ಕೃತಿ ಸನೋನಿ ಇನ್ಸ್ಟಾಗ್ರಾಂನಲ್ಲಿ 22 ಮಿಲಿಯನ್​ ಪಾಲೋವರ್ಸ್​​! ಈ ಖುಷಿಯನ್ನು ನಟಿ ಸೆಲಿಬ್ರೇಟ್​ ಮಾಡಿದ್ದೇಗೆ ನೋಡಿ!!

ತೆಲುಗು ಚಿತ್ರರಂಗದ ಮೂಲಕ ಸಿನಿ ಜರ್ನಿ ಆರಂಭಿಸಿ ಬಾಲಿವುಡ್​ನಲ್ಲಿ ಹಾಟ್ ಸೌಂದರ್ಯದ ಮೂಲಕ ಮಿಂಚಿದ ಬೆಡಗಿ ಕೃತಿ ಸನೋನಿ. ಮಹೇಶ್ ಬಾಬು ಜೊತೆ ತೆಲುಗಿನಲ್ಲಿ ಕೆರಿಯರ್ ಆರಂಭಿಸಿದ ಕೃತಿ ಹೀರೋಪಂಥಿ ಸಿನಿಮಾದ ಮೂಲಕ ಬಾಲಿವುಡ್​ನಲ್ಲಿ ಮೋಡಿ ಮಾಡಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ad


ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ, ಇನ್ಸಟಾಗ್ರಾಂನಲ್ಲೂ ಅಪಾರ ಬೆಂಬಲಿಗರನ್ನು ಹೊಂದಿರುವ ಕೃತಿ ಅಭಿಮಾನಿಗಳ ಸಂಖ್ಯೆ ಇದೀಗ 2 ಕೋಟಿ ದಾಟಿದೆಯಂತೆ.

ಈ ಖುಷಿಯನ್ನು ವಿಭಿನ್ನವಾಗಿ ಆಚರಿಸಿರುವ ಕೃತಿ, ಸಮುದ್ರ ದಂಡೆಯಲ್ಲಿ ಮರಳಿನ ಮೇಲೆ 22 ಎಂದು ಬರೆದು, ಅದರ ಪಕ್ಕ ಬಿಕನಿಯಲ್ಲಿ ಕೂತು ಪೋಟೋ ಹಂಚಿಕೊಂಡಿದ್ದಾರೆ.


ಅಷ್ಟೇ ಅಲ್ಲ, 22 ಮಿಲಿಯನ್ ಜನರ ಪ್ರೀತಿ ನನ್ನನ್ನು ಹೀಗೆ ಖುಷಿಯಾಗಿರುವಂತೆ ಮಾಡಿದೆ ಎಂದು ಪೋಸ್ಟ್​ ಕೂಡ ಹಾಕಿಕೊಂಡಿದ್ದಾರೆ.

ದಿಲ್ವಾಲೆ, ರಾಬ್ತಾ ಬರೇಲಿ ಕಿ ಬರ್ಫಿ,ಲುಕ್ಕಾ ಚುಪ್ಪಿ ಸೇರಿದಂತೆ ಹಲವು ಚಿತ್ರಗಳ ಮೂಲಕ ಬಾಲಿವುಡ್​ ಬಹುಬೇಡಿಕೆಯ ನಟಿಯಾಗಿರುವ ಕೃತಿ ಸನೋನಿ, ಸಧ್ಯ ಅರ್ಜುನ ಪಟಿಯಾಲಾ ಸಿನಿಮಾದಲ್ಲಿ ದಿಲ್ಜಿತ್ ದೋಸಂಜ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.