ಆಪರೇಶನ್ ಕಮಲದ ಕಿಂಗ್ ಪಿನ್ ಗಳಿಗೆ ಪೊಲೀಸ್ ಶಾಕ್!

ಅಪರೇಶನ್ ಕಮಲಕ್ಕೆ ಸಹಕರಿಸಿದ್ದರು ಎನ್ನಲಾದ ಇಬ್ಬರ ಮನೆ ಮೇಲೆ ನಿನ್ನೆ ನಡೆದಿದ್ದ ದಾಳಿಯನ್ನ ಬೆಂಗಳೂರು ಪೊಲೀಸ್ ಇಲಾಖೆ ಇದು ರಾಜಕೀಯ ಹೊರತಾದ ದಾಳಿ ಎಂದು ಹೇಳಿಕೊಂಡಿದೆ. ದಾಳಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ೨೦೧೭ ಸೆಪ್ಟೆಂಬರ್ ೨೧ ರಂದು ಕಬ್ಬನ್‌ಪಾರ್ಕ್ ಠಾಣೆಯಲ್ಲಿ‌ ಮಹಮ್ಮದ್ ಅಯೂಬ್ ಎಂಬುವರು ನಕಲಿ ದಾಖಲಾತಿಗಳನ್ನ ಸೃಷ್ಠಿಸಿ ಕೆಲವೊಂದು ಪ್ರಾಪರ್ಟೀಸ್ ವಶಪಡಿಸಿಕೊಂಡಿದ್ದಾರೆ ಎಂದು ಉದಯ್ ಹಾಗೂ ನಾಯ್ಡು ಸೇರಿದಂತೆ ನಾಲ್ವರ ಮೇಲೆ ದೂರು ನೀಡಿದ್ದರು. ಈ ವಿಚಾರವಾಗಿ ನಿನ್ನೆ ಕೇಂದ್ರ ವಿಭಾಗದ ಕಬ್ಬನ್ ಪಾರ್ಕ್ ಪೊಲೀಸ್ರು ದಾಳಿ ಮಾಡಿದ್ದು ಕೆಲ ಮಹತ್ತರ ದಾಖಲೆಗಳನ್ನ ವಶಪಡೀಸಕೊಂಡಿದೆ ಎಂದ್ರು. ಕಳೆದ ವರ್ಷ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ಅವರು ಹೇಳಿದರು

ad

 

ಕುಮಾರಸ್ವಾಮಿ ಬಾಯ್ಬಿಟ್ಟಿದ್ದ ಕಿಂಗ್ ಪಿನ್ ಗಳು ಇವ್ರು

ಹೌದು ಈಗ ಪೊಲೀಸ್ರು ದಾಳಿ ಮಾಡಿರುವ ಉದಯ್ ಹಾಗೂ ನಾಯ್ಡು ಅಪರೇಷನ್ ಕಮಲಕ್ಕೆ ಹಣ ವಸೂಲು ಮಾಡುತ್ತಿರುವ ಮಾಹಿತಿಯನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗಗೊಳಿಸಿದ್ದರು. ಅದರಲ್ಲಿ ಈಗ ಇಬ್ಬರ ಮೇಲೆ ದಾಳಿಯಾಗಿದ್ದು ಮುಂದೆ ಜಿಮ್‌ ಸೋಮ ಹಾಗೂ ಪೈಟರ್ ರವಿ ಮೇಲೂ ದಾಳಿ ಆಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳ್ತಾ ಇವೆ.. ಇವ್ರ ಹೆಸ್ರು ಸಹ ಅಪರೇಷನ್ ಕಮಲಕ್ಕೆ ಹಣ ವಸೂಲು ಮಾಡುವ ಕಿಂಗ್ ಪಿನ್ ಗಳ ಸಾಲಿನಲ್ಲಿ ಕೇಳಿ ಬಂದಿತ್ತು