ರೈತ ಆತ್ಮಹತ್ಯೆಗೆ ಶರಣಾದ್ರೂ ಮಂಡ್ಯಕ್ಕೆ ಬರಲಿಲ್ಲ ಸ್ವಾಭಿಮಾನಿಗಳು! ವೋಟು ಹಾಕಿ ಕೆಟ್ಟವರ ಕಣ್ಣೀರು ಒರೆಸಿದ ಸಿಎಂ ಕುಮಾರಸ್ವಾಮಿ!!

ಮಂಡ್ಯದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡು ಒಂದು ದಿನ ಕಳೆದ್ರೂ ಬಣ್ಣ -ಬಣ್ಣದ ಮಾತುಗಳನ್ನಾಡಿ ಮತ ಪಡೆದ ಸ್ವಾಭಿಮಾನಿಗಳ್ಯಾರು ಮಂಡ್ಯದತ್ತ ಮುಖ ಮಾಡಿಲ್ಲ. ಆದರೆ ಮತ ಹಾಕದಿದ್ದರೂ ಮಂಡ್ಯದ ಜನರತ್ತ ಅಪಾರ ಪ್ರೀತಿ ಉಳಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಮೃತನ ನಿವಾಸಕ್ಕೆ ಭೇಟಿ ನೀಡಿ ಪರಿಹಾರ ವಿತರಿಸಿದ್ದು, ಮಂಡ್ಯದ ಜನರು ಸಿಎಂ ಬಿಟ್ಟು ಬೇರೆಯವರ ಮಾತಿಗೆ ಮರುಳಾಗಿ ಕೆಟ್ರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ad


ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯದ ಜನ ಬಣ್ಣದ ಜನರ ಹಿಂದೆ ಹೋಗಿದ್ದೇ ಹೋಗಿದ್ದು. ನಮ್ಮನ್ನು ಆರಿಸಿದ್ರೆ 24 ಗಂಟೆಯೂ ಮಂಡ್ಯದ ಜನರ ಜೊತೆ ಇರ್ತೇವೆ ಎಂದವರು ಈಗ ನಾಪತ್ತೆ. ನಿನ್ನೆ ಮಂಡ್ಯದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಂಡ್ಯದ ರೈತರಿಗೆ ಮಾತುಗಳಲ್ಲೇ ಸ್ವರ್ಗ ತೋರಿಸಿದ್ದ ಯಾರು ಕೂಡ ರೈತನ ಮನೆಯತ್ತ ಸುಳಿಯಲಿಲ್ಲ.

ಇಂದು ಮುಂಜಾನೆ ಜಿಲ್ಲಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರ ಮಂಡ್ಯಕ್ಕೆ ತೆರಳಿ, ರೈತರಿಗೆ ಧೈರ್ಯ ತುಂಬಿದ್ರು. ಮಂಡ್ಯದ ಜನ ತನ್ನ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನ ಸೋಲಿಸಿದ್ದಾರೆ ಎಂಬುದನ್ನು ಮರೆತು ಬಿಟ್ಟಿರುವ ಎಚ್.ಡಿ.ಕುಮಾರಸ್ವಾಮಿ ಮಂಡ್ಯದ ಜನರಿಗೆ ಆತ್ಮವಿಶ್ವಾಸ ತುಂಬಿಸಿದ್ರು.

ಸುರೇಶ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಸರ್ಕಾರದ ಪರವಾಗಿ 5 ಲಕ್ಷ ರೂಪಾಯಿ ಚೆಕ್ ವಿತರಿಸಿ ಧೈರ್ಯ ತುಂಬಿದ್ರು. ಯಾವುದೇ ಕಾರಣಕ್ಕೂ ಯಾರು ಕೂಡ ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮ್ಮ ಜೊತೆ ನಾನೀದ್ದೀನಿ ಅಂದ್ರು. ಮುಖ್ಯಮಂತ್ರಿಯ ಮಾನವೀಯ ಕಳಕಳಿ ಕಂಡ ಜನರ ಕಣ್ಣಾಲಿಗಳು ತುಂಬಿದವು. ಚುನಾವಣೆ ಸಂದರ್ಭದಲ್ಲಿ ನಾವು ನಿಮ್ಮ ಜೊತೆ ನಿಲ್ಲಬೇಕಿತ್ತು ಎಂದು ಕೆಲ ರೈತರು ಪಶ್ಚಾತಾಪ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.


ಮತ್ತೊಂದೆಡೆ ಮಂಡ್ಯದಲ್ಲಿ ಈವರೆಗೂ ಕಂಡಿರದ ನೀರಿನ ಅಭಾವ ಪ್ರಾರಂಭವಾಗಿದೆ. ಕೆರೆಕಟ್ಟೆಗಳು ಒಣಗಲಾರಂಭಿಸಿದೆ. ಆದರೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಿಂಚಿದವರು ನಾಪತ್ತೆಯಾಗಿದ್ದು, ಜನರ ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ ಮಂಡ್ಯ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ.

ಮಂಡ್ಯ ಜನರ ಈ ಸಂಕಷ್ಟ ನೀಗಿಸಲು ಕೆರೆಗಳನ್ನು ತುಂಬಲು 200 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ತರಲು ಸಿಎಂ ಅನುಮೋದನೆ ನೀಡಿದ್ದು, ಈ ವಿಚಾರವನ್ನು ಇಂದು ರೈತರೊಂದಿಗೆ ಹಂಚಿಕೊಂಡು ಧೈರ್ಯ ತುಂಬಿದ್ದಾರೆ.