ಹೊಸ ದಾಖಲೆ ಬರೆಯಿತು ಕೆಜಿಎಫ್​​ಮೇಕಿಂಗ್​​​​ ಟ್ರೇಲರ್​!!

Rocking star yash's K.G.F official teaser
Rocking star yash's K.G.F official teaser

ಸ್ಯಾಂಡಲವುಡ್​ನ ರಾಜಾಹುಲಿ ರಾಕಿಂಗ್​ ಸ್ಟಾರ್​ ಯಶ್​ ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸ್ಯಾಂಡಲವುಡ್​​​ ಎಲ್ಲ ನಟರೂ ಯಶ್​ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ.

ಈ ಮಧ್ಯೆ ನಿನ್ನೆ ಹುಟ್ಟುಹಬ್ಬದ ಕೊಡುಗೆಯಾಗಿ ಕೆಜಿಎಫ್​​ ಚಿತ್ರತಂಡ ಕೆಜಿಎಫ್​ ಮೇಕಿಂಗ್​ ಟೀಸರ್​ ಬಿಡುಗಡೆ ಮಾಡಿತ್ತು.
ಬಹುನೀರಿಕ್ಷಿತ ಕೆಜಿಎಫ್​​ ಚಿತ್ರದ ಈ ಟೀಸರ್​​ ಬಿಡುಗಡೆ ಬಳಿಕ ಹೊಸ ದಾಖಲೆಯನ್ನೆ ಸೃಷ್ಟಿಸಿದೆ. ಹೌದು ಬಿಡುಗಡೆಯಾದ 12 ಗಂಟೆಯಲ್ಲೇ ಚಿತ್ರದ ಟ್ರೇಲರ್​ನ್ನು 11 ಲಕ್ಷ ಜನರು ವೀಕ್ಷಣೆ ಮಾಡಿದ್ದು, ಅತಿಕಡಿಮೆ ಅವಧಿಯಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಕೆಜಿಎಫ್​ ಚಿತ್ರದಲ್ಲಿ ನಟ ಯಶ್​ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದು, ಅದಕ್ಕಾಗಿ ತಮ್ಮ ಹೇರ್ ಸ್ಟೈಲ್​​ ಕೂಡ ಬದಲಾಯಿಸಿಕೊಂಡಿದ್ದಾರೆ. ಇದೀಗ ಈ ಚಿತ್ರ ಬಿಡುಗಡೆಮುನ್ನವೇ ಟ್ರೇಲರ್​ನಲ್ಲೇ ಹೊಸ ದಾಖಲೆ ಬರೆದಿದ್ದು, ಚಿತ್ರದ ಬಗ್ಗೆ ಇನ್ನಷ್ಟು ನೀರಿಕ್ಷೆ ಹೆಚ್ಚಿದೆ. ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿರುವ ಚಿತ್ರ ಇನ್ನೆಷ್ಟು ದಾಖಲೆ ಮಾಡಲಿದೆ ಎಂಬುದು ಸಧ್ಯದ ಕುತೂಹಲ.