ಸ್ಯಾಂಡಲ್​ವುಡ್​ನಲ್ಲಿ ಭರವಸೆ ಮಿಂಚಾದ ನಟಿ ಯಾರು- ಪೋಟೋ ಶೂಟ್​ನಲ್ಲಿ ಈ ಕನ್ನಡತಿಯ ಅಂದ ನೋಡಿ!

 

ad

ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ಉತ್ತುಂಗಕ್ಕೇರುತ್ತಿರೋ ನಟಿ ಆಶಿಕಾ ರಂಗನಾಥ್​.. ತನ್ನ ಮುದ್ದಾದ ಚೆಲುವಿನಿಂದಲೇ ಹುಡುಗರ ಹಾರ್ಟ್​ ಕದ್ದಿರೋ ಸುಂದರಿ ಈಕೆ.. ಆಶಿಕಾ ಒಂದೇ ಒಂದು ಮುಗುಳು ನಗೆ ಬೀರಿದ್ರೆ ಫ್ಯಾನ್​ಗೆ ಅದೇನೋ ಮನೋಲ್ಲಾಸ.. ಇದೀಗ ಈ ಸಿಂಪಲ್​ ಬ್ಯೂಟಿ ಹೊಸ ಫೋಟೋ ಶೂಟ್​ ಮಾಡಿಸಿದ್ದಾರೆ.. ಅದರ ಝಲಕ್ ಇಲ್ಲಿದೆ.
ಆಶಿಕಾ ಎಲ್ಲಾ ಕಾಸ್ಟ್ಯೂಮ್​ನಲ್ಲು ಸೊಗಸಾಗಿ ಕಾಣಿಸ್ತಾರೆ. ವೆಸ್ಟರ್ನ್​ ಆಗಿರ್ಲಿ ಮಾಡ್ರನ್ ಆಗಿರ್ಲಿ ಆಶಿಕಾ ಬ್ಯೂಟಿಗೆ ಆ ಡ್ರೆಸ್ಸೇ ಕರಗಿ ಹೊಗುತ್ತೆ. ಈ ಫೋಟೋ ಶೂಟ್​ನಲ್ಲಿ ಆಶಿಕಾ ಮೈ ಸೊಬಗನ್ನ ಕಲರ್ ಫುಲ್ ಕಾಸ್ಟ್ಮೂಮ್ ಆರಗಿಸಿಕೊಂಡಿದೆ.ವೆರಾಯಿಟಿ ಕಾಸ್ಟ್ಯೂಮ್​ನಲ್ಲಿ ಕ್ರೇಜಿ ಗರ್ಲ್​​ ಮುಗುಳು ನಗೆ ಬೀರಿದ್ದಾರೆ..

ಆಶಿಕಾ ಫೋಟೋ ಶೂಟ್​ ನೋಡ್ತಿದ್ರೆ ಟ್ರೆಂಡಿ ಅನ್ನಿಸುತ್ತೆ. ತನ್ನ ಬ್ಯೂಟಿಗೆ ತಕ್ಕಂತ ಕಾಸ್ಟ್ಯೂಮ್ ತೊಟ್ಟು ಈ ಚೆಲುವೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸಾಮಾನ್ಯವಾಗಿ ನಾಯಕಿಯರು ಆರು ತಿಂಗಳಿಗೆ ಒಮ್ಮೆಯಾದ್ರು ಒಂದು ಫೋಟೋ ಶೂಟ್ ಮಾಡಿಸ್ತಾರೆ. ಹಾಗೆ ಈ ಕ್ರೇಜಿ ಬ್ಯೂಟಿ ಕೂಡ ತನ್ನ ಖರಿಯರ್​ ಗ್ರೋಥ್​​ಗೆ ಈಗ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ.
ಆಶಿಕಾ ರಂಗನಾಥ್​ ಅಪ್ಪಟ ಕನ್ನಡ ಚೆಲುವೆ.. ಹಾಸನದಲ್ಲಿ ಹುಟ್ಟು ತುಮಕೂರಿನಲ್ಲಿ ಬೆಳೆದ ಹೆಣ್ಣುಮಗಳು. ಮನೆಮಗಳ ಲುಕ್​ ಇರೋ ಆಶಿಕಾ ಈಗ ಕನ್ನಡ ಸಿನಿಮಾ ರಂಗ ಬಹುಬೇಡಿಕೆಯ ನಾಯಕಿ. ಕ್ರೇಜೆ ಬಾಯ್​ ಚಿತ್ರದಿಂದ ಸ್ಯಾಂಡಲ್​ವುಡ್​ಗೆ ಬಂದ ಈ ಬ್ಯೂಟಿ ಈಗ ಫುಲ್ ಬ್ಯುಸಿ ಚಿತ್ರರಂಗಕ್ಕೆ ಬಂದ ಕಡಿಮೆ ಅವಧಿಯಲ್ಲಿ ಆಶಿಕಾ ಬಿಝಿ ನಟಿ ಅನ್ನಿಸಿಕೊಂಡಿದ್ದಾರೆ.
ಸದ್ಯ ಗರುಡ ಮತ್ತು ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಶಿಕಾ ಇದುವರಿಗೂ ನಟಿಸಿದ ಎಲ್ಲ ಚಿತ್ರಗಳಲ್ಲಿ ಸೈಲಂಟ್‌, ಟ್ರಡೀಷನಲ್‌ ಹಾಗೂ ಡಿ ಗ್ಲಾಮ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ರು. ಈಗ ಈ ಫೋಟೋ ಶೂಟ್ ನೋಡ್ತಿದ್ರೆ ಮುಂಬರೀ ಸಿನಿಮಾಗಲಲ್ಲಿ ಟ್ರೆಂಡಿಯಾಗಿ ಮಿಂಚಲಿದ್ದಾರೆ ಅನ್ನಿಸುತ್ತೆ..

ಆಶಿಕಾ ಫೊಟೋ ಶೂಟ್ ಜೊತೆ ಮಾಡ್ತಿರೋ ಸಿನಿಮಾಗಳನ್ನ ನೋಡ್ತಿದೆ, ಆಸಿಕಾ ಕನ್ನಡ ಟಾಪ್​ ಹೀರೋಯಿನ್​ ಆಗಿ ಬೆಳೆಯುವ ಎಲ್ಲಾ ಲಕ್ಷಣ ಕಾಣ್ತಿದೆ. ಜೊತೆಗೆ ಲಾಂಗ್​​ ಟೈಮ್​​​ ಹೀರೋಯಿನ್​​​ ಆಗಿಯೂ ಉಳಿಯುವ ಭರವಸೆ ಮೂಡಿಸಿದ್ದಾರೆ.