ಅಲೆಗಳ ಮಧ್ಯೆ ಸಿಲುಕಿಕೊಂಡ ಪ್ರವಾಸಿಗ! ಪ್ರಾಣ ರಕ್ಷಿಸಿ ಮಾನವೀಯತೆ ಮೆರೆದ ಜೀವರಕ್ಷಕರು!!

ಮುಂಗಾರು ಮಳೆ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕಡಲು ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಅಲೆಗಳ ವೇಗ ಹೆಚ್ಚಾಗಿದೆ. ಹೀಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಹೀಗಿದ್ದರೂ ಉಪಿಯ ಮಲ್ಪೆ ಬೀಚ್​ನಲ್ಲಿ ಪ್ರಾಣ ಪಣಕ್ಕಿಟ್ಟು ಯುವಕರು ಮೋಜು ಮಸ್ತಿ ಮಾಡಿದ್ದಾರೆ.


ಅಪಾಯಕಾರಿ ಅಲೆಗಳ ಮಧ್ಯೆ ಮೋಜು ಮಾಡ್ತಿದ್ದ ಟೈಮಲ್ಲಿ ಭದ್ರಾವತಿಯ ಪ್ರವಾಸಿಗನೊಬ್ಬ ಸಮುದ್ರದ ಅಲೆಗಳಲ್ಲಿ
ಸಿಲುಕಿಕೊಂಡಿದ್ದು, ರಕ್ಷಣೆಗಾಗಿ ಅಂಗಲಾಚಿದ್ದಾನೆ. ಇದನ್ನ ಕಂಡ ಮಲ್ಪೆಯ ಜೀವ ರಕ್ಷಕರು ಯುವಕನನ್ನ ರಕ್ಷಿಸಿದ್ದಾರೆ.

ಕಳೆದ 3 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ರಕ್ಷಣೆ ಮಾಡ್ತಿರೋ ವಿಡಿಯೋ ವೈರಲ್ ಆಗಿದೆ. ಭದ್ರಾವತಿ ಮೂಲದ ಯುವಕರ ತಂಡ ಮಲ್ಪೆ ಬೀಚ್​ಗೆ ಬಂದಿತ್ತು. ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಯುವಕರು ಅದನ್ನು ಲೆಕ್ಕಿಸದೆ ನೀರಿಗಿಳಿದಿದ್ರು. ಜೀವರಕ್ಷಕರ ಸಾಹಸಕ್ಕೆ ಈಗ ಮೆಚ್ಚುಗೆ ವ್ಯಕ್ತವಾಗಿದೆ.