ಗಿಡ ನೆಟ್ಟು ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿದ ನಟಿ ಐಂದ್ರಿತಾ ರೈ!

ಸ್ಯಾಂಡಲವುಡ್​​​​​ ಸ್ಟಾರ್​ಗಳು ಅಂದ್ರೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳೋದು ವಾಡಿಕೆ. ಆದರೆ ಸ್ಯಾಂಡಲ್​ವುಡ್​ನ ಮನಸಾರೆ ಬೆಡಗಿ ಐಂದ್ರಿತಾ ರೈಗೆ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಪರಿಸರ ಪ್ರೇಮ ಮೆರೆದಿದ್ದಾರೆ.

ad


ಮದುವೆ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸುತ್ತಿರುವ ಐಂದ್ರಿತಾ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪತಿ ಹಾಗೂ ನಟ ದಿಗಂತ ಜೊತೆ ಐಂದ್ರಿತಾ ರೈ ಡಿಫರೆಂಟ್​ ಆಗಿ ಬರ್ತ್​ಡೇ ಆಚರಿಸಿಕೊಂಡ್ರು. ಬೆಂಗಳೂರಿನ ಬಾಗಲಕುಂಟೆಯಲ್ಲಿರುವ ಸೌಂದರ್ಯ ಏಜುಕೇಷನ್ ಟ್ರಸ್ಟ್​ನಲ್ಲಿ ಕಾಲೇಜ್ ಕ್ಯಾಂಪಸ್​ನಲ್ಲಿ 40 ಗಿಡ ನೆಟ್ಟು ಪರಿಸರ ಕಾಳಜಿ ತೋರಿದ್ದಾರೆ.


ಈ ವೇಳೆ ಐಂದ್ರಿತಾ ಹಾಗೂ ದಿಗಂತ್​ಗೆ ಶಾಲಾ ಮಕ್ಕಳು, ಟೀಚರ್ಸ್​ ಸಾಥ್ ಕೊಟ್ರು. ಮದುವೆಗೂ ಮುನ್ನವೇ ಚಿತ್ರರಂಗದಲ್ಲಿ ಅವಕಾಶಗಳಿಂದ ವಂಚಿತರಾಗಿಯೇ ಉಳಿದಿದ್ದ ಐಂದ್ರಿತಾ ಸಧ್ಯ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಹೀಗಾಗಿ ಸಿಂಪಲ್​ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.