ನೋಟ್ ಬ್ಯಾನ್​ ಕತೆ ಹೇಳೋಕೆ ಬರ್ತಿದ್ದಾನೆ ಅಂದಗಾರ..!!

ಎಲೆಕ್ಷನ್ ಹತ್ತಿರವಾಗ್ತಿದ್ದಂತೆ ಕನ್ನಡ ಬೆಳ್ಳಿಪರೆದೆ ಮೇಲೆ ಹೊಸಬರ ಸಾಲು ಸಾಲು ಸಿನಿಮಾಗಳು ತೆರೆ ಕಾಣೋಕೆ ಸಜ್ಜಾಗ್ತಿವೆ. ಅದ್ರಲ್ಲೂ ಈಗ ಸಮ್ಮರ್ ಹಾಲಿಡೇ ಆಗಿರೋದ್ರಿಂದ ಥಿಯೇಟರ್ ಅಂಗಳಕ್ಕೆ ಪ್ರತಿ ವಾರ ಮೂರ್ನಾಲ್ಕು ಸಿನಿಮಾಗಳು ಎಂಟ್ರಿ ಕೊಡ್ತಿವೆ. ಅಂತಹ ಸಿನಿಮಾಗಳ ಲಿಸ್ಟ್​​ನಲ್ಲಿ ಹೊಸಬರ ಸಿನಿಮಾ ಅಂಧಗಾರ ಕೂಡ ಇದ್ದು. ಇದೇ ವಾರ ಈ ಸಿನಿಮಾ ತೆರೆ ಕಾಣ್ತಿದೆ. ಈ ಬಗ್ಗೆ ರಿಪೋರ್ಟ್​ ಇಲ್ಲಿದೆ..

ad


ಈಗ ಸಮ್ಮರ್ ಹಾಲಿಡೇ. ಎಲ್ಲರು ರಜವನ್ನ ಸಿನಿಮಾ ನೋಡಿ ಟ್ರಿಪ್​​ ಹೋಗಿ ಮಜವಾಗಿ ಎಂಜಾಯ್ ಮಾಡೋಕೆ ಪ್ಲಾನ್ ಮಾಡ್ಕೊಂಡಿರ್ತಾರೆ. ಹೀಗಾಗಿ ಕನ್ನಡದಲ್ಲಿ ಪ್ರತಿ ವಾರವು ಹೊಸಬರ ಸಾಲು ಸಾಲು ಸಿನಿಮಾಗಳು ತೆರೆ ಕಾಣ್ತಿವೆ. ಇದೀಗ ಕನ್ನಡದಲ್ಲಿ ಈ ವಾರ ಬೆಳ್ಳಿಪರದೆ ಮೇಲೆ ಬರೋಕೆ ಹೊಸಬರ ಸಿನಿಮಾ ಒಂದು ಸಜ್ಜಾಗಿದೆ. ಅದೇ ಅಂದಗಾರ. ಅಂದಗಾರ.. ಸ್ಯಾಂಡಲ್​ವುಡ್​​ನಲ್ಲಿ ಈ ವಾರ ರಿಲೀಸ್ ಆಗೋಕೆ ರೆಡಿಯಾಗಿರೋ ವಿಭಿನ್ನ ಕತೆಯ ಹೊಸಬರ ಸಿನಿಮಾ. ಬ್ಲೈಲ್ಡ್​​​ ಗೇಮ್​ ಅನ್ನೋ ಟ್ಯಾಗ್​ಲೈನ್​​ ಕೊಟ್ಟು ರೆಡಿಮಾಡಿರೋ ಸಸ್ಪೆನ್ಸ್​ ತ್ರಿಲ್ಲನ್​ ಸಿನಿಮಾ.. ಇದೀಗ ಅಂದಗಾರ ಇದೇ ವಾರ ತೆರೆ ಮೇಲೆ ಬರ್ತಿದೆ.. ಅಂದಗಾರ ಸಿನಿಮಾದ ಸ್ಟೋರಿಯೇ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಸಿನಿಮಾದಲ್ಲಿ ಹೀರೋಗೆ ಕಣ್ಣು ಕಾಣಲ್ಲ. ಒಂದ್ ಕಡೆ ನೋಟ್ ಬ್ಯಾನ್ ಆಗಿರುತ್ತೆ. ಆಗ ಕಣ್ಣು ಕಾಣದ ಹೀರೋ ಮನೆಗೆ ಅನ್​​ಎಕ್ಸ್​​​ಪೆಕ್ಟೆಡ್​ ಆಗಿ ಬ್ಲಾಕ್​​ ಮನಿ ಬಂದು ಸೇರಿಕೊಳ್ಳುತ್ತೆ.

ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೆ ಅಂಧಗಾರನ ಇಟ್ರೆಂಸ್ಟಿಂಗ್ ಸ್ಟೋರಿ.. ಸಸ್ಪೆನ್ಸ್​ ಥ್ರಿಲ್ಲರ್​ ಅಂದಗಾರ ಚಿತ್ರಕ್ಕೆ ಜಯ್ ಕುಮಾರ್ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಂಶಿಕೃಷ್ಣ ಸಂಕಲನ ಮಿಹಿರಾಂಶ್ ಸಂಗೀತಾ ಎಸ್​. ಪಿ ಮುರುಳಿ ಕುಮಾರ್​, ರಾಜ್​ದೇವ್​ ಸೇರಿ ನಿರ್ಮಾಣ ಮಾಡಿದ್ದಾರೆ. ಅಂದಗಾರ ಸಿನಿಮಾದಲ್ಲಿ ನಾಯಕನಾಗಿ ನಂದೀಶ್​ ಅಭಿನಯಿಸಿದ್ದಾರೆ. ಸೌಮ್ಯ ನಾಯಕಿಯಾಗಿ ನಟಿಸಿದ್ದಾರೆ. ನೋಟ್​ ಬ್ಯಾನ್​ ಆದ ಹಿಂದಿನ ದಿನ ಅಂದ್ರೆ ನವೆಂಬರ್​​ 7 2016ರ ರಾತ್ರಿ ನಡೆಯೋ ಕಥೆ ಚಿತ್ರದಲ್ಲಿದೆ ಸಿನಿಮಾದಲ್ಲಿದ್ದು, ಸಮಾಜಕ್ಕೆ ಒಂದು ಮೆಸೆಜ್ ಕೂಡ ಇದೆಯಂತೆ. ಒಟ್ಟಿನಲ್ಲಿ ಈ ವಾರ ನಿಮ್ಮನ್ನ ರಂಜಿಸೋಕೆ ಅಂದಗಾರ ಥಿಯೇಟರ್​ ಅಂಗಳಕ್ಕೆ ಎಂಟ್ರಿ ಕೊಡ್ತಿದ್ದಾನೆ.