ನಟ ಹರಿಕೃಷ್ಣರನ್ನೂ ಬಲಿ ಪಡೆದ ಅಪಘಾತ !! ಈ ಕುಟುಂಬಕ್ಕೆ ವಾಹನವೇ ಯಮ !!

 

ad

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌.ಟಿ.ರಾಮರಾವ್ ಅವರ ಮಗ, ತೆಲುಗು ನಟ ಮತ್ತು ಟಿಡಿಪಿ ಮುಖಂಡ ನಂದಮೂರಿ ಹರಿಕೃಷ್ಣ (62) ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಹರಿಕೃಷ್ಣ ಅವರ ಕುಟುಂಬಕ್ಕೂ ಅಪಘಾತಗಳಿಗೂ ಬಿಡದ ಕೆಟ್ಟ ನಂಟು. 2009ರಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾಗ ಅವರ ಮಗ ಜೂನಿಯರ್ ಎನ್‌ಟಿಆರ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. 2014ರಲ್ಲಿ ಹರಿಕೃಷ್ಣ ಅವರ ಮತ್ತೊಬ್ಬ ಮಗ ಜಾನಕಿರಾಮ್ ಸೂರ್ಯಂಪೇಟೆಯ ಮುನಗಾಲ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿಮೃತಪಟ್ಟಿದ್ದರು. ಈಗ ಹರಿಕೃಷ್ಣರನ್ನು ಬಲಿ ಪಡೆದುಕೊಂಡಿದೆ.

ಹರಿಕೃಷ್ಣ ಅವರು ಅಭಿಮಾನಿಯ ಪುತ್ರನ ಮದುವೆಯಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ನಿಂದ ನಲ್ಲೂರಿಗೆ ಒಬ್ಬರೇ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಹರಿಕೃಷ್ಣ ಅವರು ಟಿಡಿಪಿ ಸಂಸ್ಥಾಪಕ ಎನ್‌.ಟಿ.ರಾಮರಾವ್ ಅವರ ನಾಲ್ಕನೇ ಮಗ ಮತ್ತು ತೆಲುಗು ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರ ತಂದೆ. ರಾಜ್ಯಸಭೆ ಸದಸ್ಯರಾಗಿಯೂ ಕೆಲಸಮಯ ಸೇವೆ ಸಲ್ಲಿಸದ್ದರು.

ನಾರ್ಕೆಟ್‌ಪಲ್ಲಿ–ಅಡ್ಡಂಕಿ ರಸ್ತೆಯ ಅಣ್ಣೆವರ್ತಿ ಸಮೀಪ ಅಪಘಾತ ಸಂಭವಿಸಿದ ತಕ್ಷಣ ಅವರನ್ನು ನಾರ್ಕೆಟ್‌ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಅವರು ಅಸುನೀಗಿದ್ದರು.

1964ರಲ್ಲಿಯೇ ‘ಶ್ರೀಕೃಷ್ಣಾವತಾರಂ’ ಸಿನಿಮಾದಲ್ಲಿ ಬಾಲಕೃಷ್ಣನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಹರಿಕೃಷ್ಣ, ತಲ್ಲ ಪೆಲ್ಲಮ್ಮ (1970), ತಾಟಮ್ಮ ಕಲ (1974), ರಾಮ್ ರಹೀಮ್ (1974), ದಾನವೀರಶೂರ ಕರ್ಣ (1977), ಶ್ರೀ ರಾಮುಲಯ್ಯ (1998), ಸೀತಾರಾಮರಾಜು (1999) ಸೇರಿದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ವೈ.ವಿ.ಎಸ್.ಚೌಧರಿ ನಿರ್ದೇಶನದ ಲಾಹಿರಿ ಲಾಹಿರಿ ಲಾಹಿರಿಲೊ (2002) ಮತ್ತ ಸೀತಯ್ಯ (2003) ಚಿತ್ರಗಳು ಹರಿಕೃಷ್ಣ ಅವರ ನಟನಾ ಚಾತುರ್ಯಕ್ಕೆ ಸಾಕ್ಷಿಯಾಗಿದ್ದವು.