ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಶಿವಣ್ಣ! ಅಭಿಮಾನಿಗಳ ಜೊತೆ ಮಾತನಾಡುವಾಗ ಕಣ್ಣೀರಿಟ್ಟಿದ್ದೇಕೆ ಗೊತ್ತಾ?!

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಲ ಭುಜದ ಶಸ್ತ್ರ ಚಿಕಿತ್ಸೆಗೆಂದು ಲಂಡಲ್ ತಲುಪಿದ್ದ ಶಿವಣ್ಣ ನಿನ್ನೆಯಷ್ಟೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ad

ಸದ್ಯ ಲಂಡನ್ ನಲ್ಲಿರುವ ಶಿವಣ್ಣ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಾಗದೇ ಅಭಿಮಾನಿಗಳನ್ನು ಮಿಸ್ ಮಾಡುತ್ತಿದ್ದು ಲಂಡನ್ ನಿಂದ ನೇರವಾಗಿ ಇಂದು ರಾತ್ರಿ 12 ಗಂಟೆಗೆ ಫೇಸ್ ಬುಕ್ ಲೈವ್ ಬರುವ ಮೂಲಕ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಇನ್ನೂ ಲೈವ್ ನಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಿರುವಾಗ ಶಿವಣ್ಣ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಹೌದು ಶಿವಣ್ಣ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳ ಜೊತೆ ನೇರವಾಗಿ ಲಂಡನ್ ನಿಂದ ಲೈವ್ ಆಗಿ ಮಾತನಾಡುವ ವ್ಯವಸ್ಥೆಯನ್ನು ಕಂಠೀರವ ಸ್ಟುಡಿಯೋದಲ್ಲಿ ದೊಡ್ಡ ಪರದೆ ಹಾಕಿ ಅಭಿಮಾನಿಗಳ ಜೊತೆ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಅಭಿಮಾನಿಗಳೊಂದಿಗೆ ಮಾತನಾಡುತ್ತಿರುವಾಗ ಅಭಿಮಾನಿಗಳ ಅಪಾರವಾದ ಪ್ರೀತಿ, ವಿಶ್ವಾಸದ ಮಾತುಗಳನ್ನು ಕೇಳಿಸಿಕೊಂಡು ಗಳಗಳನೇ ಅತ್ತಿದ್ದಾರೆ.

ಶಿವಣ್ಣ ಕಣ್ಣೀರಿಡುತ್ತಿರುವುದನ್ನು ನೋಡಿ ಅಭಿಮಾನಿಗಳು ‘ನೀವು ಅತ್ತರೆ ನಮಗೆ ನೋವಾಗುತ್ತೆ’ ದಯವಿಟ್ಟು ಅಳಬೇಡಿ ಎಂದು ಸಮಾಧಾನ ಮಾಡಿದ್ದಾರೆ.ನಂತರ ಮತ್ತೆ ಸುಧಾರಿಸಿಕೊಂಡು ಅಭಿಮಾನಿಗಳ ಜೊತೆ ಮಾತು ಮುಂದುವರೆಸಿದ್ದಾರೆ. ಅಲ್ಲದೆ ಕೈಗೆ ಹಾಕಿರುವ ಬ್ಯಾಂಡೇಜ್ ಅನ್ನು ದಯವಿಟ್ಟು ತೆಗೆಯಬೇಡಿ ಎಂದು ಶಿವಣ್ಣ ಬಳಿ ಮನವಿ ಮಾಡಿಕೊಂಡಿದ್ದಾರೆ.

ಸದ್ಯ ಶಿವಣ್ಣ ಚೇತರಿಸಿಕೊಂಡ ನಂತರ ಇದೇ ತಿಂಗಳು 23ಕ್ಕೆ ಲಂಡನ್ ನಿಂದ ಭಾರತಕ್ಕೆ ಮರುಳಿದ್ದು, ಲಂಡನ್ ನಿಂದ ಬರುತ್ತಿದ್ದಂತೆ ಅಭಿಮಾನಿಗಳ ಭೇಟಿಯಾಗಿ ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದನ್ನು ಮಿಸ್ ಮಾಡಿಕೊಂಡಿದ್ದ ಶಿವಣ್ಣ ಮತ್ತೆ ತಮ್ಮ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ.