ನಟಿ ರಮ್ಯಾ “ರಾ” ನಿರ್ಧಾರ !! ಆ ಮೂರು ರಾ ನಿರ್ಧಾರಗಳೇನು ಗೊತ್ತಾ ?

ರಾಜಕೀಯದಿಂದ ಅಂಬರೀಷ್ ನಿವೃತ್ತಿ ಬೆನ್ನಲ್ಲೆ, ಮಂಡ್ಯದಿಂದ ಮಾಜಿ ಸಂಸದೆ ರಮ್ಯಾ ಖಾಲಿ ಮಾಡುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಮಂಡ್ಯ ಕ್ಷೇತ್ರದ ಸಂಸದ ಸ್ಥಾನಕ್ಕೆ ರಮ್ಯಾ ಅವರೇ ಇನ್ನು ಮುಂದೆ ಕಾಂಗ್ರೆಸ್ ಅಭ್ಯರ್ಥಿ ಎಂಬಂತಹ ವಾತಾವರಣ ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ನಿರ್ಮಾಣವಾಗಿತ್ತು. ಈಗ ಮಂಡ್ಯ ಸಂಸದರಾಗಿದ್ದ ಪುಟ್ಟರಾಜು ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗಿದ್ದು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೂ ಕೂಡ ರಮ್ಯಾ ಮಂಡ್ಯಕ್ಕೆ ತಲೆ ಹಾಕದಿರುವುದು ರಮ್ಯಾ ಮಂಡ್ಯ ರಾಜಕಾರಣದಿಂದಲೇ ದೂರ ಸರಿಯುವುದರ ಜೊತೆಗೆ ಮಂಡ್ಯದಲ್ಲಿರುವ ತಮ್ಮ ಮನೆ ಖಾಲಿ ಮಾಡುತ್ತಿದ್ದಾರೆ ಎಂಬ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

ad

ಮಂಡ್ಯ ಸಂಸದರಾಗಿದ್ದ ಸಿ.ಎಸ್​.ಪುಟ್ಟರಾಜು ಮೇಲುಕೋಟೆ ಕ್ಷೇತ್ರದ ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗಿರುವುದರಿಂದ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಪುಟ್ಟರಾಜು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಾಜಿ ಸಂಸದೆ ರಮ್ಯಾ ಅವರು ಮಂಡ್ಯದಿಂದ ಮನೆ ಖಾಲಿ ಮಾಡುವುದರ ಜೊತೆಗೆ ಇನ್ನು ಮುಂದೆ ಮಂಡ್ಯ ಜಿಲ್ಲೆಯಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಚರ್ಚೆ ಮಂಡ್ಯ ಜಿಲ್ಲೆಯಾದ್ಯಂತ ಶುರುವಾಗಿದೆ. ಯಾಕಂದ್ರೆ ಮಂಡ್ಯ ಕ್ಷೇತ್ರದ ಸಂಸದ ಸ್ಥಾನಕ್ಕೆ ರಮ್ಯಾ ಅವರೇ ಇನ್ನು ಮುಂದೆ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ ಎಂಬಂತಹ ವಾತಾವರಣ ಕೆಲವು ವರ್ಷಗಳಿಂದ ನಿರ್ಮಾಣವಾಗಿತ್ತು. ಆದ್ರೆ ಮಂಡ್ಯ ಸಂಸದರ ಚುನಾವಣೆಯಲ್ಲಿ ಒಮ್ಮೆ ಗೆದ್ದು ಮತ್ತೊಮ್ಮೆ ಸೋತಿದ್ದ ರಮ್ಯಾ ಕಳೆದ ಒಂದೂವರೆ ವರ್ಷದಿಂದ ಮಂಡ್ಯ ಕಡೆ ತಲೆಹಾಕಿಲ್ಲ. ನೆಪಮಾತ್ರಕ್ಕೆ ಮಂಡ್ಯದಲ್ಲಿ ಮನೆ ಮಾಡಿದ್ರು ಅಲ್ಲಿ ಬಂದು ವಾಸ ಮಾಡ್ಲಿಲ್ಲ. ಹೀಗಾಗಿ ಈಗ ಮಂಡ್ಯ ಸಂಸದ ಸ್ಥಾನ ಖಾಲಿ ಇದೆ ಎಂದು ಚುನಾವಣೆಗೆ ನಿಂತ್ರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೆದರಿರುವ ರಮ್ಯಾ, ಮಂಡ್ಯ ರಾಜಕೀಯದಿಂದ ನಿವೃತ್ತಿ ಹೊಂದಲು ಚಿಂತನೆ ನಡೆಸಿದ್ದಾರೆ ಎಂಬ ಚರ್ಚೆ ಮಂಡ್ಯ ಜಿಲ್ಲೆಯಾದ್ಯಂತ ಶುರುವಾಗಿದೆ.

