ಸರ್ಕಾರ ಅಸ್ಥಿರಗೊಳಿಸಲು ಮೋದಿ,ಶಾ ಸರ್ಕಸ್​! CLP ಸಭೆ ಬಳಿಕ ಬಿಜೆಪಿ ವಿರುದ್ಧ ಸಿದ್ಧರಾಮಯ್ಯ ಗುಡುಗು!!

ವಿಧಾನಸೌಧದಲ್ಲಿ ಮಹತ್ವದ ಸಿಎಲ್​ಪಿ ಸಭೆ ಬಳಿಕ ಮಾಜಿ ಸಿಎಂ ಹಾಗೂ ಸಿಎಲ್​ಪಿ ನಾಯಕ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸತತವಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದು, 6 ನೇ ಬಾರಿ ಕೂಡ ಬಿಜೆಪಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದು, ಈ ಸಲದ ಪ್ರಯತ್ನದಲ್ಲಿ ಮೋದಿ ಹಾಗೂ ಶಾ ಕೂಡ ಭಾಗಿಯಾಗಿದ್ದಾರೆ ಎಂದು ಸಿದ್ಧು ಆರೋಪಿಸಿದ್ದಾರೆ.

ad


ಕೇಂದ್ರದ ಮೋದಿ ಹಾಗೂ ಶಾ ಸೂಚನೆಯಂತೆ ರಾಜ್ಯದ ಬಿಜೆಪಿ ನಾಯಕರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಇದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಜನಾಧೇಶದ ವಿರುದ್ಧ ಬಿಜೆಪಿ ವರ್ತಿಸುತ್ತಿದೆ ಎಂದು ಸಿದ್ಧರಾಮಯ್ಯ ಆರೋಪಿಸಿದ್ದಾರೆ.


ಬಿಜೆಪಿ ನಾಯಕರು ಕಾಂಗ್ರೆಸ್​ ಶಾಸಕರಿಗೆ ಭಾರಿ ಮೊತ್ತದ ಹಣ ಹಾಗೂ ಸಚಿವ ಸ್ಥಾನದ ಆಮಿಷ ಒಡ್ಡುತ್ತಿದ್ದಾರೆ. ಹಾಗಾದ್ರೆ ಬಿಜೆಪಿಯವರ ಬರಿ ಇಷ್ಟೊಂದು ಎಲ್ಲಿಂದ ಬಂತು, ಯಾರು ಕೊಟ್ಟರು? ಹಾಗಿದ್ದರೇ ಇದು ಅಕ್ರಮ ಹಣ ಅಲ್ಲವೇ? ಹಣ ಹಾಗೂ ಪೊಲಿಟಿಕಲ್​ ಶಕ್ತಿಯನ್ನು ಬಳಸಿ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿದ್ಧು ಗುಡುಗಿದ್ದಾರೆ.


ಈಗಲೂ ನಾನು ನಮ್ಮ ಶಾಸಕರಿಗೆ ವಾಪಸ ಬರುವಂತೆ ಆಹ್ವಾನಿಸುತ್ತೇನೆ. ಬಿಜೆಪಿಯ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ. ಅಲ್ಲದೇ ಸಭೆಯಲ್ಲಿ ಮುಂಬರುವ ಅಧಿವೇಶನ ಹಾಗೂ ಇಂದು ಬಿಜೆಪಿ ವರ್ತನೆ ಖಂಡಿಸಿ ಗಾಂಧಿಪ್ರತಿಮೆ ಬಳಿ ಪ್ರತಿಭಟನೆ ನಡೆಸುವುದಾಗಿಯೂ ಸಿದ್ಧು ಹೇಳಿದ್ದಾರೆ.