ನಟ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್​​- ನಾನು ಫಿಟ್​ ಆಗಿದ್ದೇನೆ ಎಂದ ದಚ್ಚು!

 

 ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ನಟ ದರ್ಶನ ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಗೊಂಡಿದ್ದು, ಮನೆಗ ತೆರಳಿದ್ದಾರೆ. ಈ ವೇಳೆ ಮಾದ್ಯಮದ ಜೊತೆ ಮಾತನಾಡಿದ ದರ್ಶನ ಮೀಡಿಯಾಗಳ ಮೇಲೆಯೇ ಹರಿಹಾಯ್ದರು.
ನಾನು ಆಸ್ಪತ್ರೆಯಲ್ಲಿ ಮಲಗಿ ಟಿವಿ ನೋಡುತ್ತಿದ್ದೇ ಎಂದ ದರ್ಶನ ಅಪಘಾತದ ಸುದ್ದಿ ಮಾಧ್ಯಮದಲ್ಲಿ ನೋಡಿ ಬೇಸರವಾಗಿದೆ. ಎಲ್ಲ ಮಾಧ್ಯಮಗಳು ಮನಬಂದಂತೆ ಸುದ್ದಿ ಮಾಡಿವೆ. ನಾಲ್ಕು,ಐದು , ಆರು ಜನ ಇದ್ದರೆಂದು ಮಾಧ್ಯಮದವರು ಹೇಳಿದ್ದಾರೆ.

ಅಷ್ಟೇ ಅಲ್ಲ ಕೆಲವರಂತೂ ಒಬ್ಬರು ಹುಡುಗಿ ಇದ್ದಳು ಎಂದು ಆರೋಪಿಸಿದ್ದಾರೆ. ಒಂದಲ್ಲ ನಾಲ್ಕು ಹುಡುಗಿ ಇದ್ದಳು ಎಂದು ದರ್ಶನ ವ್ಯಂಗ್ಯವಾಡಿದರು.
ಅಲ್ಲದೇ ನನಗರ ಆರು ದಿನಗಳ ಕಾಲ ನ್ಯೂಸ್​ ಚಾನೆಲ್​ಗಳು ಕಾಮಿಡಿ ಚಾನೆಲ್​ಗಳಂತೆ ಕಂಡವು. ನನ್ನ ಫಿಟನೆಸ್​ ಬಗ್ಗೆ ಕೂಡ ಮಾಧ್ಯಮಗಳು ತಲೆಕೆಡಿಸಿಕೊಂಡಿದ್ದವು. ನೋಡಿ ನನ್ನ ಫಿಟ್​ನೆಸ್​ ಹಾಗೇ ಇದೆ ಎಂದು ಕ್ಯಾಮರಾಗಳಿಗೆ ತಮ್ಮ ಬೈಸಿಪ್ಸ್ ಎತ್ತಿ ತೋರಿಸಿದರು.

 

 

ಇನ್ನು ತಾವು ರೆಸ್ಟ್​ಗೆ ಎಲ್ಲೋಗುತ್ತೇವೆ ಅನ್ನೋದನ್ನು ಮತ್ತೆ ಹೇಳುತ್ತೇನೆ ಎಂದ ದರ್ಶನ, ಡ್ರೆಸ್ಸಿಂಗ್​ಗಾಗಿ ಆಗಾಗ ಆಸ್ಪತ್ರೆಗೆ ಬರಬೇಕಾಗುತ್ತದೆ ಎಂದರು. ಅಷ್ಟೇ ಅಲ್ಲ ತಮ್ಮ ಎಂದಿನದ್ದೇ ಡೋಂಟ್ ಕೇರ್ ಭಾವದಲ್ಲಿ ಆಸ್ಪತ್ರೆಯಿಂದ ಹೊರಬಂದ ದರ್ಶನ, ಓನ್​ವೇನಲ್ಲೇ ತಮ್ಮ ಗಾಡಿಯಲ್ಲಿ ತೆರಳಿದರು.