ರಮ್ಯಾ ಲೋಕಸಭಾ ಚುನಾವಣೆಯಿಂದ ನಿವೃತ್ತಿಯಾಗಲು ಮೂರು ರಾ ಗಳು ಕಾರಣವಂತೆ. ಒಂದು ಸ್ವತಹ ರಮ್ಯಾಗೆ ಚುನಾವಣೆ ಸ್ಪರ್ಧಿಸೋದು ಇಷ್ಟವಿಲ್ಲವಂತೆ. ಇನ್ನೊಂದು ಇತ್ತೀಚೆಗಷ್ಟೇ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಜೆಡಿಎಸ್ ಜಯಬೇರಿ ಬಾರಿಸಿದೆ. ಹೀಗಾಗಿ ಮಂಡ್ಯ ಕ್ಷೇತ್ರದ ಸಂಸದ ರಮ್ಯಾ ನಿಂತು ಸೋಲೋದು ಬೇಡ ಎಂದು ರಾಹುಲ್ ಹೇಳಿದ್ದಾರಂತೆ. ಮಂಡ್ಯ ರಾಜಕೀಯವೇ ವಿಚಿತ್ರವಾಗಿರೋದ್ರಿಂದ ಚುನಾವಣಾ ರಾಜಕೀಯ ನಿವೃತ್ತಿಯಾಗಲು ರಮ್ಯಾ ಬಯಸಿದ್ದರಿಂದ ಮಂಡ್ಯ ಕಡೆ ತಲೆಹಾಕುತ್ತಿಲ್ಲವಂತೆ ಮೇಡಂ, ಸದ್ಯ ಮಂಡ್ಯ ಬಿಡುವ ಆಲೋಚನೆಯಲ್ಲಿದ್ದಾರಂತೆ. ಹೀಗಾಗಿ ಸದ್ಯದಲ್ಲೇ ಮಂಡ್ಯದಲ್ಲಿ ಮಾಡಿರುವ ತಮ್ಮ ಮನೆಯನ್ನೂ ಕೂಡ ಖಾಲಿ ಮಾಡುತ್ತಾರೆ ಎಂಬ ಗಾಳಿಸುದ್ದಿ ಮಂಡ್ಯ ಜಿಲ್ಲೆಯಾದ್ಯಂತ ಹರಿದಾಡ್ತಿದೆ.

ಒಟ್ಟಾರೆ, ಮಂಡ್ಯ ಕ್ಷೇತ್ರದ ಎಂಪಿ ಉಪಚುನಾವಣೆಯಲ್ಲಿ ರಮ್ಯಾ ಸ್ಪರ್ಧಿಸುತ್ತಾರ? ಮಂಡ್ಯ ರಾಜಕೀಯದಿಂದಲೇ ರಮ್ಯಾ ನಿವೃತ್ತಿಯಾಗುತ್ತಾರ? ಎಂಬಂತಹ ಹಲವು ರೀತಿಯ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ. ಇವೆಲ್ಲ ಗೊಂದಲಗಳಿಗೂ ತೆರೆ ಎಳೆಯಬೇಕಾದ ರಮ್ಯಾ ಮೇಡಂ ಮಾತ್ರ ಮಂಡ್ಯ ಜಿಲ್ಲೆಯ ಕಡೆ ಬರುವ ಮನಸ್ಸು ಮಾಡದೇ ಇರೋದು ಮತ್ತಷ್ಟು ಗಾಸಿಪ್ ಗೆ ಕಾರಣವಾಗಿದೆ.