ಉತ್ತಮ ಕತೆಯಿಂದ ಜನರ ಮನಗೆಲ್ತಿದೆ ಗುಳ್ಟು!

ಕನ್ನಡ ಚಿತ್ರರಂಗದಲ್ಲಿಗ ಹೊಸತನದ ಪರ್ವಕಾಲ. ಸಾಲು ಸಾಲು ಹೊಸ ಮಾದರಿಯ ಸಿನಿಮಾಗಳು ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿ, ಹೊಸತನದ ಕಥೆ, ನಿರೂಪಣೆ, ತಾಂತ್ರಕತೆ, ನಿರ್ದೇಶನದಿಂದ ಪ್ರೇಕ್ಷಕರ ಮನ ಗೆಲ್ಲುತ್ತಿದೆ.

ad


ಇದೀಗ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಹೊಸತನದ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಶೀರ್ಷಿಕೆ ಹಾಗೂ ಪೋಸ್ಟರ್, ಟೀಸರ್​​ ಹಾಗು ಟ್ರೇಲರ್​​ ಮೂಲಕವೇ ತೀವ್ರ ಕುತೂಹಲ ಮೂಡಿಸಿದ್ದ ‘ಗುಳ್ಟು’ ಥಿಯೇಟ್​​ರ್​​ನಲ್ಲಿ ಭರ್ಜರಿ ಸೌಂಡ್​ ಮಾಡ್ತಿದೆ.  ಆಧುನಿಕ ಜಗತ್ತನ್ನು ಹೆಚ್ಚು ಆತಂಕಕ್ಕೀಡು ಮಾಡುತ್ತಿದೆ ಸೈಬರ್‌ ಕ್ರೈಮ್‌. ಅದರಲ್ಲೂ ಆನ್‌ಲೈನ್‌ ದೋಖಾಗಳು ಎಲ್ಲರನ್ನೂ ತಲ್ಲಣಗೊಳಿಸುತ್ತಿವೆ. ಇಂತಹ ಗಂಭೀರ ವಿಷಯಗಳನ್ನೂ ಇಟ್ಟುಕೊಂಡು ‘ಗುಳ್ಟು’ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ. ಸಂಕೀರ್ಣವಾದ ವಿಷಯವನ್ನು ಸಾಮಾನ್ಯನಿಗೂ ಅರ್ಥವಾಗುವಂತೆ ಕಟ್ಟಿಕೊಟ್ಟಿರೋದೇ ಸಿನಿಮಾದ ಮೇನ್​​ ಹೈಲೈಟ್​​. ಹಾಗಾಗಿ ಸಿನಿಮಾ ನೋಡಿದ ಪ್ರತಿ ಪ್ರೇಕ್ಷಕನ ಮುಖದಲ್ಲೂ ಆತಂಕದ ಛಾಯೆ ಕಾಣುತ್ತದೆ. ಸಿನಿಮಾ ನೋಡುತ್ತಾ ನೋಡುತ್ತಾ ಕೂತಲ್ಲೇ ನಮ್ಮನ್ನು ಬೆಚ್ಚುವಂತೆ ಮಾಡುತ್ತೆ. ಅಷ್ಟರಮಟ್ಟಿಗೆ ಗುಳ್ಟು ಸಿನಿಮಾ ಪರಿಣಾಮಕಾರಿಯಾಗಿದೆ. ಬಡತನದಲ್ಲೇ ಬೆಳೆದ ಕಥಾನಾಯಕ ಹಣಕ್ಕೋಸ್ಟರ ವೆಬ್‌ ತಾಣಗಳನ್ನು ಹ್ಯಾಕ್‌ ಮಾಡುವುದರ ಜತೆಗೆ ಸುಧಾರ್‌ ಕಾರ್ಡ್‌ ಮಾಹಿತಿಯನ್ನೂ ಸೋರಿಕೆ ಮಾಡುವ ಸಾಹಸಕ್ಕೆ ಕೈ ಹಾಕೋದು, ಮತ್ತು ಅದರ ತನಿಖೆಯೇ ಸುತ್ತ ನಡೆಯೋದೇ ಗುಳ್ಟು ಸಿನಿಮಾದ ಸ್ಟೋರಿ.

ಸಿನಿಮಾಕ್ಕಾಗಿ ಆಯ್ದುಕೊಂಡಿರುವ ವಿಷಯವೇ ಹೊಸದಾಗಿರುವುದರಿಂದ ಮೊದಲ ದೃಶ್ಯದಿಂದ ಕೊನೆವರೆಗೂ ಥ್ರಿಲ್‌ ನೀಡುತ್ತಲೇ ಚಿತ್ರ ಸಾಗುತ್ತದೆ. ಕಳೆದ ವಾರವಷ್ಟೇ ತೆರೆಕಂಡಿದ್ದ ‘ಗುಳ್ಟು’ ಚಿತ್ರಕ್ಕೆ ಎಲ್ಲರಿಂದಲೂ ಮೆಚ್ಚುಗೆ ಸಿಗುತ್ತಿದೆ. ಸಿನಿ ಅಭಿಮಾನಿಗಳು, ಸಿನಿ ತಾರೆಯರು ಎಲ್ಲರೂ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಇದೀಗ ಮತ್ತೊಂದು ಸಂತಸದ ಸುದ್ದಿ ಬಂದಿದೆ. ಸ್ಯಾಂಡಲ್​ವುಡ್​​ನಲ್ಲಿ ಭರ್ಜರಿ ಸೌಂಡ್​ ಮಾಡ್ತಿರೋ ಗುಳ್ಟು ಸಿನಿಮಾ ಈಗ ಪರಭಾಷೆಯಲ್ಲೂ ಮೋಡಿ ಮಾಡಲು ಸಿದ್ದವಾಗುತ್ತಿದೆ. ಹೌದು.. ಇಂತಹದೊಂದು ಸುದ್ದಿ ಗಾಂಧಿನಗರದಲ್ಲಿ ಓಡಾಡ್ತಿದೆ. ಗುಳ್ಟು’ ಸಿನಿಮಾದ ಯಶಸ್ಸು ನೋಡಿದ ಕೆಲವು ನಿರ್ಮಾಪಕರು ‘ಗುಳ್ಟು’ ಸಿನಿಮಾವನ್ನ ಮಲಯಾಳಂ ಮತ್ತು ತಮಿಳಿನಲ್ಲಿ ರೀಮೇಕ್ ಮಾಡಲು ಮನಸ್ಸು ಮಾಡಿದ್ದಾರೆ. ಸದ್ಯ ರೀಮೇಕ್ ಕುರಿತಾಗಿ ಮಾತುಕತೆ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಸದ್ಯದಲ್ಲೇ ಗುಳ್ಟು ಚಿತ್ರ ಕರ್ನಾಟಕದ ಆಚೆಯೂ ಮಿಂಚಲಿದೆ. ಅಂದಹಾಗೆ ನವೀನ್ ಶಂಕರ್ ಮತ್ತು ಸೋನು ಗೌಡ ಅಭಿನಯದ ‘ಗುಳ್ಟು’ ಚಿತ್ರವನ್ನ ಜರ್ನಾಧನ್ ಚಿಕ್ಕಣ್ಣ ನಿರ್ದೇಶನ ಮಾಡಿದ್ದಾರೆ. ಅವಿನಾಶ್, ರಂಗಾಯಣ ರಘು ಅಂತಹ ಕಲಾವಿದರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ಬುತ ಕೆತೆ ಇದ್ರೆ ಬಿಗ್​ ಸ್ಟಾರ್​ ಇಲ್ಲದಿದ್ರೂ ಗೆಲ್ಬಹುದು ಅನ್ನೋದನ್ನು ಗುಳ್ಟು ಕೂಡ ಸಾಭೀತುಪಡಿಸಿದೆ.