ಸೆಟ್ಟೆರ್ತಿದೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಹೊಸ ಚಿತ್ರ!

ರೋರಿಂಗ್ ಸ್ಟಾರ್ ಅಂದಾಕ್ಷಣ ನೆನಪಿಗೆ ಬರೋದು ಉಗ್ರಂ ಸಿನಿಮಾ. ಈ ಚಿತ್ರದಲ್ಲಿ ಖಡಕ್ ಆಗಿ ನಟಿಸಿ ಎಲ್ಲರ ಗಮನ ಸೆಳೆದ ಸ್ಟಾರ್​​ ಶ್ರೀ ಮುರುಳಿ. ಚಂದ್ರ ಚಕೋರಿ ಮೂಲಕ ಸಿನೆಮಾ ರಂಗಕ್ಕೆ ಕಾಲಿಟ್ಟ ಮರಳಿಗೆ ರೀಬರ್ತ್​ ಕೊಟ್ಟಿದ್ದೆ ಉಗ್ರಂ ಸಿನಿಮಾ.

ಉಗ್ರಂ ಬಳಿಕ ಶ್ರೀಮುರಳಿ ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುವ ಜಾಣತನ ತೋರಿಸಿದ್ರು. ಉಗ್ರಂ’ ವೀರಂ ಅಂತ ಗಾಂಧಿನಗರದಲ್ಲಿ ಉಗ್ರ ಪ್ರತಾಪ ಮೆರೆದಿದ್ದ ನಟ ಶ್ರೀಮುರಳಿ, ‘ರಥಾವರ’ ಏರಿ, ಶಿವಣ್ಣನ ಜೊತೆಗೆ ‘ಮಫ್ತಿ’ ಮೂಲಕ ಹ್ಯಾಟ್ರಿಕ್ ಹಿಟ್ ಬಾರಿಸಿದ್ದಾಯ್ತು. ಮೂರು ವರ್ಷಗಳಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಶ್ರೀಮುರಳಿ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಲ್ಲಿಗೆ “ಮಫ್ತಿ’ ಚಿತ್ರದ ಯಶಸ್ಸಿನ ನಂತರ ನಟ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಮುಂದಿನ ಚಿತ್ರ ಯಾವುದು, ಯಾರೂ ಆ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ಗೊಂದಲಗಳಿಗೆ ಈಗ ತೆರೆ ಬಿದ್ದಿದೆ.

“ಭರ್ಜರಿ’ ಚೇತನ್​ ನಿರ್ದೇಶನದ ಹೊಸ ಚಿತ್ರದಲ್ಲಿ ಶ್ರೀಮುರುಳಿ ನಟಿಸುತ್ತಿದ್ದು, ಚಿತ್ರದ ಇಂಟ್ರೋ ವೀಡಿಯೋ ಕೂಡ ಬಿಡುಗಡೆಯಾಗಿದೆ. ಚೇತನ್​​ ಮತ್ತು ಶ್ರೀಮುರುಳಿ ಅನ್ನೋ ಕಅಂಬಿನೇಶನ್​ ಇರೋದರಿಂದ ಸಿನಿಮಾದ ಬಗ್ಗೆ ಆರಂಭದಿಂದ್ಲೇ ನಿರೀಕ್ಷೆ ಹುಟ್ಕೊಂಡಿದೆ. ಇದೀಗ ಈ ಚಿತ್ರದ ಬಗ್ಗೆ ಒಂದಿಷ್ಟು ಡೀಟೈಲ್ಸ್​ ಬಿಟಿಗೆ ಸಿಕ್ಕಿದೆ. ಚೇತನ್​ – ಶ್ರೀಮುರುಳಿ ಕಾಂಬಿನೇಶನ್​​ನ ಹೊಸ ಸಿನಿಮಾದ ಟೈಟಲ್​ ನೆಕ್ಸ್ಟ್​​ ಮಂತ್​ ಫಸ್ಟ್​ ವೀಕ್​ ಲಾಂಚ್​ ಆಗಲಿದೆ. ಇನ್ನು ಶೂಟಿಂಗ್​ ಇಲೆಕ್ಷನ್​ ಬಳಿಕ ಅಂದ್ರೆ ಮೇ ಸೆಕೆಂಡ್​​ ನಡೆಯಲಿದೆ. ಸಿನಿಮಾದ ಪ್ರೀ ಪ್ರೊಡಕ್ಷನ್​ ವರ್ಕ್​ ಈಗ ಶುರುವಾಗಿದೆ.

ಕಳೆದ ಮೂರು ಸಿನಿಮಾಗಳಲ್ಲೂ ರೋರಿಂಗ್​ ಸ್ಟಾರ್​ ಖಡಕ್​ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ರು. ಆದ್ರೆ ಇದು ಪಕ್ಕಾ ಫ್ಯಾಮಿಲಿ ಎಂಟರ್​ಟೈನರ್​​​ ಸಿನಿಮಾ. ಬಹುಶ: ಚಂದ್ರಚಕೋರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶ್ರೀಮುರುಳಿಯನ್ನು ಈ ಸಿನಿಮಾದಲ್ಲಿ ಮತ್ತೊಮ್ಮೆ ನೋಡ್ಬಹುದು. ಸಿನಿಮಾದಲ್ಲಿ ಫ್ಯಾಮಿಲಿ ಸ್ಟೋರಿ ಇರೋದರಿಂದ ಚಿತ್ರಕ್ಕೆ ಹೋಮ್ಲಿ ಲುಕ್​​ ಇರೋ ಹೀರೋಹಿನ್​​ ಬೇಕು. ಸಿನಿಮಾ ಟೀಮ್​​​ ನಾಯಕಿಯ ಹುಡುಕಾಟದಲ್ಲಿದೆ. ಕನ್ನಡದ ಹುಡುಗಿಯ ಅಥವ ಮುಂಬೈ ಚೆಲುವೆಯನ್ನು ಕರ್ಕೊಂಡು ಬರೋದ ಅನ್ನೊದು ಚಿತ್ರತಂಡ ಕನ್​ಫ್ಯೂಶನ್​.

ಅಂದಹಾಗೆ ನಿರ್ದೇಶಕ ಚೇತನ್ ಈಗಾಗಲೇ ಬಹದ್ದೂರ್​ ಮತ್ತು ಭರ್ಜರಿ ಅಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದು, ಮುರುಳಿ ಜೊತೆಗಿನ ಈ ಸಿನಿಮಾ ಯಶಸ್ವಿ ಆದಲ್ಲಿ ​ ಹ್ಯಾಟ್ರಿಕ್​ ನಿರ್ದೇಶಕರ ಸಾಲಿಗೆ ಚೇತನ್ ಸೇರ್ಪಡೆಯಾಗಲಿದ್ದಾರೆ. ಒಟ್ನಲ್ಲಿ ಚೇತನ್​ – ಶ್ರೀಮುರಳಿ ಕಾಂಬಿನೇಶನ್​​ ಸಖತ್​ ನಿರೀಕ್ಷೆ ಹುಟ್ಟಿಸಿದೆ.