ಹೊಸ ಚಿತ್ರಕ್ಕಾಗಿ ಬದಲಾಯ್ತು ಪವರ್ ಸ್ಟಾರ್​ ಹೇರ್​ಸ್ಟೈಲ್.!!

ಸ್ಯಾಂಡಲವುಡ್​ನಲ್ಲಿ ದೊಡ್ಮನೆ ಕುವರ ಪವರ್ ಸ್ಟಾರ್​ ಪುನೀತ್ ರಾಜಕುಮಾರ್​​ ಸದಾ ವಿಭಿನ್ನ ಚಿತ್ರಗಳು ಹಾಗೂ ಲುಕ್​​ನಿಂದಲೇ ಚಿತ್ರರಸಿಕರ ಮನಗೆದ್ದ ಕಲಾವಿದ. ಇದೀಗ ಸ್ಯಾಂಡಲ್​ವುಡ್​ ಪವರ್ ಸ್ಟಾರ್​ ಪುನೀತ್​ ತಮ್ಮ ಹೊಸ ಚಿತ್ರಕ್ಕಾಗಿ ಹೇರ್​​ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ad


ಹೌದು ಪುನೀತ್​​ ಹೇರ್​ ಸ್ಟೈಲ್​ ಬದಲಾಯಿಸಿಕೊಂಡಿರುವ ಪೋಟೋ ಇದೀಗ ಸಖತ್​ ವೈರಲ್​ ಆಗಿದ್ದು, ಎಲ್ಲೆಡೆ ಸುದ್ದಿಯಾಗಿದೆ.
ಅಂಜನಿಪುತ್ರ ಚಿತ್ರದ ಬಳಿಕ ಕಿರುತೆರೆಯಲ್ಲಿ ಹೆಚ್ಚು ಸಕ್ರಿಯವಾಗಿದ್ದ ಪವರ್ ಸ್ಟಾರ್​ ಪುನೀತ್​, ಇದೀಗ ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಇನ್ನು ಹೆಸರಿಡದ ಈ ಚಿತ್ರ ಪಕ್ಕಾ ಕೌಟುಂಬಿಕ ಕತೆ ಆಧರಿಸಿದ ಚಿತ್ರವಾಗಿದ್ದು, ಇನ್ನು ಟೈಟಲ್​ ಅಂತಿಮವಾಗಿಲ್ಲ. ಚಿತ್ರದಲ್ಲಿನ ಪಾತ್ರಕ್ಕಾಗಿ ಪುನೀತ್ ಈಗಿನ ಟ್ರೆಂಡ್​​ನಂತೆ ಕೇಶವಿನ್ಯಾಸ ಮಾಡಿಸಿಕೊಂಡಿದ್ದಾರೆ.

ಈ ವಿಚಾರವನ್ನು ಸ್ವತಃ ಪವನ್ ಒಡೆಯರ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಮಾರ್ಚ್​ 17 ರಂದು ಪುನೀತ್​ ಹುಟ್ಟುಹಬ್ಬದ ವೇಳೆ ಈ ಚಿತ್ರದ ಫಸ್ಟ್​ ಲುಕ್​ ರಿಲೀಸ್ ಆಗಲಿದೆ. ಇದಕ್ಕಾಗಿಯೇ ಹೇರ್​ ಸ್ಟೈಲ್​ ಬದಲಾಯಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪುನೀತ್​ಗೆ ಜೋಡಿಯಾಗಿ ಪ್ರಿಯಾಂಕಾ ಜ್ವಲಕರ್​ ಆಯ್ಕೆಯಾಗಿದ್ದು, ವೃತ್ತಿಯಲ್ಲಿ ಸಾಫ್ಟವೇರ್​ ಇಂಜೀನಿಯರ್ ಆಗಿರುವ ಪ್ರಿಯಾಂಕ ಸ್ವತಃ ಫ್ಯಾಷನ್​ ಡಿಸೈನರ್. ಒಟ್ಟಿನಲ್ಲಿ ಹೊಸ ಲುಕ್​ ಜೊತೆ ತೆರೆಗೆ ಬರೋ ಅಪ್ಪು ನೋಡಲು ಪ್ರೇಕ್ಷಕರು ಕಾಯ್ತಿದ್ದಾರೆ.