ಕೊನೆಗೂ ಆ ನಂಬರ್ ನಿಂದ ಮುಕ್ತಿ ಪಡೆದ ನಟಿ ರಮ್ಯಾ.

 

ad

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಂಸದೆ, ನಟಿ ಹಾಗೂ ಕಾಂಗ್ರೆಸ್​ ಯುವ ನಾಯಕಿ ರಮ್ಯ ಮತಪಟ್ಟಿಯ ಕ್ರಮ ಸಂಖ್ಯೆ ಸಾಕಷ್ಟು ಹಾಸ್ಯಕ್ಕೆ ಗುರಿಯಾಗಿತ್ತು. ತಾವು ಸ್ಪರ್ಧಿಸಿದ್ದ ಚುನಾವಣೆ ಹೊರತು ಪಡಿಸಿ ಇನ್ಯಾವುದೇ ಚುನಾವಣೆಯಲ್ಲಿ ಮತದಾನಕ್ಕೆ ಬಾರದ ರಮ್ಯಗೆ ಕ್ರಮಸಂಖ್ಯೆ 420 ಸಿಕ್ಕಿತ್ತು. ಅಂದ್ರೆ ರಮ್ಯ ಮತದಾನ ಕ್ರಮಸಂಖ್ಯೆ ಪೋರ್​ಟ್ವೆಂಟಿ.

 

 

ಕಳೆದ ವಿಧಾನಸಭೆ ಚುನಾವಣೆ ವೇಳೆ ರಮ್ಯ ಮತದಾನದ ಕ್ರಮಸಂಖ್ಯೆ 420 ಎಂದಿತ್ತು. ಇದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಮತದಾನ- ಕರ್ತವ್ಯದ ಬಗ್ಗೆ ಭಾಷಣ ಬಿಗಿಯುವ ರಮ್ಯ ಮತದಾನಕ್ಕೆ ಬಾರದೇ ಇರೋದು ಕೂಡ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ರಮ್ಯ ಮತದಾನಕ್ಕೆ ಬಂದಿರಲಿಲ್ಲ. ಎಲ್ಲೋ ಒಂದು 420 ನಂಬರ್ ಇದ್ದಿದ್ದರಿಂದಲೇ ರಮ್ಯ ಮತದಾನಕ್ಕೆ ಬರಲಿಲ್ಲ ಎಂದು ಬಿಂಬಿಸಲಾಯಿತು.

 

ಇದೀಗ ರಮ್ಯ ಅವರ ಮತದಾರ ಚೀಟಿಯ ಕ್ರಮಸಂಖ್ಯೆಯನ್ನು ಬದಲಾಯಿಸಲಾಗಿದೆ. 420 ಕ್ರಮಸಂಖ್ಯೆಯಿಂದ ಇದೀಗ 671 ಕ್ಕೆ ರಮ್ಯ ಹೆಸರು ಬದಲಾಗಿದೆ. ಹೀಗಾಗಿ ಈಭಾರಿಯಾದ್ರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಮ್ಯ ಬಂದು ಮತಚಲಾವಣೆ ಮಾಡ್ತಾರಾ ಎಂದು ಅಭಿಮಾನಿಗಳು, ಮಂಡ್ಯ ಗ್ರಾಮಸ್ಥರು ಕಾಯುತ್ತಿದ್ದಾರೆ.