ಮೋದಿ ಇಂಟರ್ ವ್ಯೂ ಹೇಗೆ ನಡೆಯುತ್ತಾ ಗೊತ್ತಾ? ಪಿಎಂ ಸಂದರ್ಶನದ ರಹಸ್ಯ ಬಿಚ್ಚಿಟ್ಟ ನಟಿ ರಮ್ಯ!!

ಸ್ಯಾಂಡಲ್ ವುಡ್ ನಟಿ ಹಾಗೂ ಮಂಡ್ಯ ಕ್ಷೇತ್ರದ ಮಾಜಿ ಸಂಸದೆ,  ಕಾಂಗ್ರೆಸ್​ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾರವರು ಮತ್ತೆ ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ದು, ವಿಡಿಯೋ ದಾಖಲೆ ಬಿಡುಗಡೆ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ad

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಖಾಸಗಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದರು. ಆ ಸಂದರ್ಶನವನ್ನು ಆಧಾರವಾಗಿಟ್ಟುಕೊಂಡ ರಮ್ಯಾ ಮೋದಿಯವರ ಸಂದರ್ಶನ ಪಕ್ಕಾ ಸ್ಕ್ರಿಪ್ಟೆಡ್​ ಅದಕ್ಕೆ ಬೇಕಾದ ಸಾಕ್ಷಿ ಇದೆ. ಎಂದು ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

ಇನ್ನೂ ಸಂದರ್ಶನ ಕುರಿತಂತೆ ಈ ವೀಡಿಯೋವನ್ನು ಸರಿಯಾಗಿ ಗಮನಿಸಿ ಮೋದಿಯವರ ಎಲ್ಲಾ ಸಂದರ್ಶನಗಳಂತೆ ಈ ಸಂದರ್ಶನ ಕೂಡ ಸ್ಕ್ರಿಪ್ಟೆಡ್​, ವೀಡಿಯೋದಲ್ಲಿನ ಮೊದಲ ಮೂರು ಸೆಕೆಂಡ್​ಗಳಲ್ಲಿ ಸಂದರ್ಶನದ ಪ್ರಶ್ನೆಗಳು ಕಾಣುತ್ತದೆ. ಜೊತೆಗೆ ಪ್ರಶ್ನೆಗಳಿಗೆ ಸಂಬಂದಿಸಿದಂತೆ ಉತ್ತರಗಳು ಸಹ ಇದೆ ಎಂದು ಹೇಳಿದ್ದಾರೆ. ಹಾಗೂ ರಾಹುಲ್​ ಗಾಂಧಿ ಅವರ ಜೊತೆಗೆ ಸುದ್ದಿಗೋಷ್ಠಿ ಅಥವಾ ಡಿಬೇಟ್​ ಯಾಕೆ ಮಾಡಲ್ಲ ಎಂಬುದು ಈಗ ತಿಳಿಯಿತಾ ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೆ ಮೋದಿಯವರು 1988ರಲ್ಲಿ ತಮ್ಮ ಬಳಿ ಡಿಜಿಟಲ್​ ಕ್ಯಾಮರಾ ಇತ್ತು ಹಾಗೂ ಫೋಟೋವೊಂದನ್ನು ಇ-ಮೇಲ್​ ಕಳುಹಿಸಿದ್ದೆ ಎಂದು ಹೇಳಿದ್ದರು, ಜೊತೆಗೆ ಮೋದಿ ಅವರು 1988ರಲ್ಲಿ ಇ-ಮೇಲ್​ ಐಡಿ ಹೊಂದಿದ್ದೇನೆ ಎಂದು ಹೇಳಿದ್ದರು. ಆದರೆ ಆ ಸಮಯದಲ್ಲಿ ಇಡೀ ಜಗತ್ತೇ ಇಮೇಲ್​ ಬಳಸುತ್ತಿರಲಿಲ್ಲ. ಹೀಗಿರುವಾಗ ಮೋದಿ ಅವರು ಅದು ಹೇಗೆ ಇ-ಮೇಲ್ ಕಳುಹಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.