ಪುನೀತ್ ಜೊತೆ ಮತ್ತೊಂದು ಚಿತ್ರಕ್ಕೆ ಸಜ್ಜಾಗ್ತಿದ್ದಾರೆ ಸೆನ್ಸೇಶನಲ್​​​​ ಡೈರೆಕ್ಟರ್​​ ಸಂತೋಷ್​ ಆನಂದ್​​​ರಾಮ್​​ !

ಸಿನಿ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರ ಚಿತ್ರಗಳು ತುಂಬಾನೆ ನಿರೀಕ್ಷೆ ಹುಟ್ಟಿಸೋದು ಕಾಮನ್. ಆದ್ರೆ ನಿರ್ದೇಶನ ಕಾರಣಕ್ಕಾಗಿ ಚಿತ್ರವೊಂದು ಕುತೂಹಲ ಹುಟ್ಟಿಸೋದು ತೀರಾ ಅಪರೂಪ. ಅಂಥ ಶಕ್ತಿ ಇರೋದು ಕೆಲವೇ ಕೆಲವು ನಿರ್ದೇಶಕರಿಗೆ ಮಾತ್ರ.ಅಂಥವರಲ್ಲಿ ಒಬ್ರು ಸಂತೋಷ್​ ಆನಂದ್​​​ರಾಮ್​​ ಅಂದ್ರೆ ತಪ್ಪಾಗಲ್ಲ..

ಸಂತೋಷ್​ ಆನಂದ್​ರಾಮ್​ ಸ್ಯಾಂಡಲ್​ವುಡ್​ನ ಸೆನ್ಸೇಶನಲ್​​​​ ಡೈರೆಕ್ಟರ್​​. ಯಾಕಂದ್ರೆ ಇವ್ರು ಆಕ್ಷನ್​ ಕಟ್​ ಹೇಳಿದ ಎರಡೂ ಸಿನಿಮಾಗಳು ಸೂಪರ್​ ಹಿಟ್​. ಚೊಚ್ಚಲ ನಿರ್ದೇಶನದ ಮಿಸ್ಟರ್​ ಆ್ಯಂಡ್​ ಮಿಸಸ್​ ರಾಮಾಚಾರಿ ಬಾಕ್ಸಾಫೀಸ್​ ಧೂಳೆಬ್ಬಿಸಿತ್ತು. ಎರಡನೇ ಚಿತ್ರ ರಾಜಕುಮಾರ ಕೂಡ ಹೊಸ ಇತಿಹಾಸ ಸೃಷ್ಟಿಸಿ ಕಲೆಕ್ಷನ್​ನಲ್ಲಿ ಹೊಸ ದಾಖಲೆ ಬರೆದಿತ್ತು. ಹರೆಯದ ಹುಡುಗರಿಂದ ಹಿಡಿದು ವಯಸ್ಸಿನ ಮುದುಕರವರೆಗೆ ರಾಜಕುಮಾರ ಸಿನಿಮಾ ನೋಡಿ ಭಾವುಕರಾಗಿದ್ರು. ಸಂತೋಷ್​ ಆನಂದ್​ರಾಮ್​​ ಸಿನಿಮಾದ ಟೈಟಲ್​​ನಲ್ಲೇ ಮ್ಯಾಜಿಕ್​ ಮಾಡುವ ಡೈರೆಕ್ಟರ್​​. ಯಶ್​ ಚಿತ್ರಕ್ಕೆ ಮಿಸ್ಟರ್​ & ಮಿಸಸ್​​ ರಾಮಾಚಾರಿ ಅನ್ನುವ ಟೈಟಲ್​ ಫಿಕ್ಸ್​ ಮಾಡಿದಾದ ಇಡೀ ಸ್ಯಾಂಡಲ್​​ವುಡ್​​ ಅಚ್ಚರಿಗೊಂಡಿತ್ತು.

ಇನ್ನು ಅಪ್ಪು ಚಿತ್ರಕ್ಕೆ ರಾಜಕುಮಾರ ಅನ್ನುವ ಟೈಟಲ್​ ಇಟ್ಟು, ಪುನೀತ್​​ಗೆ ​ಥೇಟ್ ಕಸ್ತೂರಿ ನಿವಾಸ ಚಿತ್ರದ ಅಣ್ಣಾವ್ರ ತರಹ ಕಪ್ಪು ಕೋಟ್​​ ಹಾಕಿಸಿ ಬಿಳಿ ಪಾರಿವಾಳವನ್ನು ಕುಳ್ಳಿರಿಸಿದಾಗ ಸಂತೋಷ್​ ಟ್ಯಾಲೆಂಟ್​ ಎಂಥದ್ದು ಅನ್ನೋದು ಇಡೀ ಸೌತ್​​​ ಇಂಡಸ್ಟ್ರಿಗೆ ಗೊತ್ತಾಗಿ ಬಿಟ್ಟಿತ್ತು. ಸಂತೋಷ್​ ಆನಂದ್​ರಾಮ್​​ ಪವರ್ ಸ್ಟಾರ್‌ಗೆ ಮತ್ತೊಮ್ಮೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ ಅನ್ನೋ ವಿಚಾರ ಈಗಾಗ್ಲೇ ರಿವೀಲಾಗಿದೆ. ವಿಷಯವನ್ನು ಖುದ್ದು ಸಂತೋಷ್​ ಈಗಾಗ್ಲೇ ಖಚಿತಪಡಿಸಿ ಆಗಿದೆ. ಆದ್ರೆ ಆ ಬಳಿಕ ಈ ಪ್ರಾಜೆಕ್ಟ್​ ಬಗ್ಗೆ ಹೆಚ್ಚಿನ ಡೀಟೈಲ್ಸ್​ ಗೊತ್ತಾಗಿರ್ಲಿಲ್ಲ.
ಸಂತೋಷ್​ ನಿರ್ದೇಶನ ಮಾಡಿದ ಎರಡು ಟೈಟಲ್​ಗಳ ವಿಶೇಷವಾಗಿದ್ರಿಂದ ಪುನೀತ್​ ಜೊತೆ ಮಾಡಲಿರುವ ಹೊಸ ಸಿನಿಮಾದ ಟೈಟಲ್​ ಏನು ಅನ್ನುವ ಕುತೂಹಲ ಇದ್ದೇ ಇದೆ.

ಆದ್ರೆ ಸಂತೋಷ್​ ಇದುವರೆಗೆ ಯಾವ ಕ್ಲೂ ಕೂಡ ಕೊಟ್ಟಿಲ್ಲ. ಆದ್ರೆ ಇದೀಗ ಟೈಟಲ್​ ಲಾಂಚ್​ ಯಾವಾಗ ಅನ್ನೋದನ್ನು ಮಾತ್ರ ಪಕ್ಕಾ ಮಾಡಿದ್ದಾರೆ. ಇದೀಗ ಸಂತೋಷ್ ಪುನೀತ್​ ಸಿನಿಮಾದ ಸ್ಕ್ರಿಪ್ಟ್​​​ ವರ್ಕ್​ನಲ್ಲಿ ಬ್ಯುಸಿ ಇದ್ದಾರೆ. ಮೇ ತಿಂಗಳಿನಲ್ಲಿ ಹೊಸ ಸಿನಿಮದ ಟೈಟಲ್​ ಲಾಂಚ್​ ಮಾಡೋದಾಗಿ ಹೇಳಿದ್ದಾರೆ. ಅಲ್ಲದೆ ಅಭಿಮಾನಿಗಳಲೇ ಈ ಹಿಟ್​ ಕಾಂಬಿನೇಶನ್​​ನ ಹೊಸ ಸಿನಿಮಾದ ಟೈಟಲ್​ ಲಾಂಚ್​ ಮಾಡಲಿದ್ದಾರೆ. ಒಟ್ನಲ್ಲಿ ಸಂತೋಷ್​ ಆನಂದ್​ರಾಮ್ ಈ ಸರ್ತಿ ಕೂಡ ಪುನೀತ್​ ಚಿತ್ರಕ್ಕೆ ವಿಶೇಷ ಶೀರ್ಷಿಕೆ ಫಿಕ್ಸ್​ ಮಾಡುವ ಯೋಚನೆ ಮಾಡಿದ್ದಾರೆ. ಅಲ್ಲದೆ ಸಿನಿಮಾದಲ್ಲೂ ಎಲ್ಲರ ಮನೆಯ ಕಥೆ ಇರಲಿದೆ. ಅಲ್ಲಿಗೆ ಪುನೀತ್​ – ಸಂತೋಷ್​ ಮತ್ತೊಮ್ಮೆ ಮ್ಯಾಜಿಕ್​ ಮಾಡೋದು ಗ್ಯಾರಂಟಿ.