ಇಬ್ಬರು ನಟಿಯರು- ಒಬ್ಬ ಹುಡುಗ : ಇದು ಸ್ಯಾಂಡಲ್ ವುಡ್ ತ್ರಿಕೋನ ಪ್ರೇಮ ಪ್ರಕರಣ !!

ಇಬ್ಬರು ನಟಿಯರು- ಒಬ್ಬ ಹುಡುಗ : ಇದು ಸ್ಯಾಂಡಲ್ ವುಡ್ ತ್ರಿಕೋನ ಪ್ರೇಮ ಪ್ರಕರಣ !!

ಥೇಟ್ ಅನಂತ್ ನಾಗ್ ಸಿನೇಮಾದ ಕತೆಯಂತಿದೆ ಈ ಇಬ್ಬರು ಖ್ಯಾತ ನಟಿಯರು ಮತ್ತು ಯುವಕನೊಬ್ಬನ ಕತೆ !! ಕಾರುಣ್ಯ ರಾಮ್ ಕನ್ನಡದ ಖ್ಯಾತ ಸಿನೇಮಾ ನಟಿ. ನೇತ್ರ ಸಿಂದ್ಯಾ ಯಾನೆ ಅನಿಕಾ ಕನ್ನಡ ಧಾರವಾಹಿ ಲೋಕದ ಖ್ಯಾತ ನಟಿ. ಇಬ್ಬರೂ ಲವ್ ಮಾಡ್ತಿರೋದು ಒಬ್ಬನೇ ಹುಡುಗನನ್ನು !! ಇದು ಹೊಸ ಚಿತ್ರಕತೆಯಲ್ಲ. ಬದಲಿಗೆ ಈ ನಟಿಯರ ರಿಯಲ್ ಸ್ಟೋರಿ.

 

ಹೌದು. ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡೋ ಕನ್ನಡದ ಮಹಿಳಾ ಪ್ರೇಕ್ಷಕರಿಗೆ ಅದರಲ್ಲಿನ ಕುಮುದಾ ಎಂಬ ವಿಲನ್ ಪಾತ್ರ ಚಿರಪರಿಚಿತ. ಈ ಕುಮುದಾ ಪಾತ್ರಧಾರಿ ನೇತ್ರಾ ಸಿಂಧ್ಯಾ ಯಾನೆ ಅನಿಕಾ ಮತ್ತೋರ್ವ ನಟಿಯ ಕಾರಣಕ್ಕೆ ಕಂಗಾಲಾಗಿ ಕೂತಿದ್ದಾಳೆ. ಹಾಗೆ ಅನಿಕಾಳ ಬದುಕನ್ನು ಕಾಡುತ್ತಿರುವ ನಟಿ ಕಾರುಣ್ಯಾ ರಾಮ್! ಈ ಬಗ್ಗೆ ಕಾರುಣ್ಯಾ ವಿರುದ್ಧ ಪೊಲೀಸರಿಗೆ ದೂರು ನೀಡಲೂ ಮುಂದಾಗಿದ್ದಾರೆ!

 

ನಲವತ್ತಕ್ಕೂ ಹೆಚ್ಚು ಸೀರಿಯಲ್‌ಗಳಲ್ಲಿ ನಟಿಸುತ್ತಾ ಪ್ರಸಿದ್ಧಿ ಪಡೆದಿರುವ ನೇತ್ರಾ ಸಿಂಧ್ಯಾ ಇತ್ತೀಚೆಗಷ್ಟೇ ಸಚಿನ್ ಎಂಬವರ ಜೊತೆ ಇವರ ಎಂಗೇಜ್‌ಮೆಂಟ್ ಕೂಡಾ ನೆರವೇರಿತ್ತು.

 

ಈ ಸಚಿನ್ ಮತ್ತು ಕಾರುಣ್ಯಾ ರಾಮ್ ಹಳೇ ಪ್ರೇಮಿಗಳಂತೆ. ಕಳೆದ ಏಳು ವರ್ಷಗಳಿಂದ ಸಚಿನ್ ಮತ್ತು ಕಾರುಣ್ಯ ರಾಮ್ ಪ್ರೇಮಿಸುತ್ತಿದ್ದರು. ಒಂದಷ್ಟು ಕಾಲ ಸಚಿನ್ ಜೊತೆ ಸುತ್ತಾಡಿದ ಕಾರುಣ್ಯ ನಂತರ ಈತನ ಬಳಿ ಕಾಸಿಲ್ಲ, ತನ್ನನ್ನು ಬಾಳಿಸೋ ಯೋಗ್ಯತೆ ಇಲ್ಲ ಅಂತೆಲ್ಲ ಕೊಸರಾಡಿ ಎದ್ದು ಹೋಗಿದ್ದಳಂತೆ. ಈ ಬ್ರೇಕಪ್ ಸಂಭವಿಸಿದ್ದು ಈಗ್ಗೆ ಮೂರೂವರೆ ವರ್ಷಗಳಷ್ಟು ಹಿಂದೆ. ಆ ನಂತರ ಸಚಿನ್ ಮತ್ತು ಕಾರುಣ್ಯಾ ನಡುವೆ ಯಾವುದೇ ಸಂಪರ್ಕಗಳಿರಲಿಲ್ಲ.


ಆದರೆ ಯಾವಾಗ ಸಚಿನ್ ನೇತ್ರಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿರೋ ವಿಚಾರ ಗೊತ್ತಾಯ್ತೋ ಆವತ್ತಿಂದ ಕಾರುಣ್ಯಾ ಮತ್ತೆ ಎಂಟ್ರಿ ಕೊಟ್ಟು ಸಚಿನ್‌ನನ್ನು ಕಾಡಲಾರಂಭಿಸಿದ್ದಾಳೆ. ಪಬ್ ವೊಂದಕ್ಕೆ ಖುದ್ದು ಸಚಿನ್ ನನ್ನು ಕರೆಸಿಕೊಂಡು ರಗಳೆ ಮಾಡಿದ್ದಾಳೆ. ಹೊತ್ತಲ್ಲದ ಹೊತ್ತಲ್ಲಿ ಕರೆ ಮಾಡಿ ಭೇಟಿಯಾಗುವಂತೆ ಪೀಡಿಸುತ್ತಿದ್ದಾಳೆ. ಇದಲ್ಲದೆ ಸಚಿನ್ ಹೆತ್ತವರಿಗೂ ಕರೆ ಮಾಡಿ ಧಮಕಿ ಹಾಕುತ್ತಿದ್ದಾಳಂತೆ. ಇದು ಬಿಟಿವಿ ಜೊತೆ ಮಾತನಾಡುತ್ತಾ ನೇತ್ರಾ ಸಿಂದ್ಯಾ ಆರೋಪಿಸಿದ್ದು.

Sandalwood's Actress Triangle Love Story in Begaluru.

ಬಿಟಿವಿಗೆ ಈ ಸುದ್ದಿ ಗೊತ್ತಾದ ತಕ್ಷಣ ಮೂವರನ್ನೂ ಸಂಪರ್ಕಿಸಲಾಯ್ತು. ನನಗೂ ನೇತ್ರ ಸಿಂದ್ಯಾಗೂ ಪರಿಚಯವೇ ಇಲ್ಲ ಎಂದು ಹೇಳಿದ ಕಾರುಣ್ಯ ರಾಮ್, ನಾನ್ಯಾರಿಗೂ ಬೆದರಿಕೆ ಹಾಕಿಲ್ಲ. ಸಚಿನ್ ಮತ್ತು ನಾನು ಉತ್ತಮ ಗೆಳೆಯರು ಎಂದರು.

ಉದ್ಯಮಿ ಸಚಿನ್ ಇಬ್ಬರು ನಟಿಯರ ವಿರುದ್ದವೂ ಮಾತನಾಡದೇ ಕಾರುಣ್ಯ ರಾಮ್ ಮತ್ತು ನಾನು ಫ್ರೆಂಡ್ಸ್ ಅಷ್ಟೆ ಅಂದರು.

ಕಾರುಣ್ಯ ರಾಮ್, ನೇತ್ರ ಸಿಂದ್ಯಾ ಮತ್ತು ಸಚಿನ್ ಬಿಟಿವಿಯಲ್ಲೇ ಪರಸ್ಪರ ಮಾತನಾಡಿಕೊಂಡರು. ಕಾರುಣ್ಯ ರಾಮ್ ಮತ್ತು ಸಚಿನ್ ಫ್ರೆಂಡ್ ಆಗಿರೋದಕ್ಕೆ ಅಭ್ಯಂತರ ಇಲ್ಲ. ಫ್ರೆಂಡ್ಸ್ ಆಗಿಯೇ ಇರಲಿ. ಮೆಸೇಜ್ ಮಾಡುವುದು, ಹೊತ್ತಲ್ಲದ ಹೊತ್ತಲ್ಲಿ ಫ್ರೆಂಡ್ಸಿಪ್ ಮೀರಿದ ಮೆಸೇಜ್ ಮಾಡುವುದನ್ನು ಮಾಡಿದ್ರೆ ನಾನು ಮತ್ತೆ ಬಿಟಿವಿಗೆ ಕರೆ ಮಾಡಬೇಕಾಗುತ್ತದೆ ಎಂದು ನೇತ್ರ ಸಿಂದ್ಯಾ ಎಚ್ಚರಿಸೋದ್ರೊಂದಿಗೆ ಈ ಪ್ರಕರಣ ಸದ್ಯ ಸುಖಾಂತ್ಯ ಕಂಡಿದೆ.