ವೀರ ಯೋಧ ವಿಂಗಕಮಾಂಡರ್ : ಅಭಿನಂದನ್ ಗೆ ಸೆಲ್ಯೂಟ್..

ಪಾಕಿಸ್ತಾನದ ಸೆರೆಯಲ್ಲಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಈಗಾಗಲೇ ಪಾಕ್ ವಿದೇಶಾಂಗ ಸಚಿವ ಮಹೊಮ್ಮದ್ ಖುರೇಶಿ , ಗಡಿಯಲ್ಲಿ ಪರಿಸ್ಥಿತಿ ತಿಳಿಗೊಂಡಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಶೀರ್ಘವೇ ಭಾರತಕ್ಕೆ ಕಳುಹಿಸುವುದಾಗಿ ಹೇಳಿದ್ದಾರೆ. ವಿಂಗ ಕಮಾಂಡರ್ ಅಭಿನಂದನ್ ಆರೋಗ್ಯ ಕ್ಷೇಮವಾಗಿದ್ದು, ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅಧಿಕೃತ ಮಾಹಿತಿ ನೀಡಿದ್ದಾರೆ.

ಫೆ.14ರ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಫೆಬ್ರವರಿ 26ರಂದು ಭಾರತೀಯ ವಾಯುಸೇನೆಯು ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸ ಮಾಡಿ ಯಶಸ್ವಿಯಾಗಿ ಹಿಂದಿರುಗಿತ್ತು.
ಭಾರತೀಯ ವಾಯಸೇನೆಯ ಏರ್ ಸ್ಟ್ರೈಕ್ ಬಳಿಕ ಪಾಕಿಸ್ತಾನ ಮತ್ತು ಭಾರತ ನಡುವೆ ಯುದ್ಧದ ಕಾರ್ಮೋಡ ಆವರಿಸಿತ್ತು. ಪರಿಣಾಮ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಫೆಬ್ರವರಿ 27ರಂದು ವಾಯು ಗಸ್ತು ತಿರುಗಾಟ ಆರಂಭವಾಗಿತ್ತು.

ಈ ಕಾರ್ಯಾಚರಣೆಯಲ್ಲಿ ನಿವೃತ್ತ ಏರ್​​ ಮಾರ್ಷಲ್​​ ಸಿಂಹಕುಟ್ಟಿ ವರ್ಧಮಾನ್​​​ ರವರ ಪುತ್ರ ಐಎಎಫ್​​​ ವಿಂಗ್​​ ಕಮಾಂಡರ್​​ ಅಭಿನಂದನ್​​​​​​​ ವರ್ಧಮಾನ್​​​ ಕೂಡಾ ಇದ್ದರು. ಭಾರತೀಯ ಯುದ್ಧವಿಮಾನ ಮಿಗ್-21 ಹಾರಿಸುತ್ತಿದ್ದ ಅಭಿನಂದನ್ ವರ್ತಮಾನ್ ಪಾಕಿಸ್ತಾನ ಯುದ್ಧವಿಮಾನ ಎಫ್-16 ಅನ್ನು ಬೆನ್ನಟ್ಟಿ ಹೋಗುತ್ತಿದ್ದರು. ಆದರೆ ಭಾರತದ ಇನ್ನೊಂದು ಯುದ್ಧವಿಮಾನ ಸುಖೋಯ್ , ಎಫ್-16 ಅನ್ನು ಹೊಡೆದುರುಳಿಸಿತು. ಅಷ್ಟರಲ್ಲಿ ಅಭಿನಂದನ್ ಹಾರಿಸುತ್ತಿದ್ದ ಮಿಗ್-21 ಅನ್ನು ಭಾರತ ಗಡಿದಾಟಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿತ್ತು. ಈ ವೇಳೆ ಪಾಕಿಸ್ತಾನ ಕಡೆಯಿಂದ ಕ್ಷಿಪಣಿಯೊಂದು ಬಂದು ಮಿಗ್-21 ಗೆ ಬಡಿಯಿತು. ಈ ವೇಳೆ ಅಭಿನಂದನ್ ಪ್ಯಾರಾಚೂಟ್ ಮೂಲಕ ಕೆಳಗೆ ಜಿಗಿದಿದ್ದಾರೆ .ಆಗ ಅಲ್ಲಿನ ಜನತೆ ಅಭಿನಂದನ್ ರನ್ನು ಹಿಡಿದು ಚೆನ್ನಾಗಿ ಥಳಿಸಿದ್ದು ಈ ವೇಳೆ ಅಲ್ಲಿಗೆ ಬಂದ ಪಾಕ್ ಸೇನೆ ಅಭಿನಂದನ್ ರನ್ನು ತಮ್ಮ ವಶಕ್ಕೆ ಪಡೆದರು.


ಇದೀಗ ದೇಶಾದ್ಯಂತ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಬರಲಿ ಎಂಬ ಕೂಗು ಜೋರಾಗಿದೆ. ಇದೇ ವೇಳೆ ಪಾಕಿಸ್ತಾನದಲ್ಲೂ ಸಹ ಸ್ಥಳೀಯರು ಸಾಮಾಜಿಕಾ ಜಾಲತಾಣಗಳಲ್ಲಿ ಅಭಿನಂದನ್ ರನ್ನು ಭಾರತಕ್ಕೆ ಕಳುಹಿಸಿ ಎಂಬ ಸಂದೇಶಗಳನ್ನು ಹಾಕುವ ಒತ್ತಡ ಹೇರಿದ್ದಾರೆ.