ಟ್ರೈನ್​ ಅವಾಂತರದಿಂದ ಭವಿಷ್ಯ ಕಳೆದುಕೊಂಡ ವಿದ್ಯಾರ್ಥಿಗಳು! ಎಲ್ಲಿ? ಏನಾಯ್ತು? ಈ ಸ್ಟೋರಿ ನೋಡಿ!

ರಾಜ್ಯದಲ್ಲಿ ಟ್ರೈನ್​ ಅವಾಂತರದಿಂದ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್​ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಬೆಳಗೆ 6 ಗಂಟೆಗೆ ಬೆಂಗಳೂರು ತಲುಪಬೇಕಿದ್ದ ಹಂಪಿ ಎಕ್ಸಪ್ರೆಸ್​​ ಹಳಿ ಸಮಸ್ಯೆಯಿಂದಾಗಿ 8 ಗಂಟೆ ವ್ಯತ್ಯಯವಾಗಿ ಮಧ್ಯಾಹ್ನ 2 ಗಂಟೆ ವೇಳೆ ಬೆಂಗಳೂರು ತಲುಪಿದೆ. ಈ ಅವಾಂತರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಟ್ವಿಟ್​ ಮೂಲಕ ಟೀಕಿಸಿದ್ದಾರೆ.

ಟ್ವಿಟರ್​ನಲ್ಲಿ ಕೇಂದ್ರ ರೇಲ್ವೈ ಸಚಿವ ಪಿಯೂಶ್​ ಗೋಯೆಲ್​ರನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ನಿಮ್ಮ ಸಚಿವ ಸಂಪುಟ ಸಹೋದ್ಯೋಗಿಗೆ ಸರಿಯಾಗಿ ಕೆಲಸ ಮಾಡಲು ಹೇಳಿ, ಬೇರೆಯವರ ಸಾಧನೆಯನ್ನು ನಿಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳಬೇಡಿ ಎಂದು ಕುಟುಕಿದ್ದಾರೆ.

ಅಲ್ಲದೇ ವಿದ್ಯಾರ್ಥಿಗಳಿಗೆ ಉಂಟಾಗಿರುವ ಸಮಸ್ಯೆಗೂ ಸ್ಪಂದಿಸಿರುವ ಸಿದ್ಧರಾಮಯ್ಯ, ರೈಲುಗಳ ವ್ಯತ್ಯಾಸದಿಂದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಟ್ವಿಟ್​ ಮೂಲಕ ಮೋದಿಗೆ ಸಿದ್ಧರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.