ಪೇಸ್​ಬುಕ್​ನಲ್ಲಿ ಪುತ್ರಿಯನ್ನು ಮನಸಾರೆ ಹೊಗಳಿದ ನಟ ನೆನಪಿರಲಿ ಪ್ರೇಮ್​!!

ಸ್ಟಾರ್​ ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಬಂದು ಸುದ್ದಿಯಾಗೋದು ಕಾಮನ್​. ಆದರೆ ನೆನಪಿರಲಿ ನಟ ಪ್ರೇಮ್​ ಪುತ್ರಿ ವಿದ್ಯಾಭ್ಯಾಸದ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಹೌದು ನಿನ್ನೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಷದಲ್ಲಿ ಪ್ರೇಮ್​ ಪುತ್ರಿ ಕೂಡ ಪಾಸಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಪ್ರೇಮ್​ ಪುತ್ರಿ ಶೇಕಡಾ 91 ರಷ್ಟು ಅಂಕಗಳೊಂದಿಗೆ ಪಾಸಾಗಿದ್ದಾರೆ.

ad


ಈ ಖುಷಿಯ ವಿಚಾರವನ್ನು ಸ್ವತಃ ನಟ ಪ್ರೇಮ್​ ತಮ್ಮ ಪೇಸ್​ಬುಕ್​, ವಾಟ್ಸಪ್​ ಹಾಗೂ ಟ್ವಿಟರ್​ ಖಾತೆಗಳಲ್ಲಿ ಹಂಚಿಕೊಂಡಿದ್ದು, ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ನನ್ನ ಮಗಳು ಪರೀಕ್ಷೆಯಲ್ಲಿ 91% ಮಾರ್ಕ್ಸ್​ ತಗೊಂಡಿದ್ದಾಳೆ. ಪೋಷಕರ ಪಾಲಿಗೆ ಇದು ಖುಷಿಯ ವಿಚಾರ. 8 ನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗ ಕೂಡ 3 ನೇ ರ್ಯಾಂಕ್ ಪಡೆದಿದ್ದಾನೆ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ.