ರಾಜ್ಯದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಅಭ್ಯರ್ಥಿಗಳು ಈಗಾಗಲೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೀಡು ಬಿಟ್ಟಿದ್ದು ಶತಾಯ-ಗತಾಯ ಮತದಾರನ ಮನವೊಲಿಸುವಲ್ಲಿ ನಿರತರಾಗಿದ್ದಾರೆ.
ಈ ಮಧ್ಯೆ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಅನ್ನೋ ಲೆಕ್ಕಾಚಾರವೂ ಈಗಾಗಲೇ ಆರಂಭವಾಗಿದೆ. ಈ ಮಧ್ಯೆ ಜ್ಯೋತಿಷಿಯೊಬ್ಬರು ಈ ವರ್ಷ ಅತಂತ್ರ ವಿಧಾನಸಭೆ ರಚನೆಯಾಗಲಿದ್ದು, ಎಂದಿದ್ದು ಇದಕ್ಕೆ ಚುನಾವಣೆ ದಿನಾಂಕ ಹಾಗೂ ಕೌಟಿಂಗ್ ದಿನವೇ ಕಾರಣ ಎಂದಿದ್ದಾರೆ. ಮಂಗಳೂರು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ್ ಈ ಭವಿಷ್ಯ ನುಡಿದಿದ್ದು, ಈ ಹಿಂದೆ ಗುಜರಾತ ಚುನಾವಣೆ ವೇಳೆ ಕೂಡ ಪ್ರಕಾಶ್ ನುಡಿದ ಭವಿಷ್ಯ ನಿಜವಾಗಿತ್ತು. ಇದೀಗ ಗೃಹನಕ್ಷತ್ರಗಳ ಲೆಕ್ಕಾಚಾರದ ಮೇಲೆ ಪ್ರಕಾಶ್ ಅಮ್ಮಣ್ಣಾಯ್ ಮತ್ತೊಮ್ಮೆ ಭವಿಷ್ಯ ನುಡಿದಿದ್ದು, ಜೆಡಿಎಸ್-ಬಿಜೆಪಿ ಮೈತ್ರಿಯಾದರೇ ವರ್ಷದಲ್ಲೇ ಮತ್ತೆ ಚುನಾವಣೆ ನಡೆಯಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಚುನಾವಣೆ ಘೋಷಣೆ ಆದ ಮೇ 15ಕ್ಕೆ ಚಂದ್ರನು ಉತ್ತರಾಭಾದ್ರ ನಕ್ಷತ್ರ, ಮೀನ ರಾಶಿಯಲ್ಲಿ ಇರುತ್ತದೆ. ಇನ್ನು ಮೀನ ರಾಶಿಯ ಅಧಿಪತಿಯಾದ ಗುರು ಗ್ರಹವು ಷಷ್ಟಾಷ್ಟಮ ಆಗುತ್ತದೆ. ಅಂದರೆ ಮೀನ ರಾಶಿಯಿಂದ ಲೆಕ್ಕ ಹಾಕಿದರೆ ಗುರು ಎಂಟನೆ ಸ್ಥಾನದಲ್ಲಿ, ಇನ್ನು ಗುರು ಗ್ರಹ ಇರುವ ತುಲಾ ರಾಶಿಯಿಂದ ಲೆಕ್ಕ ಹಾಕಿದರೆ ಆರನೇ ಸ್ಥಾನದಲ್ಲಿ ಮೀನ ರಾಶಿ ಆಗುತ್ತದೆ ಇದನ್ನು ಷಷ್ಟಾಷ್ಟಮ ಎಂದು ಕರೆಯಲಾಗುತ್ತದೆ. ರವಿ, ಚಂದ್ರ ದ್ವಿರ್ದ್ವಾದಶ. ರವಿಯು ಉಚ್ಚ ಅವರೋಹಿ. ಇದು ಚುನಾವಣಾ ದಿನದ 8 ಗಂಟೆಯ ವೃಷಭ ಲಗ್ನದ ಗ್ರಹಸ್ಥಿತಿ. ಕಿರೀಟಾಧಿಪತಿ ಗುರು ಷಷ್ಟಾಷ್ಟಮ. ಮತ ಎಣಿಕೆಯ ಆರಂಭದ ಕ್ಷಣದ ಮುಹೂರ್ತ ಮಿಥುನ ಲಗ್ನ. ದ್ವಿಸ್ವಭಾವ ರಾಶಿ ಆಗುತ್ತದೆ ಮಿಥುನ. ಆ ದಿನದ ಆರಂಭದಲ್ಲಿ ಭರಣಿ. ಆ ನಂತರ ಕೃತ್ತಿಕಾ ನಕ್ಷತ್ರವಿದೆ.
ಚುನಾವಣಾ ಮುಹೂರ್ತ ಕಾಲವೇ ವೃಷಭ ಲಗ್ನ. ಲಾಭಾದಿಪತಿ ಷಷ್ಟಾಷ್ಟಮ. ಲಗ್ನಾಧಿಪತಿ ದ್ವಿರ್ದ್ವಾದಶ. ದಿನ ನಕ್ಷತ್ರ ಪುಷ್ಯ. ಲಾಭ ಸ್ಥಾನಕ್ಕೆ ಗುರು ಅನಿಷ್ಟ ಸ್ಥಿತಿಯೂ ಷಷ್ಟಾಧಿಪತಿಯೂ ಆಗಿರುವಂತಹ ಮುಹೂರ್ತ ಕಾಲ. ಚುನಾವಣೆ ಘೋಷಣೆಯಾದ ಮಾರ್ಚ 27 ರವಿಯು ತನ್ನ ಉಚ್ಚ ಸ್ಥಿತಿಗೆ ಆರೋಹಿ ಗ್ರಹ. ಅಂದರೆ ಬಿಜೆಪಿಗೆ ಸಂಖ್ಯೆ ಜಾಸ್ತಿ ಸಿಗುತ್ತದೆ. ಇದೂ ಅಲ್ಲದೆ ಗುರು- ಶನಿಗಳು ವಕ್ರರೂ, ಶನಿ ಗ್ರಹ ಯುದ್ಧ ಸ್ಥಿತಿಯಲ್ಲೂ ಇದ್ದಾನೆ. ಇವತ್ತಿನ ನಕ್ಷತ್ರಾಧಿಪನೇ ಕಲಹದಲ್ಲಿರೋದರಿಂದ ಇದು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಎಂಬುದಕ್ಕೆ ಮೂನ್ಸೂಚನೆ.ಗೃಹ ನಕ್ಷತ್ರಗಳು ಕಾಂಗ್ರೆಸ್ನ ಸ್ಥಾನಗಳು ಗಣನೀಯವಾಗಿ ಇಳಿಕೆಯಾಗುವ ಲಕ್ಷಣವಿದ್ದು, ಬಿಜೆಪಿಯ ಸೀಟುಗಳು ಏರಿಕೆಯಾಗುವ ಸಾಧ್ಯತೆ ಇದೆ.
ಜೆಡಿಎಸ್ ಕಳೆದ ಬಾರಿಗೆ ಹೋಲಿಸಿದರೆ ಹೆಚ್ಚು ಸ್ಥಾನ ಪಡೆದು ಮಧ್ಯವರ್ತಿಯಾಗಿ ಲಾಭ ಪಡೆಯುತ್ತದೆ. ಈಗ ಯಾರು ಯಾರ ವಿರುದ್ಧ ವಾಗ್ದಾಳಿ ನಡೆಸಿದರೂ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ ಯೋಚಿಸಿದರೇ ಆಗ ಜೆಡಿಎಸ್- ಬಿಜೆಪಿ ಜತೆಯೂ ಬರಬಹುದು ಅಥವಾ ಕಾಂಗ್ರೆಸ್ ಜತೆಯೂ ಬರಬಹುದು.
ಇನ್ನು ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಯಾದರೇ ಒಂದು ವರ್ಷದೊಳಗೆ ಮತ್ತೆ ಕರ್ನಾಟಕ ವಿಧಾನಸಭೆ ಚುನಾವಣೆ ಆಗುವುದು ಖಚಿತ ಎನ್ನಲಾಗಿದ್ದು, ಒಟ್ಟಿನಲ್ಲಿ ಚುನಾವಣೆಯ ದಿನ ನಿಗದಿಯು ಅತಂತ್ರ ಸೂಚಕ ಎನ್ನಲಾಗಿದ್ದು ಮಾತ್ರ ರಾಜಕಾರಣಿಗಳಲ್ಲಿ-ಪಕ್ಷಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.