ಪೈಲ್ವಾನ್​ ಟೈಟಲ್​ ಸಾಂಗ್​ಗೆ ಸ್ಯಾಂಡಲ್​ವುಡ್​ ಫಿದಾ! ಸುದೀಪ್ ಅಭಿಮಾನಿಗಳಿಗೆ ಕಿಚ್ಚು ಹೊತ್ತಿಸುತ್ತಿದೆ ಸೂಪರ್ ಸಾಂಗ್​!!

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅಭಿನಯದ ಆಪ್ ಕಾಮಿಂಗ್ ಚಿತ್ರ ಪೈಲ್ವಾನ್ ಸಿನಿಮಾದ ಮೊದಲ ಟೈಟಲ್ ಟ್ರಾಕ್ ರಿಲೀಸ್ ಆಗಿದೆ. ಇನ್ನೂ ಈ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ಇದೇ ಮೊದಲ ಬಾರಿ ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ಸಿಕ್ಸ್ ಪ್ಯಾಕ್ ಬಾಡಿಯಲ್ಲಿ ಕಾಣಿಸಿಕೊಂಡಿದ್ದಾರೆ.

ad

ಹೌದು ಪೋಸ್ಟರ್ , ಹಾಗೂ ಟೀಸರ್ ಮೂಲಕವೇ ಸಿನಿಮಾದ ಬಗೆಗೆ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಪೈಲ್ವಾನ್ ಚಿತ್ರತಂಡ ಇದೀಗಾ ಚಿತ್ರದ  ಟೈಟಲ್ ಸಾಂಗ್ ರಿಲೀಸ್ ಮಾಡಿದೆ. ‘ಪೈಲ್ವಾನ್ ತೋಳು ನೋಡು ಉಕ್ಕು, ಒಂದೇ ಏಟು ಸಾಕು, ದೇವ್ರೆ ನಿಂಗೆ ದಿಕ್ಕು, ಬಂದ ನೋಡು ಪೈಲ್ವಾನ್’ ಎನ್ನುವ ಸಾಲುಗಳನ್ನು ಹೊಂದಿರುವ ಈ ಹಾಡು ಕಿಚ್ಚನ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚುವಂತಿದೆ.

ಅಲ್ಲದೆ ಕಿಚ್ಚನ ಖಡಕ್ ಲುಕ್ ಹುರಿಗೊಳಿಸಿದ ಕಟ್ಟುಮಸ್ತಾದ ದೇಹ, ಉಕ್ಕಿನ ತೋಳುಗಳು ನಿಜಕ್ಕೂ ಎದುರಾಳಿಗಳು ನೆಲಸಮ ಮಾಡುವಂತೆ ಭಾವನೆ ಹುಟ್ಟಿಸುತ್ತದೆ. ಇನ್ನೂ ಕುಸ್ತಿ ಅಖಾಡದಲ್ಲಿಕಾಣಿಸಿಕೊಂಡಿರುವ ಕಿಚ್ಚನ ನ್ಯೂ ಲುಕ್ ಗೆ ಪ್ರೇಕ್ಷಕ ಫುಲ್ ಫಿದಾ ಆಗಿದ್ದು, ಈ ಒಂದು ಹಾಡಿನಲ್ಲಿ ‘ರನ್ನ’ ತನ್ನ ಸಿನಿಮಾಗಾಗಿ ಪಟ್ಟಿರುವ ಪರಿಶ್ರಮ ಎದ್ದು ಕಾಣಿಸುತ್ತದೆ. ಸದ್ಯ ಈ ಹಾಡು ಅಭಿಮಾನಿಗಳಲ್ಲಿ ಹುಚ್ಚು ಹಿಡಿಸುವಂತಿದೆ.

ಜೊತೆಗೆ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ವ್ಯಾಸ ರಾಜ್ ಕಂಠದಲ್ಲಿ ಟೈಟಲ್ ಟ್ರಾಕ್ ಮೂಡಿಬಂದಿದೆ. ಈ ಹಾಡಿಗೆ ಸಾಹಿತ್ಯವನ್ನು ವಿ ನಾಗೇಂದ್ರ ಪ್ರಸಾದ್ ರಚಿಸಿದ್ದು, ಚಿತ್ರಕ್ಕೆ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಈ ಚಿತ್ರದ ಎಲ್ಲಾ ಹಾಡುಗಳು ಅಧಿಕೃತವಾಗಿ ಇದೇ ತಿಂಗಳು 27ಕ್ಕೆ ರಿಲೀಸ್ ಆಗಲಿದೆ. ಸದ್ಯ ಸ್ಯಾಂಡಲ್ ವುಡ್ ಹೈ ಬಜೆಟ್ ಚಿತ್ರವಾಗಿರುವ ಪೈಲ್ವಾನ್ ಸಿಂಗಲ್ ಸಾಂಗ್ ನನ್ನು ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದ್ದು, ಚಿತ್ರ ಮುಂದಿನ ತಿಂಗಳು ಅಂದರೆ ಆಗಸ್ಟ್ ಕೊನೆಯಲ್ಲಿ ತೆರೆ ಮೇಲೆ ಅಬ್ಬರಿಸಲಿದೆ.