ಬಂಡೀಪುರಕ್ಕೆ ಮರುಗಿದ ಸ್ಯಾಂಡಲ್ ವುಡ್ : ನೆರವುನೀಡಲು ಸ್ಟಾರ್ ಗಳ ದೌಡು

“ಬಂಡೀಪುರ ಅರಣ್ಯ”ದಲ್ಲಿ ಕಾಡ್ಗಿಚ್ಚು ಹಿನ್ನೆಲೆ, ಬಂಡಿಪುರದತ್ತ ಹೊರಟ‌ ನಟ ದುನಿಯಾ ವಿಜಯ್ . ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ಸಂಬಂಧಿಸಿದ ವಿಚಾರವಾಗಿ ಸಿನಿಮಾ ನಾಯಕರು ದನಿ ಎತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ದುನಿಯಾ ವಿಜಯ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಸಹಾಯ ನೀಡುವಂತೆ ಮನವಿ ಮಾಡಿದ್ದಾರೆ.


ಇದೀಗಾ ದುನಿಯಾ ವಿಜಯ್ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ಸ್ವಯಂ ಸೇವಕರಿಗಾಗಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು‌ ತಾವೇ ಸ್ವತಃ ನೆರವು ನೀಡಲು ಧಾವಿಸಿದ್ದಾರೆ ..ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿ ಆಗಿರುವವರಿಗೆ ಆಹಾರ ನೀರು ಮತ್ತಿತರ ವಸ್ತು ಕೊಂಡೊಯ್ಯುತ್ತಿದ್ದಾರೆ.