ಟಾಲಿವುಡ್ ನಲ್ಲಿ ಈಗ ಅರುಂಧತಿ- ೨ ಹವಾ! ಏನೀ ಚಿತ್ರದ ವಿಶೇಷತೆ ಇಲ್ಲಿದೆ ಡಿಟೇಲ್ಸ್ !!

ಟಾಲಿವುಡ್ ನ ಅರುಂಧತಿ ಸಿನಿಮಾ. ಈ ಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ . ಟಾಲಿವುಡ್ ಸಿನಿರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಠಿಸಿದ ಅರುಂಧತಿ ಚಿತ್ರ ಟಾಲಿವುಡ್ ಬಿಗ್ ಸ್ಟಾರ್ ಗಳ ಚಿತ್ರಗಳಿಗೆಸೆಡ್ಡು ಹೊಡೆಯುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿ ಟಾಲಿವುಡ್ ಬಾಕ್ಸ್ ಆಫೀಸ್ ನಲ್ಲಿಯೇ ಚಿಂದಿ ಉಡಾಯಿಸಿತ್ತು. ಸದ್ಯ ಟಾಲಿವುಡ್ ನಲ್ಲಿ ಮತ್ತೊಮ್ಮೆ ಸದ್ದು ಮಾಡಲು ಅರುಂಧತಿ-2 ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಈ ವಿಚಾರದ ಬಗೆಗೆ ಮತ್ತಷ್ಟು ಮಾಹಿತಿ ತಿಳಿಯಬೇಕಾದರೆ ಈ ಕೆಳಗಿನ ಸ್ಟೋರಿ ಓದಿ.

ad

ಹೌದು ಅರುಂಧತಿ ಎಂಬ ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದು ಅನುಷ್ಕಾ ,ಇತಿಹಾಸದ ಪುನರ್ ಜನ್ಮ ಕಥೆ ಒಳಗೊಂಡಿದ್ದ ಅರುಂಧತಿ ಚಿತ್ರ ಒಂದು ನಾಯಕಿ ಪ್ರಧಾನ ಚಿತ್ರವಾಗಿತ್ತು,ಲ ಅನುಷ್ಕ ಶೆಟ್ಟಿ ಅಭಿನಯವಂತೂ ಅದ್ಬುತವಾಗಿತ್ತು. ಅನುಷ್ಕ ಶೆಟ್ಟಿ ಸಿನಿಮಾದ ಮೈನ್ ಹೈಲೆಟ್ ಆಗಿದ್ದರು, ಜೊತೆಗೆ ಖಳನಾಯಕನಾಗಿ ಅಭಿನಯಿಸಿದ್ದ ಸೋನು ಸೂದ್ ನಟನೆಯು ಅಷ್ಟೇ ಅಮೋಘವಾಗಿತ್ತು. ಇನ್ನೂ ಅರುಂಧತಿ ಚಿತ್ರ ಅನುಷ್ಕ ಶೆಟ್ಟಿ ಕೆರಿಯರ್ ಗೆ ಅತೀ ದೊಡ್ಡ ತಿರುವು ತಂದು ಕೊಟ್ಟ ಚಿತ್ರ. ಈ ಚಿತ್ರದ ಮೂಲಕ ಅನುಷ್ಕಾ ತೆಲುಗು ಜನರ ಮನೆ ಮನೆಯ ಮಾತಾಗಿ ಯಶಸ್ಸು ಗಳಿಸಿದ್ದರು.

ಸದ್ಯ ಇದೀಗಾ ಟಾಲಿವುಡ್ ನಲ್ಲಿ ಮತ್ತೊಮ್ಮೆ ಅರುಂಧತಿ ಹೆಸರಿನಲ್ಲಿ ಅರುಂಧತಿ – 2 ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಸದ್ಯ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಾಡುವ ಪ್ಲಾನ್ ನಿರ್ಮಾಪಕರಾಗಿದ್ದು, ಹಾಲಿವುಡ್ ತಂತ್ರಜ್ಞರನ್ನು ಚಿತ್ರದಲ್ಲಿ ಬಳಸಿಕೊಂಡು ಗ್ರಾಫಿಕ್ ಕೆಲಸ ಮಾಡಸಲಾಗುತ್ತಿದೆ. ಎಂದು ಹೇಳಲಾಗುತ್ತಿದೆ.

ಇನ್ನೂ ಅರುಂಧತಿ ಚಿತ್ರದಲ್ಲಿ ನಟಿಸಿದ್ದ ಅನುಷ್ಕಾ ಅವರೆ ಈ ಚಿತ್ರದಲ್ಲಿಯೂ ಸಹ ನಟಿಸಲಿದ್ದಾರೆ ಎಂಬ ಕುತೂಹಲ ಮೂಡುತ್ತದೆ. ಆದರೆ ಈ ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ಎಂಟ್ರಿ ಆಗಿದೆ. ಅದು ಯಾರಾಪ್ಪಾ ಅಂದರೆ ‘ಆರ್ ಎಕ್ಸ್ 100’ ಸಿನಿಮಾದ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿ ಮೊದಲ ಸಿನಿಮಾದಲ್ಲಿಯೇ ಹಸಿಬಿಸಿ ದೃಶ್ಯದಲ್ಲಿ ಬೋಲ್ಡ್ ಆಗಿ ನಟಿಸುವ ಮೂಲಕ ಸದ್ದು ಮಾಡಿದ್ದ ಪಾಯಲ್ ರಜಪೂತ್ ಈಗ ‘ಆರುಂಧತಿ 2’ ಚಿತ್ರದಲ್ಲಿ ನಾಯಕಿ ಕಾಣಿಸಿಕೊಳ್ಳುತ್ತಾರೆ ಎಂಬ ಗಾಸಿಪ್ ಇದೀಗಾ ಟಾಲಿವುಡ್ ಅಂಗಳದಲ್ಲಿ ಹರಡಿದೆ.

ಸದ್ಯ ಪಾಯಲ್ ಗೆ ಈ ದೊಡ್ಡ ಅವಕಾಶ ಸಿಕ್ಕಿದರೆ ಈ ಪಾತ್ರವನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎನ್ನುವ ಕುತೂಹಲ ಇದ್ದು, ಹಿಂದಿನ ‘ಅರುಂಧತಿ’ ಸಿನಿಮಾಗೂ ಹಾಗೂ ಈಗ ಬರಲಿರುವ ಅರುಂಧತಿ -2 ಸಿನಿಮಾಗೂ ಏನಾದರೂ ನಂಟೂ ಇದೆಯೇ ಎಂಬುವುದಕ್ಕೆ ಸದ್ಯಕ್ಕೆ ಯಾವುದೇ ಮಾಹಿತಿ ದೊರೆತಿಲ್ಲ.