ಪ್ರೀತಿಯ ಟೆಸ್ಟ್ ನಲ್ಲಿ ಉಪ್ಪಿ ಪಾಸ್! ‘ಐ ಲವ್ ಯೂ’ ಟೂ ಎಂದ ಪ್ರೇಕ್ಷಕರು!!

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯು ಚಿತ್ರ ಇಂದು ತೆಲುಗು ಹಾಗೂ ಕನ್ನಡದಲ್ಲಿ ಏಕ ಕಾಲಕ್ಕೆ ಒಂದು ಸಾವಿರ ಸ್ಕ್ರೀನ್ ಮೇಲೆ ತೆರೆಕಂಡಿದೆ. ನಿರ್ದೇಶಕ ಆರ್‌.ಚಂದ್ರು ‘ತಾಜ್‌ ಮಹಲ್‌’ ಸೇರಿದಂತೆ ತಮ್ಮ ಹಲವು ಸಿನಿಮಾಗಳಲ್ಲಿ ಪ್ರೀತಿ ಆಧಾರಿಸಿದ ಕಥೆಗಳಿಗೆ ಈ ಹಿಂದೆ ಆ್ಯಕ್ಷನ್ ಕಟ್ ಹೇಳಿದ್ದರು. ಸದ್ಯ ಇದೀಗಾ ಉಪ್ಪಿ ಹಾಗೂ ಚಂದ್ರು ಕಾಂಬಿನೇಷನ್‌ ನ ‘ಐ ಲವ್‌ ಯೂ’ ಚಿತ್ರ ತೆರೆ ಮೇಲೆ ಸಖತ್ ಆಗಿ ಮೂಡಿಬಂದಿದೆ.

ಭಾರತೀಯ ಸಿನಿಮಾ ರಂಗದಲ್ಲಿ ಹಲವರು ‘ಲವ್‌’ಗೆ ತಮ್ಮದೇ ಆದ ರೀತಿಯಲ್ಲಿ ವಾಖ್ಯಾನ ನೀಡಿದ್ದಾರೆ. ಆದರೆ ಅವೆಲ್ಲವನ್ನು ಮೂಲೆಗೊಳಿಸಿ ಉಲ್ಟಾ ಹೊಡೆದಂತೆ ಪ್ರೀತಿ ಪ್ರೇಮ ಕಂಡವರು ಉಪೇಂದ್ರ. ಅದೇ ರೀತಿ ಈ ಸಿನಿಮಾದಲ್ಲಿಯೂ ಅದು ಮುಂದುವರೆದಿದೆ. ಜೊತೆಗೆ ನಿರ್ದೇಶಕ ಚಂದ್ರು ಈ ಚಿತ್ರದಲ್ಲಿ ಈ ಪ್ರೀತಿಗೆ ಸೆಂಟಿಮೆಂಟ್‌ ನನ್ನು ಸೇರಿಸಿದ್ದಾರೆ.

ಇನ್ನೂ ಚಿತ್ರದಲ್ಲಿ ನಟಿ ರಚಿತಾ ಧಾರ್ಮಿಕ ಎಂಬ ಪಾತ್ರದಲ್ಲಿ ಹಾಗೂ ನಟ ಉಪ್ಪಿ ಸಂತೋಷ್‌ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ಚಿತ್ರದಲ್ಲಿ ‘ಪ್ರೀತಿ ಎಂದರೆ ಅಪ್ಪಟ ಭಾವನೆಗಳ ಸಮ್ಮಿಲನ’ ಎನ್ನುವುದು ರಚಿತ ವಾದವಾಗಿದ್ದು, ಈ ವಿಷಯದ ಮೇಲೆ ಪಿಎಚ್‌ಡಿ ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರದಲ್ಲಿ ನಾಯಕ ಇದರ ತದ್ವಿರುದ್ಧ ಅಂದರೆ ‘ಲವ್‌’ ಅದೊಂದು ದೈಹಿಕ ಸಂಬಂಧಕ್ಕಿರುವ ಮುನ್ನುಡಿ. ಸೆಕ್ಸ್‌ಗಾಗಿ ಹಾಕಿರುವ ಮುಖವಾಡ. ಪಿಕಪ್‌, ಡ್ರಾಪ್‌, ಪ್ಯಾಕಪ್‌ ಇದಷ್ಟೇ ಲವ್‌ ಎಂದು ವಾದಿಸುವವನ ಪಾತ್ರದಲ್ಲಿ ವಿಭಿನ್ನವಾಘಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಮನುಷ್ಯರು ತಮ್ಮನ್ನು ತಾವು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸಲ್ಲ ಎನ್ನುವುದೇ ಈತನ ಫಿಲಾಸಫಿ.

ಚಿತ್ರದ ಮೊದಲ ಹಂತದಲ್ಲಿ ಧಾರ್ಮಿಕಳನ್ನು ಒಲಿಸಿಕೊಳ್ಳಲು ಸಂತೋಷ್ ಎಲ್ಲ ರೀತಿಯಲ್ಲಿಯೂ ಕಸರತ್ತು ಪಡುತ್ತಾನೆ. ಅಲ್ಲಿ ಕೆಲವೊಂದಷ್ಟು ಡ್ರಾಮ ನಡೆಯುತ್ತದೆ. ಆದರೆ ಕನಿಷ್ಠ ಜವಾಬ್ದಾರಿಯೂ ಹೊರದಂಥ ಸಂತೋಷ್‌, ಬದುಕಿನಲ್ಲಿ ಛಲ ತಗೆದುಕೊಂಡು ದೊಡ್ಡ ಉದ್ಯಮಿ ಆಗುತ್ತಾನೆ. ಜೊತೆಗೆ ತನ್ನ ಅಪ್ಪನ ಆಸೆಯಂತೆ ಅಪ್ಪಟ ಗೃಹಿಣಿ (ಸೋನು ಗೌಡ) ಜೊತೆ ಮದುವೆಯಾಗಿ ಮುದ್ದಾದ ಮಗುವಿಗೆ ತಂದೆಯಾಗುತ್ತಾನೆ. ಆದರೆ ಮತ್ತೆ ಧಾರ್ಮಿಕಳ ಮೇಲೆ ಮೋಹ ಚಿತ್ರಕಥೆಯಲ್ಲಿ ತಿರುವುಗಳು ಎದುರಾಗುತ್ತವೆ. ಕೊನೆಗೆ ಈ ಉದ್ಯಮಿ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಹೆಂಡತಿಯೊಂದಿಗೆ ಹೋಗುತ್ತಾನಾ? ಅಥವಾ ತನ್ನೊಳಗೆ ಪ್ರೀತಿ ಹುಟ್ಟಿಸಿದ ಧಾರ್ಮಿಕಳ ಜತೆ ಸಾಗುತ್ತಾನಾ ಎನ್ನುವುದೇ ಚಿತ್ರದ ಕಥೆಯಾಗಿದೆ.

ಒಟ್ಟಿನಲ್ಲಿ ನಿರ್ದೇಶಕ ಚಂದ್ರು ಸಿನಿಮಾವನ್ನು ಕಲರ್‌ಫುಲ್‌ ಆಗಿ ಕಟ್ಟಿಕೊಟ್ಟಿದ್ದು, ಸುಜ್ಞಾನರವರ ಸಿನಿಮಾಟೋಗ್ರಾಫರ್‌ ಸೂಪರ್ ಆಗಿ ಮೂಡಿಬಂದಿದೆ. ಜೊತೆಗೆ ಉಪೇಂದ್ರ, ರಚಿತಾ ರಾಮ್‌, ಸೋನು ಗೌಡ ಅಭಿನಯ ಸಖತ್ ಆಗಿ ಮೂಡಿಬಂದಿದೆ. ಇನ್ನೂ ಚಿತ್ರದಲ್ಲಿ ಉಪೇಂದ್ರ ಗೆಳೆಯನಾಗಿ ನಟಿಸಿರುವ ಪಿ.ಡಿ.ಸತೀಶ್‌, ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಬ್ರಹ್ಮಾನಂದಂ ಕಚಗುಳಿ ಇಡುತ್ತಾರೆ.
ಇನ್ನೂ ಚಿತ್ರ ಆಧುನಿಕ ಜಗತ್ತು ಶಿಥಲಗೊಂಡ ಸಂಬಂಧಗಳಿಗೆ ಹೆಚ್ಚು ಮುಖಾಮುಖಿ ಆಗುತ್ತದೆ ಮೋಹ, ಮಮಕಾರದ ನಡುವೆ ಕಳ್ಳಾಟ ಆಡುತ್ತಿದೆ. ಇಂತಹ ಸಂಬಂಧಕ್ಕೆ ಕೊನೆಯಲ್ಲಿ ಉತ್ತಮ ಸಂದೇಶ ನಿರ್ದೇಶಕರು ನೀಡಿದ್ದಾರೆ. ಹಾಗಾಗಿ ಇದೊಂದು ಕುಟುಂಬ ಸಮೇತ ನೋಡುವಂತಹ ಚಿತ್ರವಾಗಿದೆ.

ಒಟ್ಟಾರೆಯಾಗಿ ಪ್ರೇಕ್ಷಕರು ಉಪ್ಪಿ ಹಾಗೂ ರಚಿತಾ ಬೋಲ್ಡ್ ಅಭಿನಯಕ್ಕೆ ಜೈ ಎಂದಿದ್ದು, ಚಂದ್ರು ನಿರ್ದೇಶನಕ್ಕೆ ಹಾಗೂ ಚಿತ್ರದ ಕಥೆಗೆ ಫುಲ್ ಫಿದಾ ಆಗಿದ್ದಾರೆ.