ಬೆಂಗಳೂರಿಗೆ ಬಾಲಸುಬ್ರಹ್ಮಣ್ಯ ಶಾಪ !! ಮುಳುಗೋಕು ಮುಂಚೆ ನಡೆಯಬೇಕಿದೆ ಮಹಾಪೂಜೆ !!

ad

ಯಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರ್ಥಿಕ ಸಲಹೆಗಾರನೇ ಇದರ ರೂವಾರಿ. ವೃತ್ತಿಯಿಂದ ನಿವೃತ್ತಿಯಾಗಿದ್ರೂ ಸಾಯೋವರೆಗೂ ಸರ್ಕಾರಿ ಭೂಮಿ ನುಂಗೋ ಹುದ್ದೆ ಗಿಟ್ಟಿಸಿಕೊಂಡಿದ್ದಾನೆ.ಪ್ರಾಧಿಕಾರದ ಆರ್ಥಿಕ ಆಭಿವೃದ್ಧಿಗೆ ಶ್ರಮಿಸಬೇಕಿದ್ದ ಸಲಹೆಗಾರನೇ ನೂರಾರು ಕೋಟಿ ಮೌಲ್ಯದ ಭೂಮಿಯನ್ನು ಮಾರಾಟ ಮಾಡಲು ಸ್ಕೆಚ್ ಹಾಕಿದ್ದಾನೆ. ಬಿಡಿಎ ಅಕ್ರಮದ ಸೂತ್ರದಾರನಂತಿರುವ ಆರ್ಥಿಕ ಸಲಹೆಗಾರ ಬಾಲಸುಬ್ರಹ್ಮಣ್ಯ 25 ಕೋಟಿ ಕಮಿಷನ್ ಪಡೆದು ಅರಣ್ಯ ಮತ್ತು ಆಸ್ಪತ್ರೆ ಜಾಗಕ್ಕೆ ಮೀಸಲಿಟ್ಟ ಜಾಗವನ್ನು ಹರಾಜು ಹಾಕಲು ಮುಂದಾಗಿದ್ದಾನೆ.

ಬನಶಂಕರಿ 6ನೇ ಹಂತದ 3 ನೇ ಬ್ಲಾಕ್ ಬಡಾವಣೆಯಲ್ಲಿ ಅರಣ್ಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಾಗಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಸೈಟ್ ಗಳಾಗಿ ಪರಿವರ್ತಿಸಿ ಮಾರಾಟ ಮಾಡಲು ಹುನ್ನಾರ ನಡೆಸಿದ್ದಾರೆ. ಬಾಲಸುಬ್ರಹ್ಮಣ್ಯ ಮತ್ತು ಆತನಿಗೆ ಕುಮ್ಮಕ್ಕು ನೀಡುವ ದಲ್ಲಾಳಿಗಳ ಪ್ರಭಾವದಿಂದ ಆಸ್ಪತ್ರೆ ಜಾಗದಲ್ಲೂ ಸೈಟ್ ಮಾಡಿ ಮಾರಾಟ ಮಾಡಲು ತೀರ್ಮಾನಿಸಲಾಗಿದೆ.ಯಾವುದೇ ಬಡಾವಣೆ ನಿರ್ಮಾಣ ಮಾಡುವ ಮುನ್ನ ಮೂಲಸೌಲಭ್ಯಕ್ಕಾಗಿ ಭೂಮಿಯನ್ನು ಮೀಸಲಿಡಲಾಗುತ್ತೆ. ಅದೇ ರೀತಿ ಬನಶಂಕರಿ 6 ನೇ ಹಂತದಲ್ಲಿ ಹೆಮ್ಮಿಗೆಪುರ ಗ್ರಾಮದ ಸರ್ವೆ ನಂಬರ್ 89 ರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ 1 ಎಕರೆ 18 ಗುಂಟೆ ಜಾಗ ಮೀಸಲಿಡಲಾಗಿತ್ತು. ಮೂಲ ಉದ್ದೇಶಕ್ಕೆ ಮೀಸಲಿಟ್ಟ ಜಾಗವನ್ನೇ ಈಗ ನುಂಗಿ ನೀರು ಕುಡಿಯಲು ಮಹೂರ್ತ ಫಿಕ್ಸ್ ಮಾಡಿದ್ದಾರೆ.

ವಿವಿಧ ಅಳತೆಯ 127 ಸೈಟ್ ಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಲು ಪ್ರಾಧಿಕಾರದ ಸಭೆಗೆ ಟಿಪ್ಪಣಿ ಮಂಡಿಸಲಾಗಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ನೂರಾರು ಕೋಟಿ ಮೌಲ್ಯದ ಜಾಗ ಹಾರಾಜಾಗುತ್ತೆ.
ಬಾಲಸುಬ್ರಹ್ಮಣ್ಯನ ಅವ್ಯವಹಾರ ಒಂದೆರಡಲ್ಲ. ಬಾಲಸುಬ್ರಹ್ಮಣ್ಯನ ಅಕ್ರಮದ ಬಗ್ಗೆ ಬಿಟಿವಿಯಲ್ಲಿ ಮೂರ್ನಾಲ್ಕು ಬಾರಿ ಸುದ್ದಿ ಬಿತ್ತರವಾಗಿದ್ರೂ ಸರ್ಕಾರ ಮಾತ್ರ ಕ್ರಮ ಕೈಗೊಂಡಿಲ್ಲ.ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಪರಮೇಶ್ವರ್ ಸರ್ಕಾರಿ ಭೂಮಿ ಲೂಟಿ ಹೊಡೆಯುತ್ತಿರುವ ಬಾಲಸುಬ್ರಹ್ಮಣ್ಯನ ಬಾಲ ಕಟ್ ಮಾಡಬೇಕಿದೆ.