ ಸ್ಟಾರ್ ಪುನೀತ್​ ಸಿನಿಮಾದುದ್ದಕ್ಕು ಸ್ಟೈಲೀಶ್​ ಲುಕ್​​ನಲ್ಲಿ ಮಿಂಚ್ತಾರೆ.. ಇದ್ರ ಜೊತೆ ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್​ ಹಾಗು ಲವ್ ಸಬ್ಜೆಕ್ಟ್​ ಮೇಲೆ ಕಥೆ ಹೆಣೆದಿದ್ದಾರೆ ನಿರ್ದೇಶಕ ಪವನ್ ಒಡೆಯರ್​​. ನಟ ಸಾರ್ವಭೌಮ ಸಿನಿಮಾದಲ್ಲಿ ಅಪ್ಪು ಜೊತೆ ಜೊತೆಗೇ ಸಾಗೋ ಮತ್ತೊಂದು ಕ್ಯಾರೆಕ್ಟರ್ ಚಿಕ್ಕಣ್ಣ.. ಇಲ್ಲಿ ಚಿಕ್ಕಣ್ಣ ಪುನೀತ್​ ಫ್ರೆಂಡ್​ ಆಗಿ ನಟಿಸ್ತಿದ್ದಾರೆ. ರಾಜಕುಮಾರ ಪುನೀತ್​​ಗೆ ರಾಣಿಯಾಗಿ ರಚಿತಾ ರಾಮ್ ಬಣ್ಣ ಹಚ್ತಿದ್ದಾರೆ.

ಈ ಹಿಂದೆ ಚಕ್ರವ್ಯೂಹ ಸಿನಿಮಾದಲ್ಲಿ ಪುನೀತ್​​ ಮತ್ತು ರಚಿತಾ ಜೋಡಿ ಮೋಡಿ ಮಾಡಿತ್ತು. ಇದೀಗ ಅಪ್ಪು ಮತ್ತು ಡಿಂಪಲ್​​ಕ್ವೀನ್​​ ಜೋಡಿ ಈಗ ನಟ ಸಾರ್ವಭೌಮನಲ್ಲೂ ಮೋಡಿ ಮಾಡೋದು ಗ್ಯಾರಂಟಿ.ಅಂದಹಾಗೆ ನಟ ಸಾರ್ವಭೌಮ ಸಿನಿಮಾದ ಬಗ್ಗೆ ಒಂದು ಸುದ್ದಿ ಚರ್ಚೆಯಾಗುತ್ತಿತ್ತು. ಅದೇನಂದ್ರೆ ‘ನಟಸಾರ್ವಭೌಮ’ ಸಿನಿಮಾ ಬಹುಶಃ ರೀಮೇಕ್ ಇರಬಹುದಾ ಅನ್ನೋದು. ಯಾಕಂದ್ರೆ ಅಪ್ಪು ಇತ್ತೀಚೆಗೆ ಮಾಡಿದ ಚಕ್ರವ್ಯೂಹ, ಅಂಜನಿಪುತ್ರ ಸಿನಿಮಾಗಳು ರಿಮೇಕ್​​. ಹೀಗಾಗಿ ಫ್ಯಾನ್ಸ್​ಗೆ ಈ ಅನುಮಾನ ಇತ್ತು. ಆದ್ರೆ ಅದಕ್ಕೀಗ ಉತ್ತರ ಸಿಕ್ಕಿದೆ. ‘ನಟಸಾರ್ವಭೌಮ’ ಸಿನಿಮಾ ರೀಮೇಕ್ ಅಲ್ಲ ಎಂದು ಖುದ್ದು ನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ. ಪವನ್​ ಒಡೆಯರ್​ ಟ್ವೀಟ್​ ಮಾಡಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಬಹುಶ: ಇದು ಪುನೀತ್​ ಫ್ಯಾನ್ಸ್​ ಸಂತಸವನ್ನು ಮತ್ತಷ್ಟು ಹೆಚ್ಚಿಸಲಿದೆ.

ಅಂದ್ಹಾಗೆ, ‘ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಾತ್ರವೇನು ಎಂಬುದು ಮತ್ತೊಂದು ಕುತೂಹಲಕಾರಿ ಅಂಶವಾಗಿದೆ. ಕೈಯಲ್ಲಿ ಕ್ಯಾಮೆರಾ ಕೊಟ್ಟು ಫೋಟೋಶೂಟ್ ಮಾಡಿಸಿರುವ ನಿರ್ದೇಶಕರು ಪಾತ್ರದ ಬಗ್ಗೆ ಮಾಹಿತಿ ನೀಡಿಲ್ಲ. ಆದ್ರೆ ಪುನೀತ್​​ ಫೋಟೋ ಜರ್ನಲಿಸ್ಟ್ ಇರಬಹುದು ಎಂಬ ಲೆಕ್ಕಾಚಾರವನ್ನ ಅಭಿಮಾನಿಗಳು ಹಾಕುತ್ತಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಟಸಾರ್ವಭೌಮ ಸಿನಿಮಾ ಸೆಟ್ಟೇರಿದ್ದು, ಈಗಾಗ್ಲೇ ಶೂಟಿಂಗ್​ ಶರುರುವಾಗಿದೆ.