ಪೋಟೋಶೂಟ್​​ ಬಳಿಕ ನನ್ನ ಜೊತೆ ಮಲಗು ಎಂದ ಪೋಟೋಗ್ರಾಫರ್​​! ಬೆಚ್ಚಿಬಿದ್ದು ಪೊಲೀಸರ ಮೊರೆ ಹೋದ ನಟಿ!!

ಸ್ಯಾಂಡಲವುಡ್​, ಬಾಲಿವುಡ್​ ಹೀಗೆ ಎಲ್ಲೆಡೆಯೂ ಇತ್ತೀಚಿಗೆ ಮೀ ಟೂ ಹಾಗೂ ಕಾಸ್ಟಿಂಗ್​ ಕೌಚ್​ ಆರೋಪ ಕೇಳಿಬರುತ್ತಿದೆ. ಈಗಾಗಲೇ ಹಲವು ನಟಿಯರು ತಾವು ಅವಕಾಶ ಕೇಳಿಕೊಂಡು ಹೋದಾಗ ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರುವ ಬೆನ್ನಲ್ಲೇ, ಈಗ ರಷ್ಯ ಮೂಲದ ನಟಿಯೊಬ್ಬರು ಕೂಡ ಪೋಟೋಗ್ರಾಫರ್​ ಮೇಲೆ ಬ್ಲಾಕ್​ಮೇಲ್​ ಆರೋಪ ಹೊರಿಸಿದ್ದಾರೆ.

ad

ಇತ್ತೀಚಿಗೆ ಬಿಡುಗಡೆಯಾದ ಕಾಂಚನಾ-3 ಸಿನಿಮಾದಲ್ಲಿ ನಾಲ್ಕು ನಟಿಯರು ಅಭಿನಯಿಸಿದ್ದರು. ವೇದಿಕಾ,.ಓವಿಯಾ,ನಿಕ್ಕಿ ತಂಬೋಲಿ ಹಾಗೂ ರಷ್ಯಾ ಹುಡುಗಿ ರಿ ಡಜ್ವಿ ಅಲೆಕಾಂಡ್ರಾ ಹಿರೋಯಿನ್ ಆಗಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ರಿ ಡಜ್ವಿ ಅಲೆಕ್ಸಾಂಡ್ರಾ ಪೋಟೋಗ್ರಾಫರ್​ ಒಬ್ಬರ ವಿರುದ್ಧ ಬ್ಲಾಕ್​ಮೇಲ್​ ಆರೋಪ ಮಾಡಿದ್ದಾರೆ.

ರಿ ಡಿಜ್ವಿ ಅಲೆಕ್ಸಾಂಡ್ರಾ ಪಬ್​ನಲ್ಲಿ ಪೋಟೋಗ್ರಾಫರ್​​ ರೂಪೇಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ರೂಪೇಶ್ ಕುಮಾರ್ ರಿ ಡಿಜ್ವಿ ಅವರಿಗೆ ನಿಮ್ಮ ಪೋಟೋಶೂಟ್​ ಮಾಡೋಣ. ನನಗೆ ತುಂಬ ಸಿನಿಮಾದವರು ಪರಿಚಯ ಇದ್ದಾರೆ. ನಿಮಗೆ ಅವಕಾಶ ಕೊಡಿಸುತ್ತೇನೆ ಎಂದಿದ್ದರು ಎನ್ನಲಾಗಿದೆ.


ಆದರೆ ರಷ್ಯಾ ಹುಡುಗಿಯನ್ನು ಹೊಟೇಲ್​ಗೆ ಕರೆದುಕೊಂಡು ಹೋಗಿ ಪೋಟೋಶೂಟ್​ ಮಾಡಿಸಿದ ಮೇಲೆ ರೂಪೇಶ್ ಕುಮಾರ್ ಆಕೆಗೆ ಬ್ಲಾಕ್​ಮೇಲ್ ಮಾಡಲು ಆರಂಭಿಸಿದ್ದು, ನನ್ನ ಜೊತೆ ಮಲಗು. ಇಲ್ಲ ಕಾಂಪ್ರಮೈಸ್​ ಆಗು. ಇಲ್ಲದಿದ್ದರೇ ನಿನ್ನ ಪೋಟೋ ಮಾರ್ಪಿಂಗ್ ಮಾಡುತ್ತೇನೆ ಎಂದು ಬೆದರಿಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ರಿಡಿಜ್ವಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೂಪೇಶ್ ಕುಮಾರ್ ಪೋನ್ ಪರಿಶೀಲಿಸಿದ ವೇಳೆ ರಿಡಿಜ್ವಿ ಆರೋಪ ನಿಜ ಎಂಬುದು ಸಾಬೀತಾಗಿದೆ. ಹೀಗಾಗಿ ಪೊಲೀಸರು ರೂಪೇಶ್ ಕುಮಾರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟಿನಲ್ಲಿ ಕಾಲಿವುಡ್​ನಲ್ಲಿ ಮತ್ತೊಂದು ಕಾಸ್ಟಿಂಗ್ ಕೌಚ್​​​ ಸದ್ದು ಮಾಡ್ತಿರೋದು ಮಾತ್ರ ದುರಂತವೇ ಸರಿ.