15 ವರ್ಷಗಳ ಪ್ರತಿಜ್ಞೆ ಮುರಿದ ಶಿವಣ್ಣ- ಅಂತಹದ್ದೇನಾಯಿತು? ಇಲ್ಲಿದೆ ವಿವರ!

ಶಿವರಾಜ್ ಕುಮಾರ್ ಬಹಳ ಹಿಂದೆಯೇ ಒಂದು ಪ್ರತಿಜ್ಣೆ ಮಾಡಿದ್ದರು. ಅದೇನೆಂದರೆ, ಎಷ್ಟೇ ಕೋಟಿ ರೂಪಾಯಿ ಸಂಭಾವನೆ ನೀಡಿದರೂ ತಾನು ರೀಮೇಕ್ ಚಿತ್ರಗಳಲ್ಲಿ ನಟಿಸುವದಿಲ್ಲ ಅನ್ನೋದು. ಒಂದೂವರೆ ದಶಕಗಳ ಹಿಂದೆ ಕೊದಂಡ ರಾಮ ಚಿತ್ರಗಳಲ್ಲಿ ನಟಿಸಿದ ನಂತರ ಶಿವಣ್ಣ ರಿಮೇಕ್​ನಲ್ಲಿ ನಟಿಸಿರ್ಲಿಲ್ಲ.
ಇದೀಗ ಸುಮಾರು 15 ವರುಷಗಳ ನಂತರ, ತಾವು ಹಾಕಿದ ಪ್ರತಿಜ್ಣೆಯನ್ನು ತಾವೇ ಮುರಿದಿದ್ದಾರೆ. ಮಲೆಯಾಳಂನಲ್ಲಿ ಭರ್ಜರಿ ಹಿಟ್​ ಆಗಿದ್ದ ಒಪ್ಪಂ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ಈಗ ಶಿವಣ್ಣ ನಟಿಸುತ್ತಿದ್ದಾರೆ. ಊಟಿಯಲ್ಲಿ ಈ ಚಿತ್ರದ ಚಿತ್ರೀಕರಣ ಅತ್ಯಂತ ಭರದಿಂದ ಸಾಗುತ್ತಿದ್ದು ಅದರ ಎಕ್ಸಕ್ಲೂಸಿವ್ ಫೋಟೋಗಳು ಬಿಟಿವಿಗೆ ಲಭ್ಯವಾಗಿದೆ.

  

ಮಲಯಾಳಂನಲ್ಲಿ ಒಪ್ಪಂ ಸಿನಿಮಾದ ನಾಯಕನ ಪಾತ್ರದಲ್ಲಿ ಮೋಹನ್​ ಲಾಲ್​ ನಟಿಸಿದ್ರು. ಲಾಲ್​ ನಟನೆಗೆ ಅಭೂತವೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. ಈ ಚಿತ್ರದಲ್ಲಿ ನಾಯಕ ಅಂಧನಾಗಿರುತ್ತಾನೆ. ಆದರೆ, ಶ್ರವಣ ತೀಕ್ಷ್ಣತೆ ಮತ್ತು ಗ್ರಹಣ ಶಕ್ತಿಯಿಂದಲೇ ಎಂಥದ್ದನ್ನೂ ಗುರುತಿಸುವ ವಿಶೇಷ ಪವರ್ ಹೊಂದಿರುತ್ತಾನೆ.
ಪುಟಾಣಿ ಮಗುವಿನೊಂದಿಗಿನ ಬಾಂಧವ್ಯ, ಕಣ್ಣಿಲ್ಲದವ ಎನಿಸಿಕೊಂಡರೂ ಆ ವ್ಯಕ್ತಿಯ ಹೃದಯ ವೈಶಾಲ್ಯತೆ ಈ ಚಿತ್ರದ ಪ್ರಮುಖ ಅಂಶವಾಗಿತ್ತು. ಈ ಸಿನಿಮಾ ನೋಡಿದ್ರ ವಿಮರ್ಶಕರು ಇದು ಪ್ರತಿಯೊಬ್ಬರು ನೋಡಲೇಬೇಕಾದ ಸಿನಿಮಾ ಅಂದಿದ್ರು.

ಈ ಸಿನಿಮಾ ಕನ್ನಡದಲ್ಲಿ ಕವಚ ಹೆಸರಿನಲ್ಲಿ ಚಿತ್ರೀಕರಣ ಆಗ್ತಿದೆ. ಊಟಿಯಲ್ಲಿ ಶಿವಣ್ಣ ಮತ್ತು ಬೇಬಿ ಮಿನಾಕ್ಷಿ ನಟನೆಯ ದೃಶ್ಯಗಳನ್ನು ಚಿತ್ರೀಕರಿಸಲಾಗ್ತಿದೆ. ವಿಶೇಷ ಅಂದ್ರೆ 100ಕ್ಕಿಂತ್ಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಶಿವಣ್ಣ ಇದೇ ಮೊದಲ ಬಾರಿ ಕರುಡನ ಅವತಾರ ಎತ್ತಿದ್ದಾರೆ. ಚಿತ್ರದುದ್ದಕ್ಕೂ ಶಿವಣ್ಣ ಕರುಡನಾಗಿಯೇ ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೆ ಒಂದೂವರೆ ಶತಮಾನಗಳ ಕಾಲ ರಿಮೇಕ್ ಆಕರ್ಷಣೆಗೆ ಒಳಗಾಗದ ಶಿವಣ್ಣ ಕವಚ ಚಿತ್ರವನ್ನು ಯಾಕೆ ಒಪ್ಪಿಕೊಂಡರು, ತಬ್ಬಿಕೊಂಡರು ಎಂಬುದು ಕನ್ನಡ ಚಿತ್ರೋದ್ಯಮಿಗಳಿಗೆ ಮತ್ತು ಅಭಿಮಾನಿಗಳಿಗೆ ಆಶ್ಚರ್ಯವಾಗಿತ್ತು. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸುತ್ತಾರೆ ಎಂಬ ಸುದ್ದಿ ಹೊರಬಿದ್ದಾಗ ಅವರ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಭಟನೆ ಕೂಡಾ ವ್ಯಕ್ತಪಡಿಸಿದ್ದರು.ಆದ್ರೆ ಒಪ್ಪಂ ರಿಮೇಕ್​ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿರೋದಕ್ಕೂ ಒಂದು ಬಲವಾದ ಕಾರಣ ಇತ್ತು. ಮೊದಲೇ ಹೇಳಿದ ಹಾಗೆ ಒಪ್ಪಂ ಅಂಧನೊಬ್ಬನ ಕಥೆ. ಹಾಗಾಗಿ ಶಿವಣ್ಣ ಈ ನಾಡಿನಲ್ಲಿರುವ ಅಸಂಖ್ಯಾತ ಅಂಧರಿಗೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ತನ್ನ ಒಂದೂವರೆ ದಶಕದ ನಿರ್ಧಾರವನ್ನು ಬದಲಿಸಿಕೊಂಡಿದ್ರು. ಒಟ್ಟಿನಲ್ಲಿ ಕವಚ ಆದಷ್ಟು ಬೇಗ ತೆರೆಮೇಲೆ ಬರಲಿದೆ.