ಇದು ಎಲ್ಲಾ ತರಹದ ಹಾವಲ್ಲ. ಇದರ ವಿಶೇಷತೆ ಏನು ಗೊತ್ತಾ?

ಮರದಿಂದ ಮರಕ್ಕೆ ಹಾರೋ ಹಾವನ್ನ ನೋಡಿದ್ದೀರಾ..? ಮರದಿಂದ ಮರಕ್ಕೆ ಹಾರೋದ್ರಲ್ಲಿ ಅದು ಎಕ್ಸ್​ಪರ್ಟ್​.. ನಿಜಕ್ಕೂ ಅಪರೂಪ ಅಂತಲೇ ಹೇಳಬಹುದು.. ಅಂತಹ ವಿಶಿಷ್ಟ ಹಾವೊಂದು ಶಿವಮೊಗ್ಗ ನಗರದಲ್ಲಿ ಪತ್ತೆಯಾಗಿದೆ.

ad


ದಟ್ಟವಾಗಿರೋ ಅರಣ್ಯ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಅಂತಹದ್ರಲ್ಲಿ ನಗರ ಪ್ರದೇಶದಲ್ಲಿ ಇಂತಹ ಹಾವು ಪತ್ತೆಯಾಗೋದು ಅಪರೂಪ ಅಂತಲೇ ಹೇಳಬಹುದು. ಇದನ್ನು ಫ್ಲೈಯಿಂಗ್ ಸ್ನೇಕ್ ಅಂತ ಇಂಗ್ಲೀಷ್​ನಲ್ಲಿ ಕರೆದ್ರೆ ಕನ್ನಡದಲ್ಲಿ ಹಾರುಂಬೆ ಹಾವು ಅಂತ ಕರೀತಾರೆ. ಆಹಾರ ಹುಡುಕಿಕೊಂಡು ಬಂದಿತ್ತೋ ಏನೋ..

ಈ ಹಾವನ್ನು ಉರುಗ ತಜ್ಞ ಸ್ನೇಕ್ ಕಿರಣ್ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಿದ್ದಾರೆ. ಮರದಿಂದ ಮರಕ್ಕೆ.. ರಂಬೆಯಿಂದ ರಂಬೆಗೆ ಹಾರುವ ಹಾವು ಇದಾಗಿದೆ. ಇದು ವಿಷಾಕಾರಿ ಸರ್ಪವೇನು ಅಲ್ಲ.. ಸಾಮಾನ್ಯವಾಗಿ ಹಾರುವ ಹಾವು ಹಸಿರು ಬಣ್ಣ ಹೊಂದಿರುತ್ತವೆ. ಈ ಹಾವು ಮಾತ್ರ ವಿಶೇಷವಾದ ಬಣ್ಣ ಹೊಂದಿದೆ. ಮರದಲ್ಲಿರುವ ಹುಳ, ಉಪ್ಪಟೆ ತಿಂದು ಬದುಕುವ ಹಾವು ಇದು